ಚಿಕ್ಕೋಡಿ: ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ವಿಜಯ ಪತಾಕೆ ಹಾರಿಸುತ್ತಿದ್ದಂತೆ ಚಿಕ್ಕೋಡಿ ಪಟ್ಟಣದಲ್ಲಿ ಚಂದ್ರಕಾಂತ ಹುಕ್ಕೇರಿ ಹಾಗೂ ಅವರ ಅಭಿಮಾನಿಗಳಿಂದ ಜನರಿಗೆ ಸಿಹಿ ಹಂಚಿಕೆ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಕುರಿತು ಅರವಿಂದ ಕೇಜ್ರಿವಾಲ್ ಅಭಿಮಾನಿ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಒಳ್ಳೆಯ ವ್ಯಕ್ತಿಗೆ ದೆಹಲಿ ಜನತೆ ಮತ್ತೆ ಸಿಎಂ ಆಗಲು ಅವಕಾಶ ನೀಡಿದೆ. ಅದರಂತೆ ಅವರ ಜನಪರ ಯೋಜನೆಗಳು ಎಲ್ಲ ಬಡ ಜನರಿಗೆ ಮುಟ್ಟಿವೆ. ದೆಹಲಿ ಸರ್ಕಾರದ ನಿಯಮಾವಳಿಗಳು ಅತಿ ಶೀಘ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ಬರಲಿ ಎಂದರು.