ETV Bharat / state

ನಿರುಪಯುಕ್ತ ಪ್ಲಾಸ್ಟಿಕ್‌ ಬಳಸಿ ರಸ್ತೆ ನಿರ್ಮಿಸಲು ಮುಂದಾದ ಬೆಳಗಾವಿ ಪಾಲಿಕೆ

ಬೆಳಗಾವಿ ಮಹಾನಗರ ಪಾಲಿಕೆಯು ನಿರುಪಯುಕ್ತ ಪ್ಲಾಸ್ಟಿಕ್​ ಬಳಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಇದು ಮೊದಲ ಪ್ರಯೋಗ.!

Etv Bharat
Etv Bharat
author img

By ETV Bharat Karnataka Team

Published : Dec 28, 2023, 6:21 PM IST

ನಿರುಪಯುಕ್ತ ಪ್ಲಾಸ್ಟಿಕ್‌ ಬಳಸಿ ರಸ್ತೆ ನಿರ್ಮಾಣಕ್ಕೆ ಮುಂದಾದ ಪಾಲಿಕೆ: ರಾಜ್ಯದಲ್ಲೇ ಪ್ರಥಮ ಪ್ರಯೋಗ

ಬೆಳಗಾವಿ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಿರುಪಯುಕ್ತ ಪ್ಲಾಸ್ಟಿಕ್​ಗಳನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡಲು ಬೆಳಗಾವಿ ಮಹಾನಗರ ಪಾಲಿಕೆ ಮುಂದಾಗಿದೆ. ಏಕ ಬಳಕೆ ಪ್ಲಾಸ್ಟಿಕ್‌ ಬಳಕೆಗೆ ನಿಷೇಧವಿದ್ದರೂ ಕೆಲವೆಡೆ ಇವುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಈಗಾಗಲೇ ಬಳಸಿ‌ ಬಿಸಾಡಿರುವ ಪ್ಲಾಸ್ಟಿಕ್​ಗಳು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ. ಇವೆಲ್ಲದಕ್ಕೂ ಕಡಿವಾಣ ಹಾಕಲು ಪ್ಲಾಸ್ಟಿಕ್​ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

ಪ್ಲಾಸ್ಟಿಕ್ ಬಳಸಿ ಬೆಳಗಾವಿ ಪಾಲಿಕೆ ಕಚೇರಿ ಮುಂಭಾಗದ ಅಶೋಕ ನಗರದ 200 ಮೀಟರ್ ರಸ್ತೆ ನಿರ್ಮಿಸಲು ಕಳೆದ ವಾರ ನಡೆದ ಲೋಕೋಪಯೋಗಿ ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ಮಾಡಲಾಗುವುದಿಲ್ಲ. 1,700 ಕೆ.ಜಿ ಬಿಟುಮೆನ್ (ಡಾಂಬರ್​) ಮತ್ತು 500 ಕೆ.ಜಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಬಿಟುಮೆನ್‌ನಲ್ಲಿ (ಡಾಂಬರ್) ಬಳಸುವ ಪ್ಲಾಸ್ಟಿಕ್‌ ಅನುಪಾತವು ಸುಮಾರು ಶೇ.8ರಷ್ಟು ಇರುತ್ತದೆ. ಮುಂದಿನ ವಾರ ಈ ಪ್ರಾಯೋಗಿಕ ರಸ್ತೆಗೆ ನಗರಾಭಿವೃದ್ಧಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಪರಿಸರ ವಿಭಾಗದ ಎಇಇ ಹಣಮಂತ ಕಲಾದಗಿ ಅವರು, "ಪ್ಲಾಸ್ಟಿಕ್​ ಬಳಸಿ ಮಾಡುವ ರಸ್ತೆ ಹೆಚ್ಚು ಬಾಳಿಕೆ ಬರುತ್ತದೆ. ಮಳೆಗಾಲದಲ್ಲಿ ಬೇಗ ಹದಗೆಡುವುದಿಲ್ಲ. ಇದು ಯಶಸ್ವಿಯಾದರೆ ನಗರದಲ್ಲಿ ನಿರ್ಮಾಣ ಮಾಡಲಾಗುವ ರಸ್ತೆಗಳಲ್ಲಿ ಶೇ.8ರಷ್ಟು ಪ್ಲಾಸ್ಟಿಕ್ ಬಳಸಲು ನಿರ್ಣಯ ಕೈಗೊಳ್ಳಲಾಗಿದೆ" ಎಂದರು.

ಪರಿಸರ ಹಾನಿಗೆ ತಡೆ: "ಪ್ಲಾಸ್ಟಿಕ್ ಅ​ನ್ನು ಹಾಗೆಯೇ ಬಿಟ್ಟರೆ ಪರಿಸರಕ್ಕೆ ಹಾನಿಯಾಗುತ್ತದೆ. ಇದನ್ನು ಈ ರೀತಿ ಮರು‌ಬಳಕೆ ಮಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್​ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ಮೈಸೂರಿನಲ್ಲಿ ಟೈಲ್ಸ್ ಮಾಡಲಾಗಿತ್ತು. ನಾವು ಇಲ್ಲಿ ರಸ್ತೆ ಮಾಡುತ್ತಿದ್ದೇವೆ" ಎಂದು ಹೇಳಿದರು.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಈಗಾಗಲೇ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ಮಾಡಲಾಗಿದೆ. 80 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್​ಗಳನ್ನು ಮರುಬಳಕೆ ಮಾಡುವುದು ತುಂಬಾ ಕಷ್ಟ. ಈ ಪ್ಲಾಸ್ಟಿಕ್ ಅನ್ನು ಸ್ರೆಡ್ಡಿಂಗ್‌ ಮೆಷಿನ್​ ಮೂಲಕ ಪುಡಿ ಮಾಡಿ ಬಳಿಕ ಪ್ಲಾಸ್ಟಿಕ್ ಪುಡಿ, ಡಾಂಬರ್ ಬಳಸಿ ರಸ್ತೆ ಕೆಲಸ ನಡೆಯುತ್ತದೆ.

ಲೋಕೋಪಯೋಗಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ವಾಣಿ ಜೋಶಿ ಮಾತನಾಡಿ, "ಪ್ಲಾಸ್ಟಿಕ್ ಬಳಕೆಯಿಂದ ರಸ್ತೆ ಕಾಮಗಾರಿ ವೆಚ್ಚ ಕಡಿಮೆಯಾಗುತ್ತದೆ. ಪ್ಲಾಸ್ಟಿಕ್​ ಬಳಕೆಯಿಂದ ರಸ್ತೆ ಬಾಳಿಕೆ ಹೆಚ್ಚಲಿದೆ. ಪಾಲಿಕೆ ವತಿಯಿಂದ ವಿನೂತನ ಯೋಜನೆ ಆರಂಭಿಸುತ್ತಿರುವುದಕ್ಕೆ ತುಂಬಾ ಖುಷಿ ಇದೆ" ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಪ್ರತಿಕ್ರಿಯಿಸಿ, "ಬೆಳಗಾವಿ ನಗರವನ್ನು ಸ್ವಚ್ಛ, ಸುಂದರ, ಹಸಿರು ಮತ್ತು ತ್ಯಾಜ್ಯಮುಕ್ತ ಮಾಡುವುದು ನಮ್ಮ ಉದ್ದೇಶ. ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು 5 ಟನ್ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಇದನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುತ್ತೇವೆ. ಇದು ಭವಿಷ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಅಂತ್ಯ ಹಾಡಲಿದೆ. ಈ ಪರಿಕಲ್ಪನೆ ಅಳವಡಿಸಿಕೊಂಡ ಮೊದಲ ನಗರ ಬೆಳಗಾವಿ" ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ಲಾಸ್ಟಿಕ್​ನಿಂದ ಟೈಲ್ಸ್ ತಯಾರಿಕೆ: ಪಾಲಿಕೆಯ ಕಸ ಸಂಗ್ರಹಣ ಘಟಕದಲ್ಲಿ ಹೊಸ ಪ್ರಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.