ಅಥಣಿ/ಬೆಳಗಾವಿ: ಚುನಾವಣಾ ಪ್ರಚಾರಕ್ಕೆಂದು ಬೆಳಗಾವಿಯಿಂದ ಸಿಎಂ ಯಡಿಯೂರಪ್ಪ ಹೊರಟ್ಟಿದ್ದ ಹೆಲಿಕಾಪ್ಟರ್ ಮಹಾರಾಷ್ಟ್ರ ತಲುಪಿದ್ದು, ಜತ್ತದಲ್ಲಿ ಲ್ಯಾಂಡ್ ಆಗಿದೆ.
ಪ್ರಚಾರಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪನನ್ನು ಮಹಾರಾಷ್ಟ್ರದ ಬಿಜೆಪಿ ಮುಖಂಡರು ಹಾಗೂ ಬಬಲೇಶ್ವರ ಕ್ಷೇತ್ರದ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ನಂತರ ಸಿಎಂ ಬಿಎಸ್ವೈ ಸದ್ಯ ಜತ್ತ ಪಟ್ಟಣದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ರಸ್ತೆ ಮಾರ್ಗದ ಮೂಲಕ ತೆರಳಿದ್ದಾರೆ.
ಇನ್ನು ಮಹಾರಾಷ್ಟ್ರಕ್ಕೆ ತೆರಳಲು ಸಿಎಂ ನಿನ್ನೆಯೇ ಬೆಳಗಾವಿಗೆ ಬಂದಿದ್ದು, ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಬರುವಿಕೆ ತಡವಾಗಿದ್ದರಿಂದ ಸಿಎಂ ವೇಳಾ ಪಟ್ಟಿಯಲ್ಲಿ ವ್ಯತ್ಯಾಸವಾಗಿದೆ. 3 ಗಂಟೆ ತಡವಾಗಿ ಮಹಾರಾಷ್ಟ್ರ ತಲುಪಿದ್ದಾರೆ.