ETV Bharat / state

ದ್ವೇಷಿಸುವುದಕ್ಕಲ್ಲ ಮನುಷ್ಯರ ಹಿತಕ್ಕಾಗಿ ಧರ್ಮ.. ಬಸವಣ್ಣ ಧರ್ಮಕ್ಕೆ ಸರಳ ವಿವರಣೆ ಕೊಟ್ಟಿದಾರೆ: ಸಿದ್ದರಾಮಯ್ಯ - ರ್ಮ ಇರುವುದು ಮನುಷ್ಯರ ಹಿತಕ್ಕಾಗಿ

ಧರ್ಮವನ್ನು ವೈಭವೀಕರಿಸಲು ಹೋಗಬಾರದು. ಧರ್ಮ ಇರುವುದು ಮನುಷ್ಯರ ಹಿತಕ್ಕಾಗಿ. ಧರ್ಮಕ್ಕೆ ಮನುಷ್ಯರು ಅಂತಿಲ್ಲ. ಮನುಷ್ಯರು ಮನುಷ್ಯರನ್ನು ದ್ವೇಷ ಮಾಡುವುದು ಧರ್ಮ ಅಲ್ಲ. ಮನುಷ್ಯರನ್ನು ಪ್ರೀತಿಸುವುದು ನಿಜವಾದ ಧರ್ಮ ಎಂದು ಸಿದ್ದರಾಮಯ್ಯ ಹೇಳಿದರು..

Shivamurthy devara Pattadhikara Ceremony
ತೋಂಟದಾರ್ಯ ಮಠದ ಶಿವಮೂರ್ತಿ ದೇವರ ಪಟ್ಟಾಧಿಕಾರ ಮಹೋತ್ಸವ
author img

By

Published : May 7, 2022, 7:07 PM IST

ಬೆಳಗಾವಿ : ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಇರುವ ಕಾರಣಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಇನ್ನೂ ಅಸಮಾನತೆ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಅಸಮಾನತೆಗೆ ಜಾತಿ ವ್ಯವಸ್ಥೆಯೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ತೋಂಟದಾರ್ಯ ಮಠದ ಶ್ರೀ ಶಿವಮೂರ್ತಿ ದೇವರ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮಕ್ಕೆ ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಅರಳಿಕಟ್ಟಿ ಮಠ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಪರಂಪರೆಯ ಮಠವಾಗಿದೆ. ಬಸವಾದಿ ಶರಣರ ವಿಚಾರಧಾರೆ ಬಿತ್ತಿ ಬೆಳೆಸಲು ಯಡಿಯೂರು ಸಿದ್ದಲಿಂಗಯ್ಯ ಪ್ರಯತ್ನ ಮಾಡಿದರು. ಬಸವಾದಿ ಶರಣರ ವಿಚಾರಧಾರೆ ಸದಾಕಾಲವೂ ಪ್ರಸ್ತುತ ಎಂದರು. 850 ವರ್ಷಗಳ ಹಿಂದೆ 12ನೇ ಶತಮಾನದಲ್ಲಿ ಅಸಮಾನತೆ ಪಿಡುಗನ್ನ ಹೋಗಲಾಡಿಸಲು ಬಸವೇಶ್ವರ ನಾಯಕತ್ವದಲ್ಲಿ ಅನೇಕ ಶರಣರು ಪ್ರಯತ್ನ ಮಾಡಿದ್ದಾರೆ.

ದಾರ್ಶನಿಕರು, ಸಂತರು, ಸೂಪಿಗಳು ಅಸಮಾನತೆ ಹೋಗಲಾಡಿಸಲು ಯತ್ನಿಸಿದರು. ಮನುಷ್ಯ ಮನುಷ್ಯರಾಗಿರಬೇಕು ಅನ್ನುವ ತತ್ತ್ವ ಇತ್ತು. ಜಾತಿಯ ಸೋಂಕು ಇರಬಾರದು. ಪರಸ್ಪರ ಪ್ರೀತಿ, ವಿಶ್ವಾಸದಿಂದ ದ್ವೇಷ ಇರದ ಸಮ ಸಮಾಜದ ಕನಸನ್ನು ಕಂಡಿದ್ದರು ಎಂದರು.

ತೋಂಟದಾರ್ಯ ಮಠದ ಶ್ರೀ ಶಿವಮೂರ್ತಿ ದೇವರ ಪಟ್ಟಾಧಿಕಾರ ಮಹೋತ್ಸವ..

ಮನುಷ್ಯರ ಹಿತಕ್ಕಾಗಿ ಧರ್ಮ : ಬಸವಣ್ಣನವರು ಧರ್ಮಕ್ಕೆ ಸರಳವಾದ ವಿವರಣೆ ಕೊಟ್ಟಿದ್ದಾರೆ. ಧರ್ಮವನ್ನು ವೈಭವೀಕರಿಸಲು ಹೋಗಬಾರದು. ಧರ್ಮ ಇರುವುದು ಮನುಷ್ಯರ ಹಿತಕ್ಕಾಗಿ. ಧರ್ಮಕ್ಕೆ ಮನುಷ್ಯರು ಅಂತಿಲ್ಲ. ಮನುಷ್ಯರು ಮನುಷ್ಯರನ್ನು ದ್ವೇಷ ಮಾಡುವುದು ಧರ್ಮ ಅಲ್ಲ. ಮನುಷ್ಯರನ್ನು ಪ್ರೀತಿಸುವುದು ನಿಜವಾದ ಧರ್ಮ.

ಹೀಗಾಗಿ‌, ನಮ್ಮ ಸಂವಿಧಾನದಲ್ಲೂ ಕೂಡ ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಂಗಡಿಸಿ ಅವಕಾಶ ನೀಡಿಲ್ಲ. ದೇಶದಲ್ಲಿ ಯೋಗ್ಯವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ. ಪ್ರತಿಯೊಬ್ಬರು ಸಂವಿಧಾನದ ಓದಬೇಕು. ಬಸವಾದಿ ಶರಣರು ಹೇಳಿದ ವಿಚಾರಗಳು ಸಂವಿಧಾನದಲ್ಲಿವೆ ಎಂದೂ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಬೇಕು. ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸಬೇಕು. ಯಾವುದೇ ಸರ್ಕಾರ ಇದ್ದರೂ ಸಂವಿಧಾನದ ಆಶಯದಂತೆ ನಡೆದುಕೊಂಡು ಹೋಗುವುದು ಆದ್ಯ ಕರ್ತವ್ಯ. ಸರ್ಕಾರ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಇರುತ್ತದೆ. ಸಮಾಜದಲ್ಲಿ ಬುದ್ಧ, ಬಸವಾದಿ ಶರಣರ ತತ್ವದ ಆದರ್ಶಗಳಲ್ಲಿ ಎಲ್ಲರೂ ಮುನ್ನಡೆಯಬೇಕೆಂದು ಸಲಹೆ ನೀಡಿದರು.

ಶ್ರೀಗಳಂತೆ ಸಿದ್ದರಾಮಯ್ಯ ಮಾತು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ರಾಜಕಾರಣ ಬಿಟ್ಟು ಸಿದ್ದರಾಮಯ್ಯನವರು ಇಂದು ಮಠದ ಶ್ರೀಗಳಂತೆ ಮಾತನಾಡಿದ್ದಾರೆ ಎಂದು ಹಾಡಿಹೊಗಳಿದರು. ಬಳಿಕ ಮುಂದುವರೆದು ಮಾತನಾಡಿದ ಡಿಕೆಶಿ, ನಾನು ಗಂಗಾಧರ್ ಅಜ್ಜನ ಶಿಷ್ಯ‌. ಬಸವಣ್ಣನವರ ಆಚಾರ, ವಿಚಾರ ಇವತ್ತು ನೆನಪಿಸಿಕೊಳ್ಳುತ್ತಿದ್ದೇವೆ‌ ಎಂದರು.

ಬಸವಣ್ಣ, ಕಿತ್ತೂರು ಚೆನ್ನಮ್ಮ, ಕುವೆಂಪು ಅವರ ಕರ್ನಾಟಕ ಉಳಿಸಿಕೊಂಡು ಬೆಳಸಿಕೊಂಡು ಹೋಗಬೇಕು ಅನ್ನೋದು ನಮ್ಮ ಸಿದ್ದಾಂತ. ಇವತ್ತು ದೇಶ, ಸಮಾಜ ಬಹಳ ಕಷ್ಟದಲ್ಲಿದೆ. ಸಮಾಜಕ್ಕೆ ತೊಂದರೆ, ಕಷ್ಟ ಆದಾಗ ಮಠಾಧೀಶರು ಧ್ವನಿ ಎತ್ತಬೇಕು. ರಾಜಕೀಯವಾಗಿ, ಒಂದು ಪಕ್ಷದ ಪರವಾಗಿ ಧ್ವನಿ ಎತ್ತಿ ಅಂತಾ ಹೇಳುವುದಿಲ್ಲ. ಸಮಾಜಕ್ಕೆ ಅನ್ಯಾಯ ಆದಾಗ ಸ್ವಾಮೀಜಿಗಳು ನೀವು ಕೈಕಟ್ಟಿ ಕುಳಿತುಕೊಂಡು ಕೂಡಬಾರದು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌, ಶಾಸಕರಾದ ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಲಕ್ಷ್ಮಿ ಹೆಬ್ಬಾಳ್ಕರ್, ವಿಧಾನ ಪರಿಷತ್​ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಕಳೆದ 70 ವರ್ಷದಿಂದ ಜನ ಸಮಸ್ಯೆಯಿಂದ ಬೇಸತ್ತಿದ್ದು, ಅದನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ : ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.