ಚಿಕ್ಕೋಡಿ: ಕಳೆದ ನಾಲ್ಕೈದು ದಿನಗಳಿಗೆ ಹೋಲಿಸಿದರೆ ಕೃಷ್ಣಾ ನದಿಯ ನೀರಿನ ಹರಿವಿನಲ್ಲಿ ತುಂಬಾ ಇಳಿಮುಖವಾಗಿದೆ. ಹೀಗಾಗಿ ನದಿ ತೀರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಕೃಷ್ಣಾ ನದಿ ತೀರದ ಒಳ ಹರಿವು 38 ಸಾವಿರ ಕ್ಯೂಸೆಕ್ಗೂ ಅಧಿಕವಾಗಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ಮಹಾರಾಷ್ಟ್ರದ ಜಲಾಶಯಗಳಿಂದ ನೀರಿನ ಬಿಡುಗಡೆ ಪ್ರಮಾಣ ಕಡಿಮೆಯಾಗಿದ್ದು, ಚಿಕ್ಕೋಡಿ ಉಪವಿಭಾಗದ ದೂಧಗಂಗಾ, ವೇದಗಂಗಾ ಹಾಗೂ ಕೃಷ್ಣಾ ನದಿಯ ಒಳ ಹರಿವಿನಲ್ಲಿ ಇಳಿಮುಖ ಕಂಡಿದೆ. ಮಹಾರಾಷ್ಟ್ರದ ರಾಜಾಪೂರ ಜಲಾಶಯದಿಂದ 33,501 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 5,456 ಕ್ಯೂಸೆಕ್ ನೀರು ಹೀಗೆ ಒಟ್ಟು 38 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.
ಮಹಾರಾಷ್ಟ್ರದ ಕೊಯ್ನಾ - 25 ಮಿ.ಮೀ, ನವಜಾ - ಮಿ.ಮೀ, ಮಹಾಬಳೇಶ್ವರ - 65 ಮಿ.ಮೀ, ವಾರಣಾ 33 ಮಿ.ಮೀ, ಕಾಳಮ್ಮವಾಡಿ - 23 ಮಿ.ಮೀ, ರಾಧಾನಗರಿ - 50 ಮಿ.ಮೀ, ಪಾಟಗಾಂವ - 40 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ. ಚಿಕ್ಕೋಡಿ ಉಪವಿಭಾಗದ ಚಿಕ್ಕೋಡಿ - 1.2 ಮಿ.ಮೀ, ಅಂಕಲಿ - 4.6 ಮಿ.ಮೀ, ನಾಗರಮುನ್ನೋಳಿ - 2.2 ಮಿ.ಮೀ, ಸದಲಗಾ 6.6 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯ - 95%, ವಾರಣಾ ಜಲಾಶಯ - 97%, ರಾಧಾನಗರಿ ಜಲಾಶಯ 97%, ಕಣೇರ ಜಲಾಶಯ 94%, ಧೂಮ ಜಲಾಶಯ 97% ಹಾಗೂ ಪಾಟಗಾಂವ ಜಲಾಶಯ 100% ಭರ್ತಿಯಾಗಿವೆ. ಹಿಪ್ಪರಗಿ ಬ್ಯಾರೇಜ್ನಿಂದ 18,000 ಕ್ಯೂಸೆಕ್ ಹಾಗೂ ಆಲಮಟ್ಟಿ ಜಲಾಶಯದಿಂದ 26,992 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.