ETV Bharat / state

ಅಕ್ರಮವಾಗಿ ಮದ್ಯ ಸಂಗ್ರಹಿಸಿ ದುಬಾರಿ ಬೆಲೆಗೆ ಮಾರಾಟ: ಇಬ್ಬರ ಬಂಧನ

author img

By

Published : Feb 16, 2021, 8:55 PM IST

ಸೇನಾ ಕ್ಯಾಂಟಿನ್​ನ ಮದ್ಯವನ್ನು ಅಕ್ರಮವಾಗಿ ಖರೀದಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿಐ ತಂಡ ವಶಕ್ಕೆ ಪಡೆದಿದೆ.

collecting-liquor-and-selling-it-at-expensive-prices-at-belgavi
ಅಕ್ರಮ ಮದ್ಯ ಸಂಗ್ರಹಿಸಿ ದುಬಾರಿ ಬೆಲೆಗೆ ಮಾರಾಟ.

ಬೆಳಗಾವಿ: ಗೋವಾ ಹಾಗೂ ಆರ್ಮಿ ಕ್ಯಾಂಟಿನ್​ನ ಮದ್ಯ ಸಂಗ್ರಹಿಸಿಟ್ಟು, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಐಬಿ ತಂಡ ಬಂಧಿಸಿದೆ.

ಕುಮಾರಸ್ವಾಮಿ ಲೇಔಟ್​ನ ರಾಜೇಶ್​ ನಾಯಕ ಹಾಗೂ ಕಣಬರ್ಗಿಯ ಶಂಕರ ದೇಸನೂರ ಬಂಧಿತರು. ಬಂಧಿತರಿಂದ 13 ಲಕ್ಷ ಮೌಲ್ಯದ ವಿವಿಧ ಕಂಪನಿಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಾಲಿ ಹಾಗೂ ಮಾಜಿ ಸೈನಿಕ ಕುಟುಂಬಗಳಿಗೆ ಮಿಲಿಟರಿ ಕ್ಯಾಂಟಿನ್​ನಲ್ಲಿ ಮದ್ಯವನ್ನು ಮತ್ತು ಕಡಿಮೆ ಹಣಕ್ಕೆ ಗೋವಾದಿಂದ ಅಕ್ರಮವಾಗಿ ಮದ್ಯ ಖರೀದಿಸಿ ತಂದು ವಿಜಯನಗರದ ರಕ್ಷಕ ಕಾಲೋನಿಯ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು.

ಓದಿ: ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ: ಸರ್ಕಾರದ ಕಟ್ಟುನಿಟ್ಟಿನ ಆದೇಶ

ಖಚಿತ ಮಾಹಿತಿ ಮೇರೆಗೆ ಸಿಸಿಐಬಿ ಸಿಪಿಐ ಸಂಜೀವ ಕಾಂಬಳೆ ನೇತೃತ್ವದ ತಂಡ ದಾಳಿ ನಡೆಸಿ ಗೋವಾದ 547 ಬಾಟಲ್​ ಹಾಗೂ ಮಿಲಿಟರಿ ಕ್ಯಾಂಟಿನ್​ನಲ್ಲಿ ಸಿಗುವ 203 ಮದ್ಯದ ಬಾಟಲ್​ಗಳನ್ನು ವಶಕ್ಕೆ ಪಡೆದಿದೆ. ಇವು ರಾಜ್ಯದ ಮಾರುಕಟ್ಟೆಯಲ್ಲಿ ‌13 ಲಕ್ಷ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.