ETV Bharat / state

ಸಿದ್ದರಾಮಯ್ಯ ರಾಹುಲ್ ಗಾಂಧಿ ಮುಂದೆ ಕೈಮುಗಿದು ನಿಲ್ಲುತ್ತಾರೆ:ಪ್ರಹ್ಲಾದ್ ಜೋಶಿ ವಾಗ್ದಾಳಿ - ಸಿಡಿ ಪ್ರಕರಣದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಕಾಂಗ್ರೆಸ್​ನಲ್ಲಿ‌ ಒನ್ ಫ್ಯಾಮಿಲಿ ಒನ್ ನೇಷನ್. ರಾಹುಲ್ ಅಧ್ಯಕ್ಷ ಸ್ಥಾನ ಬಿಟ್ರು, ಮತ್ತೆ ಅವರೇ ಅಧ್ಯಕ್ಷರಾಗಿದ್ದಾರೆ. ಅಂತಹವರ ಮುಂದೆ ಸಿದ್ದರಾಮಯ್ಯ ಕೈಮುಗಿದು ನಿಲುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಅವರು ಮೆಚ್ಯುರಿಟಿಯಿಂದ ಮಾತನಾಡಬೇಕು ಎಂಬುದನ್ನು ಆಗ್ರಹಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

Cabinet minister Prahlad Joshi on Siddaramaiah
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
author img

By

Published : Mar 30, 2021, 12:46 PM IST

ಬೆಳಗಾವಿ: ಸಂತ್ರಸ್ತೆ ಅಂತಾ ಹೇಳಿಕೊಳ್ಳುತ್ತಿರುವ ಯುವತಿ ಕೋರ್ಟ್ ಇಲ್ಲವೇ ತನಿಖಾ ಸಂಸ್ಥೆ ಮುಂದೆ ಹಾಜರಾಗಿ ಹೇಳಿಕೆ ಕೊಡಬೇಕು. ಇಲ್ಲವಾದರೆ ಸಿಡಿ ಪ್ರಕರಣ ಇತ್ಯರ್ಥ ಆಗಲಿಕ್ಕೆ ಕಷ್ಟವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಹಿರಿಯ ವಯಸ್ಸಿನ ಸಿದ್ದರಾಮಯ್ಯ ಕಾಂಗ್ರೆಸ್​ನ ರಾಹುಲ್ ಗಾಂಧಿ ಮುಂದೆ ಹೇಗೆ ನಿಲ್ಲುತ್ತಾರೆ ಅನ್ನೊದನ್ನ ನೋಡಿದ್ದೇವೆ. ಇವತ್ತು ಕಾಂಗ್ರೆಸ್​ನಲ್ಲಿ ರಾಷ್ಟ್ರೀಯ ಅಧ್ಯಕ್ಷರಿಂದ ಬೂತ್ ಮಟ್ಟದ ಕಾರ್ಯಕರ್ತರವರೆಗೂ ಚುನಾವಣೆ ಆಗುವುದಿಲ್ಲ. ಇಂತಹವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ನಮ್ಮಲ್ಲಿ ಮೋದಿಯಿಂದ ಹಿಡಿದು ಎಲ್ಲರೂ ಚುನಾಯಿತ ನಾಯಕರಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್​ನಲ್ಲಿ‌ ಒನ್ ಫ್ಯಾಮಿಲಿ ಒನ್ ನೇಷನ್. ರಾಹುಲ್ ಅಧ್ಯಕ್ಷ ಸ್ಥಾನ ಬಿಟ್ರು, ಮತ್ತೆ ಅವರೇ ಅಧ್ಯಕ್ಷರಾಗಿದ್ದಾರೆ. ಅಂತಹವರ ಮುಂದೆ ಸಿದ್ದರಾಮಯ್ಯ ಕೈಮುಗಿದು ನಿಲುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಅವರು ಮೆಚ್ಯುರಿಟಿಯಿಂದ ಮಾತನಾಡಬೇಕು ಎಂಬುದನ್ನು ಆಗ್ರಹಿಸುತ್ತೇನೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಎಸ್ಐಟಿ ತನಿಖೆಯಿಂದ ಸಿಡಿ ವಿಚಾರದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಸಿಡಿ ವಿಚಾರಕ್ಕೆ, ಯುವತಿ ಒಂದು ಹೇಳಿಕೆ ಕೊಟ್ಟರೆ, ಯುವತಿ ಕುಟುಂಬಸ್ಥರ ಮತ್ತೊಂದು ‌ಹೇಳಿಕೆ ಕೊಡುತ್ತಿದ್ದಾರೆ. ಸಂತ್ರಸ್ತೆ ಅಂತಾ ಹೇಳಿಕೊಳ್ಳುತ್ತಿರುವ ಯುವತಿ ಕೋರ್ಟ್ ಇಲ್ಲವೇ ತನಿಖಾ ಸಂಸ್ಥೆ ಮುಂದೆ ಹಾಜರಾಗಿ ಹೇಳಿಕೆ ಕೊಡಬೇಕು. ಇಲ್ಲವಾದರೆ ಪ್ರಕರಣ ಇತ್ಯರ್ಥ ಆಗಲಿಕ್ಕೆ ಕಷ್ಟವಾಗಲಿದೆ. ಇನ್ನು ಆಡಿಯೋದಲ್ಲಿ ಬಂದಿರುವ ರೆಕಾರ್ಡ್ ನೋಡಿ ಡಿ.ಕೆ.ಶಿವಕುಮಾರ್ ಬಂಧನ ಮಾಡಬೇಕೆಂದು ಹೇಳಲಿಕ್ಕೆ ಆಗುವುದಿಲ್ಲ. ಪ್ರಾಥಮಿಕ ಹೇಳಿಕೆ ಕೊಡುವವರೆಗೆ ಪ್ರೊಗ್ರೆಸ್ಸಿವ್ ಮುಂದುವರೆಯೋದು ಕಷ್ಟವಿದೆ. ಎಸ್ಐಟಿ ಚೆನ್ನಾಗಿ ಕೆಲಸ‌ ಮಾಡುತ್ತಿದೆ. ಸದ್ಯದಲ್ಲೇ ಈ ವಿಚಾರ ತಾರ್ಕಿಕ ಅಂತ್ಯ ಕಾಣಲಿದೆ‌ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.