ETV Bharat / state

ಸೋಲಿನ ಭಯದಿಂದ ಇಲ್ಲಸಲ್ಲದ ಆರೋಪ: ಲಕ್ಷ್ಮಣ ಸವದಿ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿ ಟೀಕೆ - congress candidate sunil sanka criticize over lakshman savadi

ತಮ್ಮ ವಿರುದ್ಧ ಟೀಕೆ ಮಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ವಿಧಾನಪರಿಷತ್​ ಕಾಂಗ್ರೆಸ್​ ಅಭ್ಯರ್ಥಿ ಸುನೀಲ್​ ಸಂಕ ವಾಗ್ದಾಳಿ ನಡೆಸಿದ್ದಾರೆ.

ಲಕ್ಷ್ಮಣ ಸವದಿ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿ ಟೀಕೆ

author img

By

Published : Jun 9, 2022, 7:51 PM IST

ಅಥಣಿ: ವಿಧಾನಪರಿಷತ್​ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಅವರ ಸೋಲುತ್ತಾರೆ ಎಂಬ ಭಯ ಲಕ್ಷ್ಮಣ ಸವದಿ ಅವರಿಗೆ ಕಾಡುತ್ತಿದೆ. ಅದಕ್ಕಾಗಿ ಅವರು ಹತಾಶರಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ತಮ್ಮ ರಾಜಕೀಯ ಅಪ್ರಬುದ್ಧತೆಯನ್ನು ಜನರೆದುರು ತೆರೆದಿಡುವ ಕೆಲಸ ಮಾಡುತ್ತಿದ್ದಾರೆ ಎಂದು ವಾಯುವ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ ಅವರು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಣಮಂತ ನಿರಾಣಿ ಪರವಾಗಿ ಲಕ್ಷ್ಮಣ ಸವದಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಹಣಮಂತ ನಿರಾಣಿ ಯಾವ ಒಳ್ಳೆಯ ಕೆಲಸ ಮಾಡಿದ್ದಾರೆ? ಯಾವ ಪದವೀಧರರ ಸಮಸ್ಯೆ ಕುರಿತು ವಿಧಾನ ಪರಿಷತ್​ನಲ್ಲಿ ಧ್ವನಿ ಎತ್ತಿದ್ದಾರೆ ಎಂಬುದನ್ನು ತಿಳಿಸಲಿ. ಅಷ್ಟಕ್ಕೂ ಇಷ್ಟೆಲ್ಲಾ ಮಾತನಾಡುವ ಲಕ್ಷ್ಮಣ ಸವದಿ ಅವರ ವಿದ್ಯಾರ್ಹತೆ ಎಷ್ಟು ಎನ್ನುವ ಮೂಲಕ ಟಾಂಗ್ ನೀಡಿದರು.

ಅಲ್ಲದೆ ಅಥಣಿಯ ಸಿದ್ದೇಶ್ವರ ದೇವಸ್ಥಾನದಲ್ಲಿ ಬಂದು ಲಕ್ಷ್ಮಣ ಸವದಿ ಅವರು ಪ್ರಸಾದ ಮುಟ್ಟಿ (ಪ್ರಮಾಣ) ನನ್ನ ಅವರ ಭೇಟಿ ಆಗಿದೆ ಎಂದು ಹೇಳಬೇಕು. ನಾನು ಯಾರನ್ನೂ ಭೇಟಿಯಾಗಿಲ್ಲ ಎಂದು ಮುಟ್ಟುತ್ತೇನೆ. ಇದಕ್ಕೆ ಸವದಿ ಅವರು ತಯಾರಿದ್ದಾರಾ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆ, ಆತ್ಮಸಾಕ್ಷಿಯ ಮತ ಮನ್ಸೂರ್​ಗೆ ಕೊಡಿ: ಜೆಡಿಎಸ್ ಶಾಸಕರಿಗೆ ಸಿದ್ದು ಪತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.