ETV Bharat / state

ಕರುನಾಡಿನಲ್ಲೂ ವಿವಾದಾತ್ಮಕ ಸ್ಟೇಟಸ್ ಪೋಸ್ಟ್: ನಿಪ್ಪಾಣಿಯಲ್ಲಿ ಪ್ರಕರಣ ದಾಖಲು

ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಸ್ಟೇಟಸ್ ಪೋಸ್ಟ್ ಮಾಡಿದ ಕೇಸ್​ಗೆ ಸಂಬಂಧಿಸಿದಂತೆ ಬಾಲಕನೊಬ್ಬನನ್ನು ನಿಪ್ಪಾಣಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

nipani
ವಿವಾದಾತ್ಮಕ ಸ್ಟೇಟಸ್ ಪೋಸ್ಟ್
author img

By

Published : Jun 8, 2023, 9:29 AM IST

Updated : Jun 8, 2023, 10:12 AM IST

ನಿಪ್ಪಾಣಿಗೆ ಭೇಟಿ ನೀಡಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಬೆಳಗಾವಿ ಎಸ್ ಪಿ

ಚಿಕ್ಕೋಡಿ: ಕೋಮು ಗಲಭೆಗೆ ಕಾರಣವಾದ ಸ್ಟೇಟಸ್​ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದ ಹಿನ್ನೆಲೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭಾರಿ ವಿವಾದ ಸೃಷ್ಟಿಯಾಗಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ನಗರ ಈಗ ಶಾಂತ ಸ್ಥಿತಿಗೆ ಬರುವಷ್ಟರಲ್ಲಿಯೇ ಆ ವಿವಾದ ಕರ್ನಾಟಕದ ನೆಲಕ್ಕೂ ಕಾಲಿಟ್ಟಿದೆ. ಸದ್ಯಕ್ಕೆ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.

ನಿಪ್ಪಾಣಿ ನಗರದ ಬಾಲಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಸ್ಟೇಟಸ್ ಪೋಸ್ಟ್​ ಮಾಡಿದ ಹಿನ್ನೆಲೆಯಲ್ಲಿ ನಿಪ್ಪಾಣಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಬಾಲಾಪರಾಧಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಪೊಲೀಸರು ತನಿಖೆ ಕೂಡಾ ಆರಂಭಿಸಿದ್ದಾರೆ.

ಕರ್ನಾಟಕ - ಮಹಾರಾಷ್ಟ್ರ ಗಡಿಯಲ್ಲಿರುವ ನಿಪ್ಪಾಣಿ ನಗರದ 16 ವರೆ ವರ್ಷದ ಬಾಲಕನೊಬ್ಬ ಸ್ಟೇಟಸ್ ಇಡುತ್ತಿದ್ದಂತೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಆತನನ್ನು ಪ್ರಶ್ನಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಹಿಂಸಾಚಾರದ ಸುದ್ದಿಗಳ ನಡುವೆ ಕೋಮು ಸಾಮರಸ್ಯ ಸ್ಥಾಪನೆ.. ರಾಮನವಮಿ ರಥ ಮುನ್ನಡೆಸಿದ ಮುಸ್ಲಿಂ ವ್ಯಕ್ತಿ

ಇನ್ನೊಂದೆಡೆ, ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ಅವರು ನಗರಕ್ಕೆ ಭೇಟಿ ನೀಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುಬೇಕೆಂದು ಅಲ್ಲಿನ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಹಾಗೂ ಸಮಾಜದ ಸ್ವಾಸ್ತ್ರ್ಯ ಕೆಡಿಸುವಂತಹ ಸ್ಟೇಟಸ್​ಗಳನ್ನು ಯಾರು ಕೂಡ ಇಡಬೇಡಿ ಎಂದು ಕರೆ ನೀಡಿದ್ದಾರೆ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಗೋಹತ್ಯೆ, ಮತಾಂತರ ನಿಷೇಧ ಬಿಲ್ ಮರು ಪರಿಶೀಲನೆ, ಶಾಂತಿ ಕದಡುವ ಸಂಘಟನೆಗಳ ವಿರುದ್ಧ ಕ್ರಮ: ಪ್ರಿಯಾಂಕ್ ಖರ್ಗೆ

ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ತಡರಾತ್ರಿ ಬೆಳಗಾವಿ ಎಸ್​ಪಿ ಅವರೇ ಕುದ್ದು ನಿಪ್ಪಾಣಿ ನಗರಕ್ಕೆ ಭೇಟಿ ನೀಡಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಹಾಗೆಯೇ, ಮಹಾರಾಷ್ಟ್ರ - ಕರ್ನಾಟಕ ರಾಜ್ಯದ ಕೊಂಡಿಯಾಗಿರುವ ನಿಪ್ಪಾಣಿಯಲ್ಲಿ ಯಾವುದೇ ಸಂಚಾರಕ್ಕೆ ತೊಂದರೆ ಇಲ್ಲ ಎಂದು ಪೊಲೀಸರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಔರಂಗಜೇಬ್​, ಟಿಪ್ಪು ಸಂಬಂಧಿತ ಪೋಸ್ಟ್​ಗಳನ್ನು ವಿರೋಧಿಸಿ ಕೊಲ್ಲಾಪುರದಲ್ಲಿ ಸಂಘಟನೆಗಳು ನಡೆಸಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವುದರಿಂದ ಜೂನ್ 19ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುನ್ನೆಚ್ಚರಿಕೆಯಾಗಿ ನಗರದಲ್ಲಿ ಭದ್ರತೆ ಒದಗಿಸಲಾಗಿದೆ. ಯಾವುದೇ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ಇದನ್ನೂ ಓದಿ : ಭಟ್ಕಳದಲ್ಲಿ ಜೀವಜಲಕ್ಕೆ ಹಾಹಾಕಾರ: ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ನೀರು ಪೂರೈಕೆ!

Last Updated : Jun 8, 2023, 10:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.