ಚಿಕ್ಕೋಡಿ : ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪ್ರವಾಹ ಸಂತ್ರಸ್ತ ಗ್ರಾಮಗಳಾದ ಜೂಗಳ, ಮಂಗಾವತಿ ಗ್ರಾಮಗಳಿಂದಲ್ಲೇ ಪ್ರಚಾರ ಪ್ರಾರಂಭಿಸಿದ್ದಾರೆ.
ನೆರೆಯಿಂದ ಸಂಪೂರ್ಣ ಮುಳುಗಡೆಯಾದ ಜೂಗುಳ, ಮಂಗಾವತಿ ಗ್ರಾಮಸ್ಥರು ಈಗಾಗಲೇ ಉಪ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜು ಕಾಗೆ ಇವತ್ತು ಅದೇ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಪ್ರವಾಹ ಬಂದಾಗ ಈ ಭಾಗದ ಶಾಸಕರಾಗಿದ್ದ ಶ್ರೀಮಂತ ಪಾಟೀಲ ಅವರು ಆ ಭಾಗದ ಜನರ ನೋವಿಗೆ ಸ್ಪಂದನೇ ನೀಡಿರಲಿಲ್ಲ. ಇದನ್ನೇ ಅಸ್ತ್ರ ಮಾಡಿಕೊಂಡ ರಾಜು ಕಾಗೆ ಉಪಚುನಾವಣೆಯ ಪ್ರಚಾರವನ್ನು ಸಂತ್ರಸ್ತ ಗ್ರಾಮಗಳಿಂದ ಪ್ರಾರಂಭಮಾಡಿದ್ದು, ಜನರನ್ನು ಓಲೈಸಿ ಅವರ ಮತಗಳನ್ನು ಸೆಳೆಯಲು ಯತ್ನ ನಡೆಸಿದ್ದಾರೆ.