ಬೆಳಗಾವಿ: ಜಮೀನಿನ ಪಕ್ಕದಲ್ಲಿನ ಮಲಪ್ರಭಾ ನದಿಯ ಕಾಲುವೆಯಲ್ಲಿ ಊಟದ ತಟ್ಟೆ ತೊಳೆಯಲು ಹೋಗಿದ್ದ ಬಾಲಕ ಆಯ ತಪ್ಪಿ ನೀರುಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ನಡೆದಿದೆ.
ಮಹಾಂತೇಶಗೌಡ ಪಾಟೀಲ (12) ಕಾಲುವೆಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಬಾಲಕ. ಕೃಷಿಕರಾಗಿರುವ ತಂದೆ-ತಾಯಿಗೆ ಊಟದ ಬುತ್ತಿ ಕೊಡಲು ಬಾಲಕ ಜಮೀನಿಗೆ ಹೋಗಿದ್ದ. ಪೋಷಕರೊಂದಿಗೆ ಇಂದು ಮಧ್ಯಾಹ್ನ ಊಟ ಮಾಡಿರುವ ಬಾಲಕ ಬಳಿಕ ತಟ್ಟೆ ತೊಳೆಯಲು ಕಾಲುವೆಗೆ ಹೋಗಿದ್ದಾನೆ.
ಓದಿ:ಬರಡಾಗಿದ್ದ ಜಮೀನಿನಲ್ಲಿ 'ಸೀಬೆ' ಬೆಳೆದು ಮಾದರಿಯಾದ ರೈತ!
ಆಗ ಕಾಲು ಜಾರಿ ನೀರುಪಾಲಾಗಿದ್ದಾನೆ. ಬಾಲಕ ಬರದಿರುವುದನ್ನು ಗಮನಿಸಿದ ಪೋಷಕರು ಕಾಲುವೆ ಕೆಡೆಗೆ ಹೋಗಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಕಾಲುವೆಯಲ್ಲಿ ಹುಡುಕಾಟ ನಡೆಸಿದ್ದು, ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ರಾಮದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.