ಅಥಣಿ : ಮಹೇಶ್ ಕುಮಟಳ್ಳಿ ಒಬ್ಬ ಭಸ್ಮಾಸುರ, ಅವರು ಬಿಜೆಪಿ ಪಕ್ಷವನ್ನು ಭಸ್ಮ ಮಾಡೋದು ಖಚಿತ ಎಂದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವ್ಯಂಗ್ಯವಾಡಿದರು.
ಅಥಣಿ ಪೂರ್ವ ಭಾಗದ ಗ್ರಾಮಗಳಲ್ಲಿ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, ಮಹೇಶ್ ಕುಮಟಳ್ಳಿ ಭಸ್ಮಾಸುರ ಇದ್ದ ಹಾಗೆ. ಅವರು ಕಾಲು ಇಟ್ಟಲ್ಲಿ ಎಲ್ಲವೂ ಭಸ್ಮ ಆಗುತ್ತದೆ. ಈಗ ಬಿಜೆಪಿಗೆ ಕಾಲಿಟ್ಟಿದ್ದಾರೆ. ಅದನ್ನು ಭಸ್ಮ ಮಾಡೋದು ಖಚಿತ ಎಂದು ಲೇವಡಿ ಮಾಡಿದರು.
ನೆರೆ ಸಂತ್ರಸ್ತರ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರವಾಹದಲ್ಲಿ ಸಂತ್ರಸ್ತರು ಮನೆ ಕಳೆದುಕೊಡಿದ್ದಾರೆ. ಇನ್ನು ಅವರಿಗೆ ಪರಿಹಾರ ಹಣ ನೀಡಿಲ್ಲ. ಇಂತವರಿಗೆ ಮತ ನೀಡದೆ ಕೆಲಸ ಮಾಡುವಂತಹ ಅಭ್ಯರ್ಥಿಗೆ ಮಯ ಹಾಕುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಇನ್ನು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಅನರ್ಹ ಶಾಸಕರು ವಿರುದ್ಧ ಆಕ್ರೋಶ ವ್ಯಕ್ತಪಡಿದರು.