ETV Bharat / state

ಚಿಕ್ಕೋಡಿ: ಹಿಂಗಾರು ಬೀಜ ಬಿತ್ತನೆ ಕಾರ್ಯ ಬಲು ಜೋರು - ಬೆಳೆ ಬಿತ್ತನೆ ಕಾರ್ಯ

ಟ್ರ್ಯಾಕ್ಟರ್​​ ಮೂಲಕ ಹಿಂಗಾರು ಬೀಜ ಬಿತ್ತನೆ ಮಾಡುವಲ್ಲಿ ಗಡಿ ಭಾಗದ ರೈತರು ನಿರತರಾಗಿದ್ದಾರೆ. ಹಿಂಗಾರಿ ಜೋಳ - 30,365 (70.1%) ಹೆಕ್ಟೇರ್, ಮೆಕ್ಕೆಜೋಳ - 13,285 (48.9%) ಹೆಕ್ಟೇರ್, ಗೋಧಿ - 28,648 (137.3%) ಹೆಕ್ಟೇರ್, ರಾಗಿ - 09 (8.5%) ಹೆಕ್ಟೇರ್, ಕಡಲೆ - 40,421 (94.9%) ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಮುಗಿದಿದೆ ಎಂದು ಉಪ ಕೃಷಿ ನಿರ್ದೇಶಕ ಅಧಿಕಾರಿ ಎಲ್​​ ಐ ರೂಡಗಿ‌ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

chikkodi: Crop sowing work is going on
ಚಿಕ್ಕೋಡಿ: ಹಿಂಗಾರು ಬೆಳೆ ಬಿತ್ತನೆ ಕಾರ್ಯ ಬಲು ಜೋರು
author img

By

Published : Dec 10, 2020, 11:04 AM IST

ಚಿಕ್ಕೋಡಿ: ಚಿಕ್ಕೋಡಿಯಲ್ಲಿ ಹಿಂಗಾರು ಬೀಜ ಬಿತ್ತನೆ ಕಾರ್ಯ ಬಲು ಜೋರಾಗಿ ನಡೆಯುತ್ತಿದೆ. ಟ್ರ್ಯಾಕ್ಟರ್​​ ಮೂಲಕ ಬಿತ್ತನೆ ಮಾಡುವಲ್ಲಿ ಗಡಿ ಭಾಗದ ರೈತರು ನಿರತರಾಗಿದ್ದಾರೆ.

ಹಿಂಗಾರು ಬೀಜ ಬಿತ್ತನೆ ಕಾರ್ಯ ಬಲು ಜೋರು

ಚಿಕ್ಕೋಡಿಯಲ್ಲಿ ಅತಿ ಹೆಚ್ಚಾಗಿ ಮೆಕ್ಕೆಜೋಳ, ಕಡಲೆ, ಗೋಧಿ, ಜೋಳವನ್ನು ಹಿಂಗಾರಿನ ಬೆಳೆಗಳಾಗಿ ಬೆಳೆಯುತ್ತಾರೆ. ವಾಡಿಕೆಯಂತೆ ನವೆಂಬರ್​ ಕೊನೆ ವಾರದಲ್ಲಿ ಇಲ್ಲವೇ ಡಿಸೆಂಬರ್​ ಮೊದಲ ವಾರದಲ್ಲಿ ಹಿಂಗಾರು ಬಿತ್ತನೆ ಕಾರ್ಯ ಮಾಡುತ್ತಾರೆ. ಈಗಾಗಲೇ ರೈತರು ಮೆಕ್ಕೆಜೋಳ ಬೆಳೆದು, ರಾಶಿ ಮಾಡಿ, ಮಾರುಕಟ್ಟೆಗೆ ಬೆಳೆಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿದ್ದಾರೆ. ಹಿಂಗಾರು ಬೆಳೆಗಳನ್ನು ಬೆಳೆಯಲು ಹಣವಿಲ್ಲದೆ ಇರುವುದರಿಂದ ಮುಂಗಾರು ಬೆಳೆಗಳನ್ನು ಬಂದ ಬೆಲೆಗೆ ಮಾರಾಟ ಮಾಡಿರುವುದನ್ನು ಸದ್ಯದ ಪರಿಸ್ಥಿತಿಯಲ್ಲಿ ಕಾಣಬಹುದಾಗಿದೆ‌.

ಈ ಸುದ್ದಿಯನ್ನೂ ಓದಿ: ಜೆಡಿಎಸ್ ತನ್ನ ಸ್ವಾರ್ಥಕ್ಕಾಗಿ ಸರ್ಕಾರವನ್ನು ಬೆಂಬಲಿಸುತ್ತಿದೆ: ಎಸ್.ಆರ್. ಪಾಟೀಲ್

*ಅಥಣಿ ವಲಯದಲ್ಲಿ ಜೋಳ - 17,910 ಹೆಕ್ಟೇರ್, ಮೆಕ್ಕೆಜೋಳ - 210 ಹೆಕ್ಟೇರ್, ಗೋಧಿ - 8,760 ಹೆಕ್ಟೇರ್, ಕಡಲೆ - 28,300 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.‌

*ಚಿಕ್ಕೋಡಿ ವಲಯದಲ್ಲಿ ಜೋಳ - 5,464 ಹೆಕ್ಟೇರ್, ಮೆಕ್ಕೆಜೋಳ - 812 ಹೆಕ್ಟೇರ್, ರಾಗಿ - 01 ಹೆಕ್ಟೇರ್, ಕಡಲೆ - 2,363 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.‌

*ಗೋಕಾಕ ವಲಯದಲ್ಲಿ ಜೋಳ - 810 ಹೆಕ್ಟೇರ್, ಮೆಕ್ಕೆಜೋಳ - 8,120 ಹೆಕ್ಟೇರ್, ಗೋಧಿ - 9,685 ಹೆಕ್ಟೇರ್, ರಾಗಿ - 09 ಹೆಕ್ಟೇರ್, ಕಡಲೆ - 6,135 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.‌

*ಹುಕ್ಕೇರಿ ವಲಯದಲ್ಲಿ ಜೋಳ - 6,095 ಹೆಕ್ಟೇರ್, ಮೆಕ್ಕೆಜೋಳ - 2,491 ಹೆಕ್ಟೇರ್, ಗೋಧಿ - 1,034 ಹೆಕ್ಟೇರ್, ಕಡಲೆ - 2,313 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.‌

*ರಾಯಬಾಗ ವಲಯದಲ್ಲಿ ಜೋಳ - 86 ಹೆಕ್ಟೇರ್, ಮೆಕ್ಕೆಜೋಳ - 1,654 ಹೆಕ್ಟೇರ್, ಗೋಧಿ - 7,358 ಹೆಕ್ಟೇರ್, ಕಡಲೆ - 1,310 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.‌

ಒಟ್ಟಾರೆ ಹಿಂಗಾರಿ ಜೋಳ - 30,365 (70.1%) ಹೆಕ್ಟೇರ್, ಮೆಕ್ಕೆಜೋಳ - 13,285 (48.9%) ಹೆಕ್ಟೇರ್, ಗೋಧಿ - 28,648 (137.3%) ಹೆಕ್ಟೇರ್, ರಾಗಿ - 09 (8.5%) ಹೆಕ್ಟೇರ್, ಕಡಲೆ - 40,421 (94.9%) ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಮುಗಿದಿದೆ ಎಂದು ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಅಧಿಕಾರಿ ಎಲ್​​ ಐ ರೂಡಗಿ‌ ಈಟಿವಿ ಭಾರತಗಕ್ಕೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.