ಬೆಳಗಾವಿ: ಅರ್ಧಕ್ಕೆ ಬಿಟ್ಟು ಹೋಗ್ತಿರಾ?... ಹೀಗೆ ಸಿಎಂ ಬಿಎಸ್ವೈ ಅವರನ್ನು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ತಮಾಷೆ ಮಾಡಿದ ಪ್ರಸಂಗ ನಡೆಯಿತು.
ಬೆಳಗಾವಿ ಭೇಟಿ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಂ ಯಡಿಯೂರಪ್ಪ ಜತೆಗೆ ಪ್ರಯಾಣ ಬೆಳೆಸುವಾಗ ಶೋಭಾ ಈ ರೀತಿ ತಮಾಷೆ ಮಾಡಿದ್ರು.
ಬೆಳಗಾವಿ ಸಾಂಬ್ರಾ ವಿಮಾನದಿಂದ ವಿಶೇಷ ವಿಮಾನದ ಮೂಲಕ ಶೋಭಾ ಸಿಎಂ ಜತೆಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು. ಇದಕ್ಕೂ ಮುನ್ನ ಕವಟಗಿಮಠ ಅವರ ಮದುವೆ ಸಮಾರಂಭ ಮುಗಿಸಿ ಶೋಭಾ ಸಿಎಂ ವಾಹನದಲ್ಲಿ ಬಂದಿದ್ದರು. ವಾಹನದಲ್ಲಿ ಕರೆದುಕೊಂಡು ಬಂದು ಅರ್ಧಕ್ಕೆ ಬಿಟ್ಟು ಹೋಗ್ತಿರಾ? ಎಂದು ಬಗುತ್ತಲೇ ಕೇಳಿದ್ರು.
ಸಿಎಂ ಅವರು ವಿಮಾನದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎಂಎಲ್ಸಿ ರವಿಕುಮಾರ್ ಅವರನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದರು. ನಂತರ ಸಿಎಂ ಎಂಎಲ್ ಸಿ ರವಿಕುಮಾರ್ ಅವರನ್ನು ಬೆಳಗಾವಿಯಲ್ಲಿ ಬಿಟ್ಟು ವಿಶೇಷ ವಿಮಾನದಲ್ಲಿ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಜತೆ ಪ್ರಯಾಣ ಬೆಳೆಸಿದರು. ಹೀಗಾಗಿ ಬೇರೆ ವಿಮಾನದ ಮೂಲಕ ರವಿಕುಮಾರ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಬೆಂಗಳೂರಿನಿಂದ ಬರುವಾಗ ಸಿಎಂ ಜತೆಗೆ ಶೋಭಾ ಕರಂದ್ಲಾಜೆ ಹಾಗೂ ರವಿಕುಮಾರ್ ಬಂದಿದ್ದರು.