ETV Bharat / state

ಸಿಡಿ ಪ್ರಕರಣದ ತ‌ನಿಖೆಯನ್ನು ಎಸ್ಐಟಿಗೆ ನೀಡಿರುವುದು ಸ್ವಾಗತಾರ್ಹ: ಸತೀಶ್ ಜಾರಕಿಹೊಳಿ‌‌ - Satish Jarakiholi lastest news

ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣದ ತನಿಖೆಯನ್ನು ಎಸ್ಐಟಿ ಯಾವ ಹಂತಕ್ಕೆ ತನಿಖೆ ಮಾಡಲಿದೆ ಎಂಬುವುದನ್ನು ಕಾದು ನೋಡಬೇಕಿದೆ. ಆದರೆ ತನಿಖೆಯನ್ನು ಎಸ್ಐಟಿಗೆ ವಹಿಸಿರುವುದನ್ನು ನಾವು ಸದ್ಯಕ್ಕೆ ಸ್ವಾಗತ ಮಾಡುತ್ತೇವೆ. ಸಿಡಿ ಪ್ರಕರಣದ ಕುರಿತು ಈವರೆಗೆ ಕೇಸ್ ದಾಖಲಾಗಿಲ್ಲ. ವಿಚಾರಣೆ ಮಾಡುವ ಅಧಿಕಾರ ಮಾತ್ರ ಎಸ್ಐಟಿಗೆ ಕೊಟ್ಟಿದ್ದಾರೆ. ನಿನ್ನೆ ಗೃಹ ಸಚಿವರು ಎಫ್ಐಆರ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಇಲ್ಲವಾದರೆ ರಮೇಶ್ ಅವರೇ ಖುದ್ದಾಗಿ ದೂರು ಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

CD case given to SIT
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌
author img

By

Published : Mar 12, 2021, 8:31 PM IST

Updated : Mar 12, 2021, 8:43 PM IST

ಬೆಳಗಾವಿ: ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸದ್ಯದ ಮಟ್ಟಿಗೆ ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಎಸ್ಐಟಿ ಯಾವ ಹಂತಕ್ಕೆ ತನಿಖೆ ಮಾಡಲಿದೆ ಎಂಬುವುದನ್ನು ಕಾದು ನೋಡಬೇಕಿದೆ. ಆದರೆ ತನಿಖೆಯನ್ನು ಎಸ್ಐಟಿಗೆ ವಹಿಸಿರುವುದನ್ನು ನಾವು ಸದ್ಯಕ್ಕೆ ಸ್ವಾಗತ ಮಾಡುತ್ತೇವೆ. ಸಿಡಿ ಪ್ರಕರಣದ ಕುರಿತು ಈವರೆಗೆ ಕೇಸ್ ದಾಖಲಾಗಿಲ್ಲ. ವಿಚಾರಣೆ ಮಾಡುವ ಅಧಿಕಾರ ಮಾತ್ರ ಎಸ್ಐಟಿಗೆ ಕೊಟ್ಟಿದ್ದಾರೆ. ನಿನ್ನೆ ಗೃಹ ಸಚಿವರು ಎಫ್ಐಆರ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಇಲ್ಲವಾದರೆ ರಮೇಶ್ ಅವರೇ ಖುದ್ದಾಗಿ ದೂರು ಕೊಡಬೇಕು. ಈಗ ಎರಡೇ ಆಯ್ಕೆ ಇದೆ. ಒಂದು ರಮೇಶ್ ಜಾರಕಿಹೊಳಿ‌ ದೂರು ಕೊಡಬೇಕು, ಇಲ್ಲವೆ ಎಸ್ಐಟಿಯ ತನಿಖಾ ವರದಿ ಆಧರಿಸಿ ಸರ್ಕಾರವೇ ಎಫ್ಐಆರ್ ದಾಖಲಿಸುವ ನಿರ್ಧಾರ ಮಾಡಬೇಕು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ತನಿಖೆ ಆದ್ಮೇಲೆ ಎಲ್ಲಾ ಗೊತ್ತಾಗುತ್ತೆ. ಈಗ ಊಹಾಪೋಹ ಅಷ್ಟೇ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌

ಈ ಪ್ರಕರಣದಿಂದ ಜಾರಕಿಹೊಳಿ‌ ಕುಟುಂಬಕ್ಕೆ ಮುಜುಗರ ಆಗಿರಬಹುದು. ನಮ್ಮ ಬೆಂಬಲಿಗರು, ನಮ್ಮ ಶಕ್ತಿ, ವೋಟ್ ಬ್ಯಾಂಕ್ ಮೇಲೆ ಯಾವುದೇ ಪರಿಣಾಮ ಆಗಲ್ಲ. ಪ್ರಕರಣದ ಸುಖಾಂತ್ಯಕ್ಕೆ ಪೊಲೀಸ್ ತನಿಖಾ ವರದಿಯೇ ಪರಿಹಾರ. ಪ್ರಕರಣದ ಹಿಂದೆ 2+ 4+ 3 ಇದ್ದಾರೆಂಬ ಬಾಲಚಂದ್ರ ಜಾರಕಿಹೊಳಿ‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಸತೀಶ್, ಅವರು ಪ್ರಾಥಮಿಕ ಹಂತದಲ್ಲಿ ತನಿಖೆ ಮಾಡಿದಾಗ ಅದನ್ನ ಹೇಳಿದ್ದಾರೆ ಎಂದರು.

ಇನ್ನು ಎಸ್​ಐಟಿಯವರು ಬೆನ್ನು ಹತ್ತಿ 2+ 4+ 3 ಯಾರೆಂದು ಕಂಡು ಹಿಡಿಯಬೇಕು. ಮಹಾನಾಯಕ ಯಾರಂತ ಗೊತ್ತಿಲ್ಲ, ನಿಮಗೆ ಗೊತ್ತಿರಬೇಕು. ತನಿಖೆ ಆದಮೇಲೆ ಇನ್ನೊಂದು ತಿಂಗಳಲ್ಲಿ ಮಹಾನಾಯಕ ಯಾರು ಅಂತ ಬಹಿರಂಗ ಆಗುತ್ತೆ. ಎಸ್ಐಟಿ ರಚನೆ ವಿಚಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳುವುದರಲ್ಲಿ‌ ನಿಜಾಂಶ ಇದೆ. ಗೃಹ ಸಚಿವರು ನೋಡಿ ಎಫ್ಐಆರ್ ಮಾಡ್ತೀವಿ ಅಂದಿದ್ದಾರೆ. ಎಸ್‌ಐಟಿಯವರು ವರದಿ ಕೊಡ್ತಾರೆ ಅಷ್ಟೇ, ಪ್ರಕರಣ ದಾಖಲಾದ ಮೇಲೆಯೇ ಶಿಕ್ಷೆಯಾಗೋದು. 70 ವರ್ಷಗಳಲ್ಲಿ ಇಂತಹ ಸಾಕಷ್ಟು ವರದಿಗಳು ಬಂದಿವೆ. ಶಿಕ್ಷೆ ಆಗಬೇಕಾದರೆ ಎಫ್‌ಐಆರ್ ಆಗಬೇಕು ಎಂದರು.

ಓದಿ:ಸಿಡಿ ಪ್ರಕರಣದ SIT ತನಿಖೆ ಚುರುಕು: ರಾಮನಗರದ ಯುವತಿ ಸೇರಿ ಐವರನ್ನು ವಶಕ್ಕೆ ಪಡೆದು ವಿಚಾರಣೆ

ಹೆಲಿಕಾಪ್ಟರ್‌ನಲ್ಲಿ ಕೂಡಲಸಂಗಮಕ್ಕೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕೂಡಲಸಂಗಮಕ್ಕೆ ಹೋಗಿದ್ದನ್ನು ಬೇರೆ ಬೇರೆ ರೀತಿ ಅರ್ಥೈಸಲಾಗುತ್ತಿದೆ, ಏನೂ ಮಾಡಕ್ಕಾಗಲ್ಲ. ಕೂಡಲಸಂಗಮದಲ್ಲಿ ಅವರೇನೂ ಇರಲಿಲ್ವಲ್ಲ. ಓರಿಯನ್ ಮಾಲ್, ಯಶವಂತಪುರ ಅಪಾರ್ಟ್‌ಮೆಂಟ್‌ನಲ್ಲಿ ಬಹಳ ಜನ ರಾಜಕಾರಣಿಗಳಿದ್ದಾರೆ. ಆ ಎರಡೂ ಕಡೆ ಎಲ್ಲಾ ಪಕ್ಷದವರೂ ಇದ್ದಾರೆ. ಪೊಲೀಸರು ಹೋದಾಗಲೇ ಗೊತ್ತಾಗೋದು. ಇಂತವರೇ ಅಂತಾ ತೋರಿಸೋಕೆ ಹೋಗಿ ಮಿಸ್‌ಫೈರ್ ಆದ್ರೆ ಏನ್ ಮಾಡೋದು. ಎಲ್ಲಿ ನಡೆದಿದೆ, ಏನು ನಡೆದಿದೆ ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು. ರಮೇಶ್ ಜಾರಕಿಹೊಳಿ‌ ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಪ್ರಕರಣ ದಾಖಲಿಸಬಹುದು. ಆ ಅವಕಾಶ ರಮೇಶ್ ಜಾರಕಿಹೊಳಿ‌ಗಿದೆ ಎಂದರು.

Last Updated : Mar 12, 2021, 8:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.