ಬೆಳಗಾವಿ: ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ, ಸೆ.31ರೊಳಗೆ ಡಾಟಾ ಎಂಟ್ರಿ ಕಾರ್ಯವನ್ನು ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚನೆ ನೀಡಿದ್ದಾರೆ.
ಬೈಲಹೊಂಗಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೈಲಹೊಂಗಲ ಉಪವಿಭಾಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೈಲಹೊಂಗಲ ಉಪವಿಭಾಗದಲ್ಲಿರುವ ಬೈಲಹೊಂಗಲ, ಕಿತ್ತೂರ, ಮೂಡಲಗಿ, ರಾಮದುರ್ಗ, ಸವದತ್ತಿ ಹಾಗೂ ಗೋಕಾಕ ತಾಲೂಕುಗಳ ಪೈಕಿ 2020-21ನೇ ಸಾಲಿನಲ್ಲಿ ಒಟ್ಟು 133 ಎ ವರ್ಗದ, 17 ಬಿ ವರ್ಗದ ಹಾಗೂ 12.30 ಸಿ ವರ್ಗದ ಒಟ್ಟು 1480 ಮನೆಗಳ ಹಾನಿಯಾಗಿದ್ದು, ಅವುಗಳ ಪೈಕಿ ಶೇ.70ರಷ್ಟು ಹಾನಿಯ ಸರ್ವೇ ಕಾರ್ಯವು ಮುಕ್ತಾಯಗೊಂಡಿರುತ್ತದೆ. ಇನ್ನುಳಿದ ಶೇ.30ರಷ್ಟು ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಜೀವಹಾನಿ ಹಾಗೂ ಜಾನುವಾರು ಹಾನಿ, ಬೆಳೆ ಹಾನಿಯನ್ನು ಪರಿಶೀಲಿಸಿ ಬೆಳೆ ಹಾನಿಯ ಕಾರ್ಯವನ್ನು ಸೆಪ್ಟೆಂಬರ್ 21 ರೊಳಗಾಗಿ ಪೂರ್ಣಗೊಳಿಸಲು ತಿಳಿಸಿದರು.