ಚಿಕ್ಕೋಡಿ: ಸುಮಾರು 25ಕ್ಕೂ ಹೆಚ್ಚು ಮಂಗಗಳು ಹುಕ್ಕೇರಿ ಪಟ್ಟಣದ ಜನರ ನಿದ್ದೆಗೆಡಿಸುತ್ತಿವೆ. ಕಪಿಚೇಷ್ಟೆಗೆ ಹೆದರಿರುವ ಜನರು ಮನೆಯಿಂದ ಹೊರ ಬರಲು ಹೆದರುವಂತಾಗಿದೆ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಂಗಗಳ ಕಾಟ ಮಿತಿಮೀರಿದೆ. ವಾನರ ಸೇನೆ ಮಾವಿನ ಹಣ್ಣುಗಳನ್ನು ತಿನ್ನುವುದಲ್ಲದೆ, ಮನೆಗಳ ಮೇಲ್ಛಾವಣಿಗೆ ಹಾನಿ ಉಂಟುಮಾಡುತ್ತಿವೆ. ಅವುಗಳ ತೊಂದರೆ ತಾಳಲಾರದೆ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಈ ಮಂಗಗಳನ್ನ ಓಡಿಸಲು ಹುಕ್ಕೇರಿ ಪುರಸಭೆ ಅಧಿಕಾರಿಗಳು ಮುಂದಾಗಬೇಕು, ಅವುಗಳ ಕಾಟದಿಂದ ಮುಕ್ತಿ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ.