ETV Bharat / state

ಪೂರ್ಣ ಪ್ರಮಾಣದ ಅವಧಿಗೆ ಬಿಎಸ್​ವೈ ಸಿಎಂ ಆಗಿರುತ್ತಾರೆ : ಸಚಿವ ಬಸವರಾಜ ಬೊಮ್ಮಾಯಿ

ಪೂರ್ಣ ಪ್ರಮಾಣದ ಅವಧಿಗೆ ಯಡಿಯೂರಪ್ಪರವರು ಸಿಎಂ ಆಗಿರುತ್ತಾರೆ. ಮುಂದಿನ ಅವಧಿಗೂ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಸದೃಢ, ಸಮರ್ಥ ನಾಯಕತ್ವದ ಆಡಳಿತ ಬಿಎಸ್‌ವೈ ಕೊಡುತ್ತಿದ್ದಾರೆ..

author img

By

Published : Dec 1, 2020, 12:57 PM IST

ಬೆಳಗಾವಿ : ಸಿಎಂ ಬಿ ಎಸ್ ಯಡಿಯೂರಪ್ಪನವರೇ ಮುಂದಿನ ಅವಧಿವರೆಗೂ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಈ ಅವಧಿ ಪೂರ್ಣಗೊಳಿಸಿ, ಮುಂದಿನ ಅವಧಿಗೂ ಬಿಎಸ್‌ವೈ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ನಮ್ಮ ರಾಜ್ಯದಲ್ಲಿ ಅನುಭವಿ ಹೋರಾಟಗಾರ ಸಿಎಂ ಆಗಿ ಇದ್ದಾರೆ ಎಂದರು.

ಬಿಎಸ್‌ವೈ ನೇತೃತ್ವದಲ್ಲಿ 2018ರ ಚುನಾವಣೆ ಎದುರಿಸಿ ಜನಾದೇಶ ಪಡೆದಿದ್ದೀವಿ. ಬಹುಮತ ಇಲ್ಲದ ಸಂದರ್ಭದಲ್ಲಿ ಬಿಎಸ್‌ವೈ ನೇತೃತ್ವದಲ್ಲಿ ಬಹುಮತ ಪಡೆದು ಸರ್ಕಾರ ಮಾಡಿದ್ದೇವೆ. ಜನಾದೇಶ ಇವತ್ತು ಬಿ ಎಸ್‌ ಯಡಿಯೂರಪ್ಪ ಪರವಾಗಿದೆ.

ಪೂರ್ಣ ಪ್ರಮಾಣದ ಅವಧಿಗೆ ಯಡಿಯೂರಪ್ಪರವರು ಸಿಎಂ ಆಗಿರುತ್ತಾರೆ. ಮುಂದಿನ ಅವಧಿಗೂ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಸದೃಢ, ಸಮರ್ಥ ನಾಯಕತ್ವದ ಆಡಳಿತ ಬಿಎಸ್‌ವೈ ಕೊಡುತ್ತಿದ್ದಾರೆ ಎಂದರು.

ಹಿಂಡಲಗಾ ಜೈಲಿನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ರಾಜಾತಿಥ್ಯ ವಿಚಾರಕ್ಕೆ, ನಾವು ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಅದರಲ್ಲಿ ಎರಡನೇ ಮಾತಿಲ್ಲ. ಪ್ರಿಸನ್ ಆ್ಯಕ್ಟ್ ಇದೆ. ಪ್ರಿಸನ್ ಕೋರ್ಟ್ ಇದೆ. ಅದರ ಪ್ರಕಾರ ನಡೆದುಕೊಳ್ಳಬೇಕು. ರಾಜಿ ಮಾಡಿಕೊಳ್ಳಲು ಯಾವುದೇ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.