ಬೆಳಗಾವಿ : ಹಳೆ ದ್ವೇಷಕ್ಕೆ ಯುವಕನ ಕೊಲೆ ಮಾಡಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಮಡಿವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುರಳಿ ಮೋಹನ, ಕೃಷ್ಣಮೂರ್ತಿ, ಮಂಜುನಾಥ ಬಂಧಿತ ಆರೋಪಿಗಳು. ಈ ಆರೋಪಿಗಳು ಕಳೆದ ಭಾನುವಾರ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ರೇಣುಕಾ ಬಾರ್ ಬಳಿ ಆರೋಪಿ ಮುರಳಿ ಆತನ ಸ್ನೇಹಿತರಾದ ಕೃಷ್ಣ ಮತ್ತು ಮಂಜು ಎಂಬುವರು ಈಜಿಪುರದ ಶ್ರೀನಿವಾಗಿಲು ವಾಸಿಯಾದ ಆದೀಶೇಷ ಎಂಬುವವನನ್ನ ಕರೆಸಿ ಹಳೆ ದ್ವೇಷ ಹಿನ್ನೆಲೆ ಕೊಲೆ ಮಾಡಿದ್ದರು.
ಪ್ರಕರಣದ ಸಂಬಂಧ ಆಗ್ನೇಯ ವಿಭಾಗ ಡಿಸಿಪಿ ಇಶಾ ಪಂತ್ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು. ಇಂದು ಕೊಲೆ ಪ್ರಕರಣದ ಆರೋಪಿಗಳನ್ನ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದಾಗ ಹಳೆ ದ್ವೇಷದ ಹಿನ್ನೆಲೆ ಯುವಕನನ್ನ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದು ತನಿಖೆ ಮುಂದುವರೆದಿದೆ.