ಬೆಳಗಾವಿ: ಎಸ್ ಜಿವಿ ಮಹೇಶ ಪಿಯು ಕಾಲೇಜಿನ ವಿದ್ಯಾರ್ಥಿ ಚಿರಂತನ ಹೆಬ್ಬಾಳೆ 2020ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ 723ನೇ ರ‍್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.
ನಗರದ ಎಸ್ ಜಿವಿ ಮಹೇಶ ಪಿಯು ಕಾಲೇಜು ಕಳೆದ ಏಳೆಂಟು ವರ್ಷಗಳಿಂದಲೂ, ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶಗಳಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಆ ಪಟ್ಟಿಗೆ ಇದೀಗ ವಿದ್ಯಾರ್ಥಿಯ ಸಾಧನೆಯು ಸೇರ್ಪಡೆಯಾಗಿದೆ.
ವಿದ್ಯಾರ್ಥಿಯ ಈ ಸಾಧನೆಗೆ ಎಸ್ ಜಿ ವಿ ಮಹೇಶ ಪಿಯು ಕಾಲೇಜ್ ನ ಆಡಳಿತ ಮಂಡಳಿ, ಪ್ರಾಚಾರ್ಯರು, ಸಂಸ್ಥೆಯ ಎಲ್ಲಾ ಸಿಬ್ಬಂದಿ ಅಭಿನಂದಿಸಿದ್ದಾರೆ.