ಚಿಕ್ಕೋಡಿ: ರಾತ್ರೋರಾತ್ರಿ ನದಿ ಪ್ರವಾಹದ ಮಟ್ಟ ಹೆಚ್ಚಾಗಿದ್ದರಿಂದ ನಮಗೆ ದಿಕ್ಕೆದೊಚ್ಚದಂತಾಯಿತು ರಾತ್ರಿ 12 ಗಂಟೆ ಸುಮಾರಿಗೆ ಕರೆಂಟ್ ಹೋಗಿದ್ದು ಇನ್ನುವರೆಗೂ ಕರೆಂಟ್ ಬಂದಿಲ್ಲ. ಅತ್ತ ಅಧಿಕಾರಿಗಳೂ ಬಂದಿಲ್ಲ ಎಂದು ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಪ್ರವಾಹಕ್ಕೆ ಹೆದರಿ ನಾವು ಮನೆಯಿಂದ ಏನನ್ನೂ ತೆಗೆದುಕೊಂಡು ಹೋಗಿಲ್ಲ. ಮಕ್ಕಳನ್ನು ಕಟ್ಟಿಕೊಂಡು ಏನು ಮಾಡಲು ತಿಳಿಯುತ್ತಿಲ್ಲ. ಕಾತ್ರಾಳ ಗ್ರಾಮ ಮುಳುಗಡೆ ಆಗಲಿದೆ. ಬೇರೆ ಕಡೆ ಹೋಗಿ ಎಂದು ಹೇಳಲು ಯವೊಬ್ಬ ಅಧಿಕಾರಿಯೂ ಬಂದಿಲ್ಲ ಗ್ರಾಮಸ್ಥರು ಹೇಳಿದ್ದಾರೆ. ಶಾಶ್ವತ ಪರಿಹಾರಕ್ಕೆ ಇಲ್ಲಿನ ನಿರಾಶ್ರಿತರು ಆಗ್ರಹಿಸಿದ್ದಾರೆ. ಕಳೆದ ಬಾರಿ ಪ್ರವಾಹದ ವೇಳೆ ಬಂದ ಪರಿಹಾರ ಧನವನ್ನು ಅಧಿಕಾರಿಗಳು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.