ಬೆಳಗಾವಿ : ಕೋಮು ಸೌಹಾರ್ದತೆ ಕದಡಲು ಯತ್ನಿಸಿದ ಯುವಕನಿಗೆ ಚಪ್ಪಲಿ ಏಟು ನೀಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ ನಡೆದಿದೆ.
ದೇಶನೂರು ಗ್ರಾಮದ ಯುವಕ ಥಳಿತಕ್ಕೊಳಗಾದವನು. ಯುವಕ ಟಿಕ್‌ಟಾಕ್‌ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿಡಿಯೋವೊಂದನ್ನ ಅಪ್ಲೋಡ್ ಮಾಡಿದ್ದ. ಈ ವಿಡಿಯೋ ಗಮನಿಸಿದ ಗ್ರಾಮಸ್ಥರು ಯುವಕನನ್ನು ಪಂಚಾಯತ್‌ಗೆ ಕರೆದೊಯ್ದಿದ್ದಾರೆ. ಆಗ ಯುವಕನನ್ನು ಪಂಚಾಯತ್‌ನಲ್ಲಿ ಕೂಡಿಹಾಕಿ ಚಪ್ಪಲಿಯಿಂದ ಥಳಿಸಿದ್ದಾರೆ.
ಗ್ರಾಪಂ ಅಧ್ಯಕ್ಷ ದೀಪಕ್ ಪಾಟೀಲ್ ಎದುರೇ ಯುವಕನಿಗೆ ಚಪ್ಪಲಿಯಿಂದ ಥಳಿಸಲಾಗಿದೆ. ಸಾರ್ವಜನಿಕವಾಗಿ ಕ್ಷಮೆ ಕೋರಿದ ಬಳಿಕ ಯುವಕನನ್ನು ಗ್ರಾಮಸ್ಥರು ಮನೆಗೆ ಕಳುಹಿಸಿದ್ದಾರೆ. ಯುವಕನಿಂದಲೇ ಟೆಕ್‌ಟಾಕ್‌ನಲ್ಲಿರುವ ವಿಡಿಯೋವನ್ನು ಗ್ರಾಮಸ್ಥರು ಡಿಲೀಟ್ ಮಾಡಿಸಿದ್ದಾರೆ. ನೇಸರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.