ETV Bharat / state

ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಬೊಮ್ಮಾಯಿ ಸರಿಪಡಿಸಬೇಕು : ಹುಕ್ಕೇರಿ ಶ್ರೀ ಆಗ್ರಹ - Belgavi

ಬಹಳಷ್ಟು ಹೋರಾಟಗಾರರು ಹೋರಾಟ ಮಾಡಿದ್ದಾರೆ. ಇನ್ನಾದರೂ ಉತ್ತರ ಕರ್ನಾಟಕದ ಧೀಮಂತ ರಾಜಕಾರಣಿ ಬಸವರಾಜ್​ ಬೊಮ್ಮಾಯಿ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು. ನಾಡಿನ ಅಭಿವೃದ್ಧಿಗಾಗಿ ಯಾವಾಗಲೂ ಮಠಾಧೀಶರು ಸಿಎಂ ಬಳಿ ಹೋಗಲು ಸನ್ನದ್ಧರಾಗಿದ್ದೇವೆ.ಬೆಳಗಾವಿ ಸುವರ್ಣಸೌಧಕ್ಕೆ ಬೇಗ ಕಚೇರಿಗಳನ್ನ ಸ್ಥಳಾಂತರ ಮಾಡುವ ಭರವಸೆಯಿದೆ. ಮಾಡದಿದ್ದರೆ ನಾವು ನಿಯೋಗ ತೆಗೆದುಕೊಂಡು ಹೋಗಿ ಮಾಡಿಸುತ್ತೇವೆ. ಈ ಬಾರಿ ಬಸವರಾಜ್​​ ಬೊಮ್ಮಾಯಿ ಅವರು ನಮಗೆ ನಿರಾಶೆ ಮಾಡುವುದಿಲ್ಲ ಎಂಬ ಆಶಾಭಾವನೆಯಿದೆ..

hukkeri swamiji
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
author img

By

Published : Jul 28, 2021, 5:45 PM IST

ಬೆಳಗಾವಿ : ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸಿಎಂ ಬಸವರಾಜ ಬೊಮ್ಮಾಯಿಗೆ ಉತ್ತರಕರ್ನಾಟಕ ಶಾಸಕರು ಪಕ್ಷ ಬೇಧ ಮರೆತು ಬೆಂಬಲಿಸಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ಮಾತ್ರ ಅಭಿವೃದ್ಧಿ ಆಗ್ತಿದೆ. ಉತ್ತರಕರ್ನಾಟಕ ಮಾತ್ರ ಅಭಿವೃದ್ಧಿಯಾಗುತ್ತಿಲ್ಲ ಎಂಬ ಕೂಗು ಮೊದಲಿನಿಂದಲೂ ಇದ್ದೆ ಇದೇ. ಹೀಗಾಗಿ, ಉತ್ತರಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದರು.

ಉತ್ತರಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಬೊಮ್ಮಾಯಿ ಸರಿಪಡಿಸಲಿ : ಹುಕ್ಕೇರಿ ಶ್ರೀ ಆಗ್ರಹ

ಬೆಳಗಾವಿ ಸುವರ್ಣಸೌಧ ಇವತ್ತಿನವರೆಗೂ ಕಾರ್ಯ ಚಟುವಟಿಕೆಯಲ್ಲಿಲ್ಲ.‌ ಮುಂಬರುವ ದಿನಗಳಲ್ಲಿ ಸೌಧದಲ್ಲಿ ನಿರಂತರವಾಗಿ ಕೆಲಸ‌ಗಳು ನಡೆಯಬೇಕು. ಅದಕ್ಕಾಗಿ ಪ್ರಮುಖ ಕಚೇರಿಗಳನ್ನ ಸ್ಥಳಾಂತರ ಮಾಡಲು ನಾವು ಒತ್ತಾಯಿಸುತ್ತಿದ್ದೇವೆ.

ಬಹಳಷ್ಟು ಹೋರಾಟಗಾರರು ಹೋರಾಟ ಮಾಡಿದ್ದಾರೆ. ಇನ್ನಾದರೂ ಉತ್ತರ ಕರ್ನಾಟಕದ ಧೀಮಂತ ರಾಜಕಾರಣಿ ಬಸವರಾಜ್​ ಬೊಮ್ಮಾಯಿ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು. ನಾಡಿನ ಅಭಿವೃದ್ಧಿಗಾಗಿ ಯಾವಾಗಲೂ ಮಠಾಧೀಶರು ಸಿಎಂ ಬಳಿ ಹೋಗಲು ಸನ್ನದ್ಧರಾಗಿದ್ದೇವೆ.

ಬೆಳಗಾವಿ ಸುವರ್ಣಸೌಧಕ್ಕೆ ಬೇಗ ಕಚೇರಿಗಳನ್ನ ಸ್ಥಳಾಂತರ ಮಾಡುವ ಭರವಸೆಯಿದೆ. ಮಾಡದಿದ್ದರೆ ನಾವು ನಿಯೋಗ ತೆಗೆದುಕೊಂಡು ಹೋಗಿ ಮಾಡಿಸುತ್ತೇವೆ. ಈ ಬಾರಿ ಬಸವರಾಜ್​​ ಬೊಮ್ಮಾಯಿ ಅವರು ನಮಗೆ ನಿರಾಶೆ ಮಾಡುವುದಿಲ್ಲ ಎಂಬ ಆಶಾಭಾವನೆಯಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡಲೇಬೇಕು ಎಂಬುವುದು ನಮ್ಮ ಹಕ್ಕೊತ್ತಾಯ ಎಂದರು.

ಬೊಮ್ಮಾಯಿ ಅವರಿಗೆ ಗಡಿ ಸಮಸ್ಯೆ ಬಗ್ಗೆ ಹೆಚ್ಚಾಗಿ ಗೊತ್ತಿದೆ. ಈಗ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಈ ಹಿಂದೆ ಗಡಿ ಉಸ್ತುವಾರಿ ಸಚಿವರನ್ನಾಗಿ ಮಾಡಲು ಒತ್ತಾಯಿಸಿದ್ದೆವು. ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದಾರೆ. ಉತ್ತರ ಕರ್ನಾಟಕ ನಾಯಕರು ಎಲ್ಲಾ ಪಕ್ಷ ಬೇಧ ಮರೆತು ಒಂದಾಗಿ ಕೆಲಸ ಮಾಡಬೇಕು.

ನೂತನ ಸಿಎಂ ಬೊಮ್ಮಾಯಿ ಅವರಿಗೆ ಉತ್ತರ ಕರ್ನಾಟಕದ ಎಲ್ಲಾ ನಾಯಕರು ಬೆಂಬಲಿಸಬೇಕು. ಅಭಿವೃದ್ಧಿ ವಿಚಾರವಾಗಿ ನಮ್ಮ ಉತ್ತರ ಕರ್ನಾಟಕ ಶಾಸಕರು ಸಿಎಂ ಬೆಂಬಲಕ್ಕೆ ನಿಲ್ಲಬೇಕು. ಕಳೆದ ಎರಡು ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ಆಗಿಲ್ಲ. ಈ ವರ್ಷವಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆಂದು ಶ್ರೀಗಳು ಆಗ್ರಹಿಸಿದರು.

ಇದನ್ನೂ ಓದಿ: 'ವೀರಶೈವ ಲಿಂಗಾಯತ ಸಮುದಾಯದ ನಾಯಕನನ್ನು ಸಿಎಂ ಆಗಿ ನೇಮಿಸಿರುವುದು ಸ್ವಾಗತಾರ್ಹ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.