ETV Bharat / state

ಖುರ್ಚಿ ಆಸೆಗಾಗಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು : ಕೇಂದ್ರ ಸಚಿವ ನಾರಾಯಣಸ್ವಾಮಿ ವ್ಯಂಗ್ಯ - ಬೆಳಗಾವಿಯಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ನಾರಾಯಣಸ್ವಾಮಿ ಪ್ರತಿಕ್ರಿಯೆ

ಕಾಂಗ್ರೆಸ್ ಅಂಬೇಡ್ಕರ್​ ಅವರಿಂದ ರಾಜೀನಾಮೆ ಪಡೆಯಿತು. ಅಂಬೇಡ್ಕರ್ ಅವರಿಂದ ರಾಜೀನಾಮೆ ಪಡೆದ ಪಕ್ಷ ಯಾವುದು? ಅಂಬೇಡ್ಕರ್ ರಾಜೀನಾಮೆ ನೀಡಿದ್ದೇಕೆ ಎಂಬ ಸತ್ಯ ಸಂಗತಿಯನ್ನು ಸಿದ್ದರಾಮಯ್ಯನವರು ದೇಶಕ್ಕೆ ತಿಳಿಸಬೇಕು. ಈ ಮಾಹಿತಿ ದೇಶದ ಜನರಿಗೆ ತಿಳಿಸಿದ್ರೆ ಸಿದ್ದರಾಮಯ್ಯಗೆ ನಾನು ತಲೆ ಬಾಗುತ್ತೇನೆ ಎಂದು ಗುಡುಗಿದರು..

Central Minister Narayana swamy
ಕೇಂದ್ರ ಸಚಿವ ನಾರಾಯಣಸ್ವಾಮಿ
author img

By

Published : Oct 2, 2021, 3:46 PM IST

ಬೆಳಗಾವಿ : ಆರ್​​ಎಸ್​ಎಸ್​​ ಸಂಸ್ಕೃತಿ ಹಾಗೂ ತಾಲಿಬಾನ್ ಸಂಸ್ಕೃತಿ ಒಂದೇ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿರುಗೇಟು ನೀಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ವ್ಯಂಗ್ಯ..

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪರಿಚಯವಿಲ್ಲ. ಅವರು ಜನತಾ ಪರಿವಾರದಿಂದ ಬಂದವರು. ಅಧಿಕಾರದ ಆಸೆ, ಖುರ್ಚಿಗಾಗಿ ಅವರು ಕಾಂಗ್ರೆಸ್ ಸೇರಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ‌ ಬಂದಾಗ ಅಂಬೇಡ್ಕರ್ ಕೇಂದ್ರ ಸಚಿವರಾಗಿದ್ದರು. ಮಹಿಳೆಯರು ಸಂಸತ್ ಪ್ರವೇಶಿಸುವ ಕಾಯ್ದೆ ಜಾರಿಗೆ ಅಂಬೇಡ್ಕರ್ ಮುಂದಾಗಿದ್ದರು. ಆಗ ಕಾಂಗ್ರೆಸ್ ಪಕ್ಷರವರೇ ಮಹಿಳಾ ಪ್ರವೇಶ ಕಾಯ್ದೆ ವಿರೋಧಿಸಿದ್ದರು ಎಂದು ವಾಗ್ದಾಳಿ ನಡೆಸಿದರು.

ಸತ್ಯ ಬಹಿರಂಗ ಮಾಡಿ : ಕಾಂಗ್ರೆಸ್ ಅಂಬೇಡ್ಕರ್​ ಅವರಿಂದ ರಾಜೀನಾಮೆ ಪಡೆಯಿತು. ಅಂಬೇಡ್ಕರ್ ಅವರಿಂದ ರಾಜೀನಾಮೆ ಪಡೆದ ಪಕ್ಷ ಯಾವುದು? ಅಂಬೇಡ್ಕರ್ ರಾಜೀನಾಮೆ ನೀಡಿದ್ದೇಕೆ ಎಂಬ ಸತ್ಯ ಸಂಗತಿಯನ್ನು ಸಿದ್ದರಾಮಯ್ಯನವರು ದೇಶಕ್ಕೆ ತಿಳಿಸಬೇಕು. ಈ ಮಾಹಿತಿ ದೇಶದ ಜನರಿಗೆ ತಿಳಿಸಿದ್ರೆ ಸಿದ್ದರಾಮಯ್ಯಗೆ ನಾನು ತಲೆ ಬಾಗುತ್ತೇನೆ ಎಂದು ಗುಡುಗಿದರು.

ಅಂತರ್ ಯುದ್ಧಗಳು ಹೆಚ್ಚಾಗಿದ್ದವು : ಸ್ವಾತಂತ್ರ್ಯದ ನಂತರ 57 ವರ್ಷ ಕಾಂಗ್ರೆಸ್ ದೇಶದಲ್ಲಿ ಅಧಿಕಾರ ನಡೆಸಿದೆ. ಅಲ್ಪಸಂಖ್ಯಾತರು-ಹಿಂದೂಗಳ ನಡುವೆ ಯುದ್ಧದ ವರದಿಗಳೇ ಪತ್ರಿಕೆಗಳಲ್ಲಿ ಪುಟಗಟ್ಟಲೇ ಬರುತ್ತಿದ್ದವು. ಕಾಂಗ್ರೆಸ್ ನಾಯಕರ ನಡುವಳಿಕೆಯಿಂದ ಅವರ ಕಾಲದಲ್ಲಿ ‌ದೇಶದಲ್ಲಿ ಅಂತರ್ ಯುದ್ಧಗಳು ಹೆಚ್ಚಾಗಿದ್ದವು ಎಂದರು.

ಲೋಪಗಳೇನು ಹೇಳಿ?: ಪ್ರತಿಪಕ್ಷದವರು ನೂತನ ಶಿಕ್ಷಣ ನೀತಿ ಜಾರಿಯನ್ನು ವಿರೋಧಿಸುತ್ತಿರುವುದ್ದೇಕೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದರಲ್ಲಿ ಆರ್‌ಎಸ್ಎಸ್ ವಿಚಾರಧಾರೆಗಳು ಎಲ್ಲಿವೆ. ಹೊಸ ನೀತಿ ಬಗ್ಗೆ ಅವರು ನೀಡುತ್ತಿರುವ ಹೇಳಿಕೆ ಬಗ್ಗೆ ಪ್ರಜ್ಞಾವಂತ ನಾಗರಿಕರು ಒಪ್ಪುವುದಿಲ್ಲ. ಶಿಕ್ಷಣ ನೀತಿ ಬಗ್ಗೆ ಕಾಂಗ್ರೆಸ್ ಸಂವಾದ ಮಾಡಲಿ, ತಪ್ಪನ್ನು ಹೇಳಲಿ. ಜಿಲ್ಲಾವಾರು ಡಿಬೇಟ್ ಮಾಡಿ ತಪ್ಪನ್ನು ಹೇಳಿದ್ರೆ ನಾವು ತಿದ್ದಿಕೊಳ್ಳುತ್ತೇವೆ. ಅದನ್ನು ಬಿಟ್ಟು ಸುಮ್ಮನೆ ವಿರೋಧಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.

Minister Narayana swamy made cleaning work
ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ಮಾಡಿದ ಸಚಿವರು..

ಪೊರೆಕೆ ಹಿಡಿದು ಸ್ವಚ್ಛತಾ ಕಾರ್ಯ ಮಾಡಿದ ಸಚಿವರು : ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸಚಿವ ನಾರಾಯಣಸ್ವಾಮಿಯವರು ಬೆಳಗಾವಿಯ ಸಂಗಮೇಶ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಈ ವೇಳೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ನಿಲಯದ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಸಂವಾದ : ಇದಕ್ಕೂ ಮುನ್ನ ಸಚಿವರು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳ ಅಭಾವ, ಊಟದ ಕೋಣೆ ವಿಸ್ತಿರಣೆ ಸೇರಿ ಹಲವು ಸಮಸ್ಯೆಗಳನ್ನು ಸಚಿವರ ಎದುರು ವಿದ್ಯಾರ್ಥಿಗಳು ಹೇಳಿದರು. ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರು.

ಇದನ್ನೂ ಓದಿ: ದಸರಾ ಉದ್ಘಾಟಕರಾಗಿ ಎಸ್ ಎಂ ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬೊಮ್ಮಾಯಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.