ETV Bharat / state

Ramesh Jarakiholi ಲೋಕಸಭೆ ಚುನಾವಣೆಯವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ, ಆಮೇಲೆ ಕೈ ಕೊಡ್ತಾರೆ : ರಮೇಶ್ ಜಾರಕಿಹೊಳಿ - ಗ್ಯಾರಂಟಿ ವಿಚಾರ

ಅಥಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ: ಮಹೇಶ ಕುಮಠಳ್ಳಿ ಸೋಲಿನ ಬಗ್ಗೆ ರಮೇಶ್ ಜಾರಕಿಹೊಳಿ ಪರಾಮರ್ಶೆ ನಡೆಸಿದರು. ಈ ವೇಳೆ ಮಾತನಾಡಿ, ಅಥಣಿ ಶಾಸಕ ಲಕ್ಷ್ಮಣ್ ಸವದಿ ಅಭಿವೃದ್ಧಿಗೋಸ್ಕರ ಕಾಂಗ್ರೆಸ್ ಪಕ್ಷ ಸೇರಿದ್ದು, ಕ್ಷೇತ್ರದ ಅಭಿವೃದ್ಧಿ ಮಾಡಲಿ ಎಂದು ಹಾರೈಸಿದರು.

LA Ramesh Jarkiholi spoke to the media.
ಶಾಸಕ ರಮೇಶ್ ಜಾರಕಿಹೊಳಿ ಮಾಧ್ಯಮವದರ ಜೊತೆಗೆ ಮಾತನಾಡಿದರು.
author img

By

Published : Jun 10, 2023, 4:00 PM IST

Updated : Jun 10, 2023, 5:50 PM IST

ರಮೇಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಿಕ್ಕೋಡಿ (ಬೆಳಗಾವಿ): ಅಥಣಿ ಶಾಸಕ ಲಕ್ಷ್ಮಣ್ ಸವದಿ ಅಭಿವೃದ್ಧಿಗೋಸ್ಕರ ಕಾಂಗ್ರೆಸ್ ಪಕ್ಷ ಸೇರಿದ್ದು, ಕ್ಷೇತ್ರದ ಅಭಿವೃದ್ಧಿ ಮಾಡಲಿ. ನಾವು ಅವರಿಗೆ ಸಹಕಾರ ಕೊಡುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಅಥಣಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಸೋಲಿನ ಬಗ್ಗೆ ಕಾರ್ಯಕರ್ತರೊಂದಿಗೆ ಪರಾಮರ್ಶೆಯ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಅಥಣಿ ಕಾಗವಾಡ ವಿಧಾನಸಭೆ ಸೋಲು ಜನರ ಕೊಟ್ಟ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ.

ಬರುವ ತಾ ಪಂ ಹಾಗೂ ಜಿ ಪಂ ಚುನಾವಣೆಯಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ನಾವು ಇವತ್ತು ಅಥಣಿ ಪಟ್ಟಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಮತ್ತೆ ಬಿಜೆಪಿ ಪಕ್ಷವನ್ನು ಬಲವರ್ಧನೆ ಮಾಡುತ್ತೇವೆ. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ನಾವು ಪಕ್ಷ ಸಂಘಟನೆ ಮಾಡುತ್ತೇವೆ ಎಂದು ತಿಳಿಸಿದರು.

ಅಥಣಿಯಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ಸೋತಿದ್ದೇವೆ ನಾವು ಸೋಲನ್ನು ಸ್ವೀಕಾರ ಮಾಡುತ್ತೇವೆ. ನೂತನ ಶಾಸಕ ಸವದಿಗೆ ಅಭಿನಂದನೆ ಸಲ್ಲಿಸುತ್ತೇನೆ, ಸವದಿ ಅಭಿವೃದ್ಧಿಗೋಸ್ಕರ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದ್ದು, ಅವರು ಅಭಿವೃದ್ಧಿ ಮಾಡಲಿ ಅವರಿಗೆ ಸಹಕಾರ ನೀಡಿ ಬೆಂಬಲಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಗ್ಯಾರಂಟಿ ನಂಬಿ ಜನರಿಂದ ಕಾಂಗ್ರೆಸ್​ಗೆ ಮತ: ಗ್ಯಾರಂಟಿ ಕಾರ್ಡ್ ಬಗ್ಗೆ ಪಕ್ಷದ ವರಿಷ್ಠರು ಮಾತನಾಡಬೇಡಿ ಎಂದು ಸೂಚನೆ ನೀಡಿದ್ದಾರೆ. ನಾವು ಮಾತನಾಡುವದಿಲ್ಲ. ಗ್ಯಾರಂಟಿ ನಂಬಿ ಜನರು ಕಾಂಗ್ರೆಸ್​ಗೆ ಮತ ನೀಡಿದ್ದಾರೆ. ಕಾಂಗ್ರೆಸ್​ನವರು ಭರವಸೆ ವಿಚಾರದಲ್ಲಿ ತಪ್ಪು ಮಾಡಲಿ, ನಾವು ಅವರಿಗೆ ಸರಿಯಾಗಿ ಉತ್ತರ ನೀಡುತ್ತೇವೆ. ಕಾಂಗ್ರೆಸ್​​ ಪಕ್ಷದವರು ಪಕ್ಕಾ ಮೋಸ ಮಾಡುತ್ತಾರೆ. ಲೋಕಸಭೆ ಚುನಾವಣೆಯವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ, ಆಮೇಲೆ ಕೈ ಕೊಡ್ತಾರೆ ಎಂದು ಹೇಳಿದರು.

ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿಗಳೆಲ್ಲ ಬಂದ್​: ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್​​ನವರು ಷರತ್ತುಗಳನ್ನು ಅಳವಡಿಸಿ ಜನಕ್ಕೆ ಮೋಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ನೀಡುವ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೆಲ್ಲ ಬಂದ್​ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಬರುವ ಲೋಕಸಭೆ ಚುನಾವಣೆಯಲ್ಲಿ ಜನರು ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಸಾರ್ವಜನಿಕರಲ್ಲಿ ವಿನಂತಿ.

    ಯಾವುದೇ ಷರತ್ತಿನಬಗ್ಗೆ ಹೇಳದೆ "ಎಲ್ಲಾ ಉಚಿತ, ಖಚಿತ ಹಾಗು ನಿಶ್ಚಿತ" ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ಷರತ್ತುಗಳನ್ನು ವಿಧಿಸಿ ಕರ್ನಾಟಕದ ಮಹಾಜನತೆಗೆ ಮೋಸ ಮಾಡಿದೆ.

    1. ಯಾರು ಹೆಚ್ಚಾದ ಕರೆಂಟ್ ಬಿಲ್ ಪಾವತಿ ಮಾಡಬೇಡಿ, 200 ಯೂನಿಟ್ ಒಳಗೆ ಬಳಸುವವರು ಕರೆಂಟ್ ಬಿಲ್ ನೀಡುವವರನ್ನು ವಾಪಸ್…

    — Basanagouda R Patil (Yatnal) (@BasanagoudaBJP) June 10, 2023 " class="align-text-top noRightClick twitterSection" data=" ">

ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಬೇಕು- ಯತ್ನಾಳ್​.. ಕಾಂಗ್ರೆಸ್​ ನಾಯಕರು ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಲ್ಲಿ ಹೇಳಿದ್ದು ಒಂದು ಈಗ ಹೇಳ್ತಿರೋದೇ ಬೇರೆಯಾಗಿದೆ ಎಂದು ಟ್ವಿಟ್​ ಮಾಡಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರು, ಉಚಿತ ಖಚಿತ ಹಾಗೂ ನಿಶ್ಚಿತ ಘೋಷಣೆ ಮಾಡಿದ್ದವರು ಈಗ ಷರತ್ತುಗಳನ್ನು ವಿಧಿಸಿ ಕರ್ನಾಟಕದ ಮಹಾಜನತೆಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಯಾರೂ ಕರೆಂಟ್​ ಬಿಲ್​ ಕಟ್ಟಬೇಡಿ, ಬಸ್​ಗಳಲ್ಲಿ ಟಿಕೆಟ್​ ತೆಗೆದುಕೊಳ್ಳಬೇಡಿ ನೀರಿನ ಬಿಲ್​ ಹೆಚ್ಚಾದರೆ ವಾಪಸ್​ ಕಳಿಸಿ. ಇನ್ನು, ಗೃಹಲಕ್ಷ್ಮಿ ಯೋಜನೆಯಡಿ ಎಲ್ಲಾ ಮಹಿಳೆಯರು ಹೆಸರು ನೋಂದಾಯಿಸಿ ಎಂದು ಯತ್ನಾಳ್​ ಅವರು ಕರೆ ನೀಡಿದ್ದಾರೆ.

ಇದನ್ನೂಓದಿ:ಬಿಜೆಪಿ ಕಾರ್ಯಕರ್ತರ ನೆರವಿಗಾಗಿ 'ಕಾನೂನು ಸಹಾಯವಾಣಿ': ಎಂಪಿ ತೇಜಸ್ವಿ ಸೂರ್ಯ ಚಾಲನೆ

Last Updated : Jun 10, 2023, 5:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.