ಬೆಳಗಾವಿ: ಸಾರಿಗೆ ಸಿಬ್ಬಂದಿ ಮುಷ್ಕರದಿಂದಾಗಿ ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಬಂದ್ ಆಗಿದ್ದ ಸಾರಿಗೆ ಬಸ್ಗಳು ಇಂದಿನಿಂದ ಮತ್ತೆ ತಮ್ಮ ಸೇವೆ ಪ್ರಾರಂಭಿಸಿವೆ.
ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆ ಮುಷ್ಕರ್ ಹಿಂಪಡೆದ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಸಂಚಾರ ಅಂತ್ಯವಾಗಿದ್ದು, ಬಹುತೇಕ ಎಲ್ಲ ಬಸ್ಗಳು ಡಿಪೋದಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿವೆ.
ಕಳೆದೆರಡು ವಾರಗಳಿಂದ ಖಾಸಗಿ ಬಸ್ ಮತ್ತು ವಾಹನಗಳ ದುಬಾರಿ ದರಕ್ಕೆ ಬೇಸತ್ತಿದ್ದ ಸಾರ್ವಜನಿಕರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ವಿಜಯಪುರ, ಬಾಗಲಕೋಟೆ, ಧಾರವಾಡ- ಹುಬ್ಬಳ್ಳಿ, ಗದಗ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೂ ಬಸ್ ಸಂಚಾರ ಪ್ರಾರಂಭವಾಗಿದೆ.
ಓದಿ: ಹೈಕೋರ್ಟ್ ಅದೇಶದಿಂದ ಎಚ್ಚೆತ್ತ ಸಾರಿಗೆ ನೌಕರರು: ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಹಾಜರು