ETV Bharat / state

ಹೃದಯಾಘಾತದಿಂದ ಸಿಐಎಸ್ಎಫ್ ಯೋಧ ನಿಧನ : ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

author img

By

Published : Sep 8, 2021, 5:29 PM IST

ಮೃತ ವೀರಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನೇನು ಕೆಲವು ತಿಂಗಳುಗಳಲ್ಲಿ ಸೈನ್ಯದಿಂದ ಸೇವಾ ನಿವೃತ್ತಿ ಹೊಂದಿ ಮರಳಿ ಬರಬೇಕಾಗಿದ್ದ ಯೋಧ ಶವವಾಗಿ ಬಂದಿದ್ದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು..

cisf-soldier-somappa-died-by-heart-attack
ಮೃತ ಯೋಧನಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಚಿಕ್ಕೋಡಿ : ಹೈದರಾಬಾದ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಐಎಸ್ಎಫ್ ಯೋಧ ಸೋಮಪ್ಪಾ ಕುಂಬಾರ ಭಾನುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಅವರ ಅಂತ್ಯಕ್ರಿಯೆಯನ್ನು ಹುಟ್ಟೂರಿನ ಪಾಶ್ಚಾಪೂರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು.

ಮೃತ ಸಿಐಎಸ್ಎಫ್ ಯೋಧನ ಶವಕ್ಕೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಗ್ರಾಮದ ಬೃಂದಾವನ ಹೋಟೆಲ್​ನಿಂದ ಅಶೋಕ ಸ್ತಂಭದವರೆಗೆ ಮೆರವಣಿಗೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಯೋಧನ ಹುಟ್ಟೂರು ಸವದತ್ತಿ ತಾಲೂಕು ಜೀವಾಪೂರ. ಆದರೆ, ಕಳೆದ ಕೆಲವು ವರ್ಷದಿಂದ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ಅವರು ಬಂದು ನೆಲೆಸಿದ್ದಾರೆ. ಹೀಗಾಗಿ, ಪಾಶ್ಚಾಪೂರ ಗ್ರಾಮದಲ್ಲೇ ಅಂತ್ಯ ಸಂಸ್ಕಾರ ಜರುಗಿತು.

ಮೃತ ವೀರಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನೇನು ಕೆಲವು ತಿಂಗಳುಗಳಲ್ಲಿ ಸೈನ್ಯದಿಂದ ಸೇವಾ ನಿವೃತ್ತಿ ಹೊಂದಿ ಮರಳಿ ಬರಬೇಕಾಗಿದ್ದ ಯೋಧ ಶವವಾಗಿ ಬಂದಿದ್ದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ಯಮಕನಮರಡಿ ಪಿಎಸ್​ಐ ನ್ಯಾಮಗೌಡ ಹಾಗೂ ಸಿಐಎಸ್​ಎಫ್ ಅಧಿಕಾರಿಗಳು, ನಿವೃತ್ತ ಸೈನಿಕರು ಹಾಗೂ ಪಾಚ್ಚಾಪುರ ಉಪಠಾಣೆಯ ಎಎಸ್‌ಐ ಮುಲ್ಲಾ ಹಾಗೂ ಪೊಲೀಸ್ ಸಿಬ್ಬಂದಿ, ಜನಪ್ರತಿನಿಧಿಗಳು, ಸೋಮಪ್ಪ ಕುಂಬಾರ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.

ಓದಿ: ಮೈಸೂರು ದಸರಾಗೆ ಬಂಡೀಪುರದ ಲಕ್ಷ್ಮಿ, ಚೈತ್ರಾ ಆಯ್ಕೆ : ಸೆ.11ಕ್ಕೆ ಗಜ ಪಯಣ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.