ETV Bharat / state

ಮೂರು ರಾಜ್ಯಗಳ ಸೋಲಿನ ಬಳಿಕ ಕೈ ಶಾಸಕರಿಗೆ ಅಭದ್ರತೆ: ಆರ್.ಅಶೋಕ್ - ಕಾಂಗ್ರೆಸ್ ಸರ್ಕಾರ ಪತನ

R Ashok pro statement about HDK statement: ಪ್ರಭಾವಿ ಸಚಿವರೊಬ್ಬರು 50- 60 ಮಂದಿ ಶಾಸಕರನ್ನು ಕರೆದುಕೊಂಡು ಪಕ್ಷದಿಂದ ಹೊರಬರಲಿದ್ದು, ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

Opposition leader R Ashok
ವಿಪಕ್ಷ ನಾಯಕ ಆರ್​ ಅಶೋಕ್​
author img

By ETV Bharat Karnataka Team

Published : Dec 11, 2023, 3:37 PM IST

Updated : Dec 11, 2023, 5:45 PM IST

ವಿಪಕ್ಷ ನಾಯಕ ಆರ್​ ಅಶೋಕ್​

ಬೆಳಗಾವಿ: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕೈ ಎಂಎಲ್​ಎಗಳಿಗೆ ಅಭದ್ರತೆ ಇದೆ. ಹೆಚ್​ಡಿಕೆ ಅವರು ಸರಿಯಾದ ದಾಖಲೆ ಹಾಗೂ ಮಾಹಿತಿ ಇಟ್ಟುಕೊಂಡೇ ಮಾತನಾಡುತ್ತಾರೆ ಎಂದು ಹೆಚ್​ಡಿಕೆ ಅವರ ಶೀಘ್ರದಲ್ಲೇ ಕಾಂಗ್ರೆಸ್​ ಸರ್ಕಾರ ಪತನವಾಗುತ್ತದೆ, ಪ್ರಭಾವಿ ಸಚಿವರೊಬ್ಬರು 50- 60 ಮಂದಿ ಶಾಸಕರ ಕರೆದುಕೊಂಡು ಕಾಂಗ್ರೆಸ್​ನಿಂದ ಹೊರಗೆ ನಡೆಯುತ್ತಾರೆ ಎನ್ನುವ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ಪೂರಕವಾಗಿ ಪ್ರತಿಕ್ರಿಯೆ ನೀಡಿದರು.

ಸುವರ್ಣಸೌಧಲ್ಲಿ ಮಾತನಾಡಿದ ಅವರು, ಹೆಚ್​ಡಿಕೆಗೆ ಸರ್ಕಾರ ಮಾಡಿರೋದು ಗೊತ್ತಿದೆ, ಬಿದ್ದಿರೋದು ಗೊತ್ತಿದೆ. ಕುಮಾರಸ್ವಾಮಿ ಸರ್ಕಾರ ನಡೆಸಿಯೂ ಗೊತ್ತಿದೆ. ಅವರ ಹೇಳಿಕೆಯಲ್ಲಿ ಸರಿಯಾದ ದಾಖಲೆ, ಮಾಹಿತಿ ಇರುತ್ತದೆ. ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಶಾಸಕರಿಗೆ ಅನುದಾನ ಕೊಟ್ಟಿಲ್ಲ, ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಎರಡು ಸಾವಿರ ಕೊಡುತ್ತೇವೆ ಎಂದು ಮೊಸಳೆ ಕಣ್ಣೀರು ಹಾಕಿದ್ದಾರೆ. ಇವೆಲ್ಲವೂ ಕುಮಾರಸ್ವಾಮಿ ‌ಹೇಳಿಕೆಗೆ ಲಿಂಕ್ ಆಗ್ತಿದೆ ಎಂದು ಹೇಳಿದರು.

ಬುಧವಾರ ಪ್ರತಿಭಟನೆ: ಬುಧವಾರ ಸಂಜೆ ಬೆಳಗಾವಿಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬರ, ಜಮೀರ್ ಅವರ ಸ್ಪೀಕರ್ ಬಗೆಗಿನ ಹೇಳಿಕೆ ಹಾಗೂ ಡಿಕೆಶಿ ಕೇಸ್ ವಾಪಸ್ ವಿಚಾರವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಮಂಗಳವಾರ ಬಿಜೆಪಿ ಶಾಸಕಾಂಗ ಸಭೆ: ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇವೆ. ಮುಂದಿನ ನಡೆ ಬಗ್ಗೆ ಈ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸದನದಲ್ಲಿ ಯಾವ ವಿಚಾರದ ಬಗ್ಗೆ ಪ್ರಸ್ತಾಪ ಮಾಡಬೇಕು ಎಂದು‌ ಜೆಡಿಎಸ್ ಜೊತೆಯೂ ಚರ್ಚೆ ಮಾಡಿದ್ದೇವೆ. ಬರಗಾಲದ ಕುರಿತು ಚರ್ಚೆ ಆಗಿದೆ. ಉ.ಕ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ. ಭ್ರೂಣಹತ್ಯೆ ಬಗ್ಗೆ ಚರ್ಚೆಗೆ ನಿಲುವಳಿ ಸೂಚನೆ ಕೊಟ್ಟಿದ್ದೇವೆ. ಜಮೀರ್ ಅಹ್ಮದ್ ಬಿಜೆಪಿ ಶಾಸಕರಿಗೆ ಅವಮಾನ ಮಾಡಿದ ವಿಚಾರವನ್ನು ಇವತ್ತು ಹಾಗೂ ನಾಳೆ ತೆಗೆದುಕೊಳ್ಳಲಿದ್ದೇವೆ‌ ಎಂದರು.

ಡಿಕೆಶಿ ಮೇಲೆ ಸಿಬಿಐ ಕೇಸ್ ವಾಪಸ್​​ ತೆಗೆದುಕೊಂಡಿರುವ ಬಗ್ಗೆ ಚರ್ಚೆ ಮಾಡಬೇಕು. ಈ ಬಗ್ಗೆ ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಿದ್ದೇವೆ. ಉ.ಕ ಅಭಿವೃದ್ದಿ ಬಗ್ಗೆ ಚರ್ಚೆಗೆ ಸ್ಪೀಕರ್ ಅವಕಾಶ ಕೊಡ್ತೀನಿ ಎಂದಿದ್ದಾರೆ ಎಂದರು.

ಸರ್ಕಾರಕ್ಕೆ ಚಳಿ - ಜ್ವರ ಬಿಡಿಸಲು‌ ಹೋರಾಟ ಮಾಡಿದ್ದೇವೆ. ಎಲ್ಲ ಹಿರಿಯರು ಹಾಗೂ ರಾಜ್ಯದ ಅಧ್ಯಕ್ಷರ ಜೊತೆ ಚರ್ಚೆ ಮಾಡಿ ಧರಣಿ ಮಾಡಿದ್ದೇವೆ.‌ ಕಬ್ಬು ಬೆಳೆಗಾರರ ಸಮಸ್ಯೆ, ಉತ್ತರ ಕರ್ನಾಟಕದ ಜನರಿಗೆ ಆದ ಅನ್ಯಾಯದ ಬಗ್ಗೆ ಚರ್ಚೆಗೆ ಯತ್ನಾಳ್ ಬೇಡಿಕೆ ಇಟ್ಟಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದುಕೊಂಡು ಹೆಜ್ಜೆ ಇಡುತ್ತೇವೆ. ಉಪ ನಾಯಕ ಹಾಗೂ ವಿಪ್ ಇದ್ದಿದ್ದರೆ ಈ ರೀತಿ ಆಗ್ತಿರಲಿಲ್ಲ. ಸಣ್ಣ ವಿಚಾರ ಅದರಲ್ಲಿ ಏನೂ ಗೊಂದಲ ಇಲ್ಲ ಎಂದರು.

ಲೋಕಸಭೆ ಚುನಾವಣೆಗೆ ಹಣ ಕೂಡಿಟ್ಟಿರಬಹುದು: ಜಾರ್ಖಂಡ್ ಸಂಸದ, ರಾಹುಲ್ ಗಾಂಧಿ ಅತ್ಯಾಪ್ತ, ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ ಎಂದು ಸಂಸತ್​ಗೆ ಸೈಕಲ್​ನಲ್ಲಿ ಹೋಗಿದ್ರು. ಅವರ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಒಬ್ಬ ವ್ಯಕ್ತಿಯ ಮನೆಯಲ್ಲಿ ಇಷ್ಟು ಮೊತ್ತದ ಹಣ ಕ್ಯಾಶ್ ರೂಪದಲ್ಲಿ ಸಿಕ್ಕಿರುವುದು ದೇಶದ ಇತಿಹಾಸದಲ್ಲಿ ಮೊದಲ ಬಾರಿಯಾಗಿದೆ. ಇಷ್ಟೊಂದು ಹಣ ಲೋಕಸಭೆ ಚುನಾವಣೆಗೆ ಕೂಡಿಟ್ಟಿರುವ ಹಾಗೇ ಕಾಣುತ್ತಿದೆ. ಕಾಂಗ್ರೆಸ್ ಎಲ್ಲ ವಿಚಾರವಾಗಿ ಟ್ವೀಟ್ ಮಾಡುತ್ತಾರೆ. ಆದರೆ, ಈ ಬಗ್ಗೆ ಟ್ವೀಟ್ ಮಾಡೇ ಇಲ್ಲ ಎಂದರು.

ಇದನ್ನೂ ಓದಿ: ಸದನದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಪ್ರಸ್ತಾಪ ಬಂದರೆ ಚರ್ಚಿಸುತ್ತೇವೆ: ಡಿಸಿಎಂ ಡಿಕೆಶಿ

Last Updated : Dec 11, 2023, 5:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.