ETV Bharat / state

ಸಿಡಿ ಯುವತಿ ಕಿಡ್ನಾಪ್ ಪ್ರಕರಣ ಆರ್​ಟಿ ನಗರ‌ ಠಾಣೆಗೆ ಶಿಫ್ಟ್! - CD Victim Woman kidnap case

ರಮೇಶ್ ‌ಜಾರಕಿಹೊಳಿ ಸಿಡಿ ಪ್ರಕರಣದಲ್ಲಿದ್ದಾರೆ ಎನ್ನಲಾದ ಯುವತಿಯ ಕಿಡ್ನಾಪ್ ಪ್ರಕರಣವನ್ನು ಡಿಜಿ-ಐಜಿಪಿ ನಿರ್ದೇಶನ ಮೇರೆಗೆ ಆರ್​ಟಿ ನಗರ ಪೊಲೀಸ್ ‌ಠಾಣೆಗೆ ವರ್ಗಾವಣೆ ಮಾಡಲಾಗಿದೆ.

CD Victim Woman kidnap case shift
ಆರ್​ಟಿ ನಗರ‌ ಠಾಣೆಗೆ ಕೇಸ್​ ಶಿಫ್ಟ್
author img

By

Published : Mar 18, 2021, 2:57 PM IST

Updated : Mar 18, 2021, 3:27 PM IST

ಬೆಳಗಾವಿ: ರಮೇಶ್ ‌ಜಾರಕಿಹೊಳಿ ಸಿಡಿ ಪ್ರಕರಣದಲ್ಲಿದ್ದಾರೆ ಎನ್ನಲಾದ ಯುವತಿಯ ಕಿಡ್ನಾಪ್ ಪ್ರಕರಣವನ್ನು ಬೆಳಗಾವಿಯ ಎಪಿಎಂಸಿ ಠಾಣೆಯಿಂದ ಬೆಂಗಳೂರಿನ ಆರ್​ಟಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಸಿಡಿ ಪ್ರಕರಣ ಬೆಳಕಿಗೆ ಬಂದ ನಂತರ ಯುವತಿ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ವಾಸವಿದ್ದ ಯುವತಿಯ ತಂದೆ ಮಾ.16 ರಂದು ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ 363, 368, 343, 346, 354,506 ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿದ್ದರು.

ಬೆಂಗಳೂರಿನ ಹಾಸ್ಟೆಲ್​​ನಲ್ಲಿದ್ದಾಗ ನನ್ನ ಪುತ್ರಿಯನ್ನು ಅಪಹರಿಸಿದ್ದಾರೆ. ಆಕೆಯನ್ನು ಹೆದರಿಸಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಅಶ್ಲೀಲವಾದ ಸಿಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಯುವತಿ ತಂದೆ ಪ್ರಕಾಶ್ ದೂರಿನಲ್ಲಿ ಉಲ್ಲೇಖಿಸಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ ಮಾರ್ಕೆಟ್ ವಿಭಾಗದ ಎಸಿಪಿ ನೇತೃತ್ವದಲ್ಲಿ ತಂಡ ರಚಿಸಿ ಯುವತಿಗಾಗಿ ಶೋಧ ನಡೆಸಲಾಗಿತ್ತು. ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಬಳಿಕ ಈ ವರದಿಯನ್ನು ಮಹಾನಗರ ‌ಪೊಲೀಸರು ಡಿಜಿ-ಐಜಿಪಿಗೆ ರವಾನಿಸಿದ್ದಾರೆ. ಡಿಜಿ-ಐಜಿಪಿ ನಿರ್ದೇಶನ ಮೇರೆಗೆ ಕಿಡ್ನಾಪ್​ ಪ್ರಕರಣವನ್ನು ಆರ್​ಟಿ ನಗರ ಪೊಲೀಸ್ ‌ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಯ ತಂದೆಯಿಂದ ಕಿಡ್ನಾಪ್ ಕೇಸ್ ದಾಖಲು

Last Updated : Mar 18, 2021, 3:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.