ETV Bharat / state

ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಪೊರಕೆ ಹಿಡಿದ ಚಂದ್ರಶೇಖರ ಶಿವಾಚಾರ್ಯ ಶ್ರೀ... ಗಲ್ಲಿ ಗಲ್ಲಿಯಲ್ಲೂ ಕ್ಲೀನ್​

author img

By

Published : Oct 2, 2019, 2:22 PM IST

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಮ್ಮ ಮಠದ ಶಿಷ್ಯಂದಿರು ಮತ್ತು ತಹಶೀಲ್ದಾರ ನೇತೃತ್ವದಲ್ಲಿ ಹುಕ್ಕೇರಿಯ ವಿವಿಧ ಗಲ್ಲಿಗಳನ್ನು ಸ್ವಚ್ಚಗೊಳಿಸಿದರು.

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

ಚಿಕ್ಕೋಡಿ : ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್ ನಿಷೇಧಕ್ಕೆ ಕೇಂದ್ರ ಸರ್ಕಾರ ಆದೇಶಿಸಿದ್ದರೂ ಈವರೆಗೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಆಗಿಲ್ಲ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಂಕಲ್ಪ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ತಮ್ಮ ಮಠದ ಶಿಷ್ಯಂದಿರು ಮತ್ತು ತಹಸೀಲ್ದಾರರ ನೇತೃತ್ವದಲ್ಲಿ ಹುಕ್ಕೇರಿಯ ವಿವಿಧ ಗಲ್ಲಿಗಳನ್ನು ಸ್ವತಃ ಸ್ವಾಮೀಜಿಗಳೇ ಸ್ವಚ್ಛ ಮಾಡಿದರು. ಕಳೆದ ವರ್ಷದಿಂದಲೇ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಸಂಕಲ್ಪ ಮಾಡಿದ್ದಾರೆ.

ಇನ್ನು ಮಠದ ಯಾವುದೇ ಕಾರ್ಯಕ್ರಮಗಳಲ್ಲಿ ಕೊಡಮಾಡಲಾಗುವ ಪ್ರಶಸ್ತಿ ಫಲಕಗಳಲ್ಲಿಯೂ ಸಹ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಪ್ಲಾಸ್ಟಿಕ್ ನಿಷೇಧಿಸಿ ಮಾದರಿಯಾಗಿರುವ ಹುಕ್ಕೇರಿಯ ಹಿರೇಮಠದಿಂದ ಇವತ್ತು ಗಾಂಧಿ ಜಯಂತಿ ನಿಮಿತ್ತವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ ಮತ್ತು ಪ್ಲಾಸ್ಟಿಕ್ ನಿಷೇಧ ಕಾರ್ಯಕ್ರಮವನ್ನು ಕೇವಲ ವೇದಿಕೆ ಕಾರ್ಯಕ್ರಮ ಮಾಡದೆ ಬೀದಿಗಿಳಿದು ತಾವೇ ಸ್ಚಚ್ಛತೆ ಮಾಡುವ ಮೂಲಕ ಸ್ವಾಮೀಜಿ ಮಾದರಿಯಾಗಿದ್ದಾರೆ. ಹುಕ್ಕೇರಿಯ ವಿವಿಧ ದೇವಸ್ಥಾನಗಳಿಗೆ ಡಸ್ಟಬಿನ್‌ ನೀಡಿ ಜನರಿಗೆ ಕಸವನ್ನು ಡಸ್ಟಬಿನ್ ಗೆ ಹಾಕುವಂತೆ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಪ್ಲಾಸ್ಟಿಕ್ ನಿಷೇಧದ ಆದೇಶ ಹೊರಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ಸಂಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ನಿಷೇಧ ಸಾಧ್ಯವಾಗುತ್ತಿಲ್ಲ. ಕೇವಲ ವಿಶೇಷ ದಿನದಂದು ಮಾತ್ರ ಜನಪ್ರತಿನಿಧಿಗಳು ಹೊರಬಂದು ಸ್ಚಚ್ಛತಾ ಕಾರ್ಯದಲ್ಲಿ ತೊಡಗದೆ ದಿನಂ ಪ್ರತಿ ಇದರ ಬಗ್ಗೆ ಲಕ್ಷ್ಯವಹಿಸಿ ಕೆಲಸ ಮಾಡಿದರೆ ನಾವು ಪ್ಲಾಸ್ಟಿಕ್ ಮುಕ್ತ ಭಾರತದ ಕನಸನ್ನು ಸಾಕಾರಗೊಳಿಸಿಕೊಳ್ಳಬಹದು ಎಂದರು.

Intro:ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಂಕಲ್ಪBody:

ಚಿಕ್ಕೋಡಿ :

ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್ ನಿಷೇಧಕ್ಕೆ ಕೇಂದ್ರ ಸರ್ಕಾರ ಅದೇಶಿಸಿದ್ದರೂ ಈ ವೆರೆಗೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಆಗಿಲ್ಲ‌ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ತಮ್ಮ ಮಠದ ಶಿಷ್ಯಂದಿರು ಮತ್ತು ತಹಶೀಲ್ದಾರ ನೇತೃತ್ವದಲ್ಲಿ ಹುಕ್ಕೇರಿಯ ವಿವಿಧ ಗಲ್ಲಿಗಳನ್ನು ಸ್ವತಃ ಸ್ವಾಮೀಜಿಗಳೇ ಸ್ವಚ್ಛ ಮಾಡಿದರು.
ಕಳೆದ ವರ್ಷದಿಂದಲೇ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಸಂಕಲ್ಪ ಮಾಡಿದ್ದಾರೆ.

ಇನ್ನು ಮಠದ ಯಾವುದೇ ಕಾರ್ಯಕ್ರಮಗಳಲ್ಲಿ ಕೊಡಮಾಡಲಾಗುವ ಪ್ರಶಸ್ತಿ ಫಲಗಳಲ್ಲಿಯೂ ಸಹ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಪ್ಲಾಸ್ಟಿಕ್ ನಿಷೇಧಿಸಿ ಮಾದರಿಯಾಗಿರುವ ಹುಕ್ಕೇರಿಯ ಹಿರೇಮಠದಿಂದ ಇವತ್ತು ಗಾಂಧಿ ಜಯಂತಿ ನಿಮಿತ್ಯವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ ಮತ್ತು ಪ್ಲಾಸ್ಟಿಕ್ ನಿಷೇಧ ಕಾರ್ಯಕ್ರಮವನ್ನು ಕೇವಲ ವೇದಿಕೆ ಕಾರ್ಯಕ್ರಮ ಮಾಡದೆ ಬೀದಿಗಿಳಿದು ತಾವೇ ಸ್ಚಚ್ಛತೆ ಮಾಡುವ ಮೂಲಕ ಸ್ವಾಮೀಜಿ ಮಾದರಿಯಾಗಿದ್ದಾರೆ. ಹುಕ್ಕೇರಿಯ ವಿವಿಧ ದೇವಸ್ಥಾನಗಳಿಗೆ ಡಸ್ಟಬಿನ್‌ ನೀಡಿ ಜನರಿಗೆ ಕಸವನ್ನು ಡಸ್ಟಬಿನ್ ಗೆ ಹಾಕುವಂತೆ ಮನವಿ ಮಾಡಿದರು.

ಪ್ರಧಾನಿ ನರೇಂದ್ರ‌ ಮೋದಿಯವರು ಪ್ಲಾಸ್ಟಿಕ್ ನಿಷೇಧದ ಆದೇಶ ಹೊರಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ಸಂಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ನಿಷೇಧ ಸಾಧ್ಯವಾಗುತ್ತಿಲ್ಲ. ಕೇವಲ ವಿಶೇಷ ದಿನದಂದು ಮಾತ್ರ ಜನಪ್ರತಿನಿಧಿಗಳು ಹೊರಬಂದು ಸ್ಚಚ್ಛತಾ ಕಾರ್ಯದಲ್ಲಿ ತೊಡಗದೆ ದಿನಂ ಪ್ರತಿ ಇದರ ಬಗ್ಗೆ ಲಕ್ಷ್ಯವಹಿಸಿ ಕೆಲಸ ಮಾಡಿದರೆ ನಾವು ಪ್ಲಾಸ್ಟಿಕ್ ಮುಕ್ತ ಭಾರತದ ಕನಸನ್ನು ಸಾಕಾರಗೊಳಿಸಿಕೊಳ್ಳಬಹದು ಎಂದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.