ETV Bharat / state

ಬೆಳಗಾವಿ: ಸಚಿವ ಜಮೀರ್‌ ಅಹಮದ್ ವಿರುದ್ಧ ಬಿಜೆಪಿ ಎಂಎಲ್​ಸಿಗಳ ಪ್ರತಿಭಟನೆ - ಸಚಿವ ಜಮೀರ್‌ ಅಹಮದ್

BJP MLCs protest against Minister Jameer Ahmed:ಸಚಿವ ಜಮೀರ್‌ ಅಹಮದ್​ರ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರು ಇಂದು ಸುವರ್ಣ ಸೌಧದ ಪ್ರವೇಶ ದ್ವಾರದ ಮುಂದೆ ಪ್ರತಿಭಟನೆ ನಡೆಸಿದರು. ಸಚಿವರ ರಾಜೀನಾಮೆಗೆ ಬಿಜೆಪಿ ಸದಸ್ಯರು ಒತ್ತಾಯಿಸಿದರು.

ಬಿಜೆಪಿ ಎಂಎಲ್​ಸಿಗಳ ಪ್ರತಿಭಟನೆ
ಬಿಜೆಪಿ ಎಂಎಲ್​ಸಿಗಳ ಪ್ರತಿಭಟನೆ
author img

By ETV Bharat Karnataka Team

Published : Dec 13, 2023, 3:15 PM IST

ಸಚಿವ ಜಮೀರ್‌ ಅಹಮದ್ ವಿರುದ್ಧ ಬಿಜೆಪಿ ಎಂಎಲ್​ಸಿಗಳ ಪ್ರತಿಭಟನೆ

ಬೆಳಗಾವಿ: ಸಚಿವ ಜಮೀರ್‌ ಅಹಮದ್ ಅವರ ಹೇಳಿಕೆಯೊಂದಕ್ಕೆ ವಿರೋಧಿಸಿ ವಿಧಾನ ಪರಿಷತ್ ಸದಸ್ಯರು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸುವರ್ಣಸೌಧದ ವಿಐಪಿ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. 10ಕ್ಕೂ ಹೆಚ್ಚು ವಿಧಾನ ಪರಿಷತ್ ಸದಸ್ಯರಿಂದ ಸುವರ್ಣ ಸೌಧದ ಪ್ರವೇಶ ದ್ವಾರದ ಮುಂದೆ ಪ್ರತಿಭಟಿಸಿದರು.‌ ಜಮೀರ್​ ಅಹಮದ್ ಸಚಿವ‌ ಸ್ಥಾನಕ್ಕೆ ರಾಜೀನಾಮೆ ‌ಆಗ್ರಹಿಸಿ ಬಿಜೆಪಿ ಪರಿಷತ್ ಸದಸ್ಯರು ಘೋಷಣೆ ಕೂಗಿದರು. ಕೋಟಾ ಶ್ರೀನಿವಾಸ್ ಪೂಜಾರಿ, ರವಿಕುಮಾರ್ ಸೇರಿದಂತೆ‌ 10 ಕ್ಕೂ ಹೆಚ್ಚು ಸದಸ್ಯರ‌ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸದನದಲ್ಲಿ ಸಚಿವ ಜಮೀರ್​ಗೆ ಬಿಜೆಪಿ ಬಹಿಷ್ಕಾರ: ಸದನದಲ್ಲಿ ಜಮೀರ್​ ಕಾರ್ಯಕ್ರಮ ಹಾಗೂ ಇತರ ಚಟುವಟಿಕೆಗಳಿಗೆ ಬಿಜೆಪಿ ಬಹಿಷ್ಕಾರ ಹಾಕಲಿದೆ. ಸಚಿವ ಜಮೀರ್​ ಅವರ ರಾಜೀನಾಮೆ ಈ ಸಮಸ್ಯೆಗೆ ಪರಿಹಾರ ಎಂದು ಇದೇ ವೇಳೆ ವಿಧಾನ ಪರಿಷತ್ ಬಿಜೆಪಿ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು. ಸದನ ಸಮಿತಿ ತನಿಖೆಗೆ ಸರಕಾರ ಒಪ್ಪದೇ ಇರುವುದು ನೋವಿನ ಸಂಗತಿ. ನಮ್ಮ ರಾಜ್ಯದ ಹಾಗೂ ಸ್ಪೀಕರ್ ಸ್ಥಾನಕ್ಕೆ ಸಚಿವ ಜಮೀರ್ ಅಹಮ್ಮದ್​ ಅಗೌರವ ತಂದಿದ್ದಾರೆ. ಸ್ಪೀಕರ್​ ಸ್ಥಾನಕ್ಕೆ ಧರ್ಮ ಲೇಪನ‌ ಮಾಡಿ ಸಂವಿಧಾನ ಪೀಠಕ್ಕೆ ಅಪಮಾನ ಮಾಡಲಾಗಿದೆ.

ಜಮೀರ್ ರಾಜೀನಾಮೆ ನೀಡುವಂತೆ ಸದನದಲ್ಲಿ ಒತ್ತಾಯ ಮಾಡಲಾಗಿದೆ. ಧರ್ಮ ಲೇಪನ ಮಾಡಿರುವ ಸಚಿವ ಜಮೀರ್‌ ಅಹಮದ್​ ಅವರ ರಾಜೀನಾಮೆಗೆ ಆಗ್ರಹಿಸುತ್ತೇವೆ. ಕನಿಷ್ಟ ಕ್ಷಮೆ ಕೇಳುವ ಸೌಜನ್ಯ ಸಚಿವ ಜಮೀರ್ ಮಾಡಿಲ್ಲ. ಇದು ಸಂವಿಧಾನ ಪೀಠಕ್ಕೆ ಮಾಡಿರುವ ಅಕ್ಷಮ್ಯ ಅಪಚಾರ ಹಾಗೂ ಅಪರಾಧವಾಗಿದೆ. ಈ ಬಗ್ಗೆ ಸರಕಾರ ಮೊಂಡುವಾದ ಮುಂದಿಟ್ಟಿದೆ‌. ಸಭಾಪತಿ ಮೂಲಕ ಒಂದು ವಾರ ಸದನ‌ವನ್ನು ಮುಂದುವರೆಸುವಂತೆ ವಿನಂತಿ ಮಾಡಲಾಗಿದೆ. ಸಚಿವ ಜಮೀರ್ ಸಮರ್ಥಿಸುವ ರೀತಿಯಲ್ಲಿ ಸರಕಾರ ಕೆಲಸ ಮಾಡುತ್ತಿದೆ. ಕ್ಷಮೆ ಕೇಳುವ ಮನಸ್ಥಿತಿ‌ ಜಮೀರ್ ಅವರಲ್ಲಿ ಇಲ್ಲ.‌ ದುರಂತ ಎಂದರೆ ಇಡೀ ಪಕ್ಷ ಜಮೀರ್​ ಬೆಂಬಲಕ್ಕೆ ನಿಂತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಪ್ರತಿಭಟನೆ ಮಾಡಲು ಬಿಜೆಪಿಗೆ ಯಾವ ನೈತಿಕತೆ ಇದೆ? ಸಚಿವ ಗುಂಡೂರಾವ್ ವಾಗ್ದಾಳಿ

ನಿನ್ನೆ ಈ ಸಂಬಂಧ ವಿಧಾನಸಭೆಯಲ್ಲಿ ನಡೆಸುತ್ತಿದ್ದ ಧರಣಿಯನ್ನು ಬಿಜೆಪಿ ಹಿಂಪಡೆದುಕೊಂಡಿತ್ತು. ಈ ಮೂಲಕ ಬಿಜೆಪಿ ಪ್ರತಿಭಟನೆ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಪ್ರತಿಪಕ್ಷ ನಾಯಕ ಆರ್ ಅಶೋಕ್​ ಸುದೀರ್ಘ ಮಾತುಕತೆ ನಡೆಸಿದ್ದರು. ಕೆಲ ನಿಮಿಷಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಸಹ ಇಬ್ಬರು ನಾಯಕರ ಜತೆ ಚರ್ಚಿಸಿ ಬಳಿಕ ಕಲಾಪದಲ್ಲಿ ಪಾಲ್ಗೊಂಡಿದ್ದರು. ಆದರೆ ಕುಮಾರಸ್ವಾಮಿ ಹಾಗೂ ಆರ್ ಅಶೋಕ್​ ಸುಮಾರು ಒಂದು ಗಂಟೆಗಳಿಗೂ ಹೆಚ್ಚಿನ ಕಾಲ ಮಾತನಾಡಿ ಮುಂದಿನ ಹೋರಾಟದ ಬಗ್ಗೆ ಪರಸ್ಪರ ಚರ್ಚೆ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.