ETV Bharat / state

ಪಂಚಮಸಾಲಿಗೆ 2ಎ ಮೀಸಲಾತಿ ನೀಡಬಾರದೆಂಬ ಉದ್ದೇಶ ಬಿಎಸ್‌ವೈಗಿತ್ತು: ಯತ್ನಾಳ್​

ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್​​​ ಪಂಚಮಸಾಲಿ ‌ಸಮುದಾಯ ಮೀಸಲಾತಿ ವಿಚಾರವಾಗಿ ಹೊಸ ಬಾಂಬ್​ ಸಿಡಿಸಿದ್ದಾರೆ.

MLA Basanagouda Patil Yatnal
ಶಾಸಕ ಬಸವನಗೌಡ ಪಾಟೀಲ ಯತ್ನಾಳ್​​​
author img

By

Published : Sep 24, 2021, 9:32 PM IST

Updated : Sep 24, 2021, 10:21 PM IST

ಬೆಳಗಾವಿ: ಪಂಚಮಸಾಲಿ ‌ಸಮುದಾಯಕ್ಕೆ‌ 2ಎ ಮೀಸಲಾತಿ ನೀಡಬಾರದೆಂಬ ಉದ್ದೇಶವನ್ನು ಬಿಎಸ್‌ವೈ ಹೊಂದಿದ್ದರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್​​​ ಆರೋಪಿಸಿದರು.

ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್​​​

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಗೆ ನಡೆದ ಹೋರಾಟ ಹಾಗೂ ನಮ್ಮ ಪ್ರಶ್ನೆಗೆ ವಿಧಾನಸಭೆಯಲ್ಲಿ ಬಿಎಸ್‌ವೈ ಉತ್ತರ ಕೊಡಬಾರದು ಎಂದುಕೊಂಡಿದ್ದರು. ಆಗ ಸಿಎಂ ಬಸವರಾಜ್ ಬೊಮ್ಮಾಯಿ ಒಂದೂವರೆ ಗಂಟೆ ಉತ್ತರ ಕೊಟ್ಟರು. ಆದರೆ ಅವರು ಎಲ್ಲಿಯೂ ಆಶ್ವಾಸನೆ ಕೊಡಲಿಲ್ಲ. ಆಶ್ವಾಸನೆ ಕೊಡಬೇಡ ಅಂತ ಬಿಎಸ್‌ವೈ ಹೇಳಿದ್ದ ಸಂಗತಿಯನ್ನು ಬೊಮ್ಮಾಯಿ ನನಗೆ ಹೇಳಿದ್ದರು. ಬೊಮ್ಮಾಯಿ ಅವರು ಎಂದಿಗೂ ಯಡಿಯೂರಪ್ಪನವರ ಶ್ಯಾಡೋ ಆಗೋದಿಲ್ಲ. ಅವರು ಸ್ವತಂತ್ರ ನಿರ್ಣಯ ಕೈಗೊಳ್ಳುವ ರಾಜಕಾರಣಿ. ಯಾವುದನ್ನು ಕೇಳಬೇಕೋ ಕೇಳುತ್ತಾರೆ. ಪೂರ್ತಿ ರಬ್ಬರ್ ಸ್ಟ್ಯಾಂಪ್ ಆಗ್ತಾರೆಂಬ ಕಲ್ಪನೆ ಬಿಡಿ. ಒಂದು ವಾರದಲ್ಲಿ ನಿಮಗೆ ಗೊತ್ತಾಗುತ್ತದೆ. ಒಂದು ನಿರ್ಧಾರ ಆಗೋದಿದೆ. ಅವರು ಶ್ಯಾಡೋ ಅಲ್ಲ, ಹೈಕಮಾಂಡ್ ಏನು ಹೇಳ್ತಾರೋ ಅದನ್ನು ಕೇಳುತ್ತಾರೆ ಎಂದರು.

ಪಂಚಮಸಾಲಿ ಸಮಾಜಕ್ಕೆ ಅಷ್ಟೇ ಅಲ್ಲ, ಕೆಲವೊಂದು ಸಮಾಜಕ್ಕೆ ಅನ್ಯಾಯ ಆಗಿತ್ತು ನಿಜ. ಯಾವುದೇ ಸಮಾಜಕ್ಕೆ ಮೋಸ ಮಾಡಬಾರದು. ಮೋಸ ಮಾಡಿದ್ರೆ ಭಗವಂತ ಶಿಕ್ಷೆ ಕೊಟ್ಟೆ ಕೊಡ್ತಾನೆ. ಬಿಎಸ್‌ವೈ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬೇಕಿತ್ತು. ನ್ಯಾ.ಸುಭಾಷ್ ಆಡಿ ನೇತೃತ್ವದಲ್ಲಿ ಕಮಿಟಿ ಮಾಡಿ ಸದಸ್ಯರ ನೇಮಕ ಮಾಡಿರಲಿಲ್ಲ. ಆಗ ಒಂದೂ ಮೀಟಿಂಗ್ ಆಗಲಿಲ್ಲ. ಆರು ತಿಂಗಳ ಸಮಯ ಪಡೆದು ಮೀಸಲಾತಿ ನೀಡದೆ ಮೋಸ ಮಾಡಿದ್ದಾರೆ. ಅದು ಶಾಪವಲ್ಲವೇ, ನಾವು ನಮ್ಮ ಸಮುದಾಯದ ಜೊತೆ ಬೇರೆ ಸಮುದಾಯಕ್ಕೂ‌ ಮೀಸಲಾತಿ ಕೇಳ್ತಿದ್ದೇವೆ. ಯಾವುದೇ ಸಮಾಜಕ್ಕೆ ಮೀಸಲಾತಿ ಕೊಡಬಾರದು ಎಂದು ನಮ್ಮ ಹೋರಾಟ ಇಲ್ಲ ಎಂದರು.

'ಬೊಮ್ಮಾಯಿ ಮೇಲೆ ವಿಶ್ವಾಸವಿದೆ'

ಹಿಂದಿನ ಸಿಎಂ ಆರು ತಿಂಗಳಲ್ಲಿ ಮೀಸಲಾತಿ ಘೋಷಿಸೋದಾಗಿ ವಿಧಾನಸಭೆಯಲ್ಲಿ ಹೇಳಿದ್ದರು. ಸೆ.15ಕ್ಕೆ ಅವಧಿ ಮುಗಿದ ಮೇಲೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಶ್ರೀಗಳ ಜೊತೆ ಮಾತನಾಡಿದ್ದಾರೆ. ಇಂದು ಬೆಳಗ್ಗೆ ಮನೆಗೆ ಕರೆಯಿಸಿ ನನ್ನ ಜೊತೆಯೂ ಮಾತನಾಡಿದ್ದಾರೆ. ಎಲ್ಲಾ ಸಮಾಜಕ್ಕೆ ನ್ಯಾಯ ಕೊಡ್ತಾರೆಂಬ ಭರವಸೆ ಇದೆ. ಹಿಂದುಳಿದ ಸಮಾಜದಲ್ಲಿ ಕೆಲವರು ಎಸ್ಸಿಗೆ ಹೋಗಬೇಕಂತಿದ್ದಾರೆ, ಕೆಲವರು ಎಸ್ಟಿಗೆ ಹೋಗಬೇಕಂತಿದ್ದಾರೆ. ಹಿಂದುಳಿದ ಆಯೋಗ ಜೊತೆ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. ನ್ಯಾ.ಸುಭಾಷ್ ಆಡಿ ನೇತೃತ್ವದ ಸಮಿತಿ ಇನ್ನೂ ಕ್ರಿಯಾಶೀಲ ಆಗಿಲ್ಲ. ಆ ಸಮಿತಿಗೆ ಇನ್ನೂ ಇಬ್ಬರ ಸದಸ್ಯರ ನೇಮಕ ಆಗಬೇಕು ಎಂದರು.

'ನಮ್ಮವರಿಂದಲೇ ಷಡ್ಯಂತ್ರ'

ಲಿಂಗಾಯತ ಪಂಚಮಸಾಲಿ ಸಮುದಾಯದ ಕೆಲವರ ಷಡ್ಯಂತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಾವಿರಾರು ವರ್ಷಗಳ ಇತಿಹಾಸದಲ್ಲಿ ಇಂತವರು ಇದ್ದಾರೆ. ಅದನ್ನು ಮೀರಿ ಸಮಾಜ ಒಂದಾಗುತ್ತಿದೆ. ಹೋರಾಟ ತಡೆಯುವ ಶಕ್ತಿ ಯಾರಿಗೂ ಇಲ್ಲ. ತಡೆಯಲು ಪ್ರಯತ್ನ ಆಗಿದ್ದು ನಿಜ. ನಮ್ಮ ಸಮಾಜ ಜಾಗೃತವಾಗಿದೆ. ಮೊದಲಿನ ಹಾಗೆ ಮುಗ್ಧ ಇಲ್ಲ. ಜಮಖಂಡಿಗೆ ಅಭಿಯಾನ ಬಂದ್ರೆ ಕಲ್ಲು ಹೊಡೀತಿವಿ ಎಂದು ಬೆದರಿಕೆಗಳು ಬಂದಿವೆ. ಧಮ್ಕಿಗೆ ಅಂಜಿ ನಾವು ರಾಜಕಾರಣ ಮಾಡಲ್ಲ ಎಂದರು.

'ಸಿಎಂ ಆಗುವ ಯೋಗ್ಯತೆ ಇದೆ'

ಸಚಿವ ಸ್ಥಾನ ಸಿಗದ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು, ಬಹುಶಃ ಯತ್ನಾಳ್ ಮಂತ್ರಿ ಆಗಲು ಯೋಗ್ಯ ಅಲ್ಲ. ಯತ್ನಾಳ್ ಕೇವಲ ಮುಖ್ಯಮಂತ್ರಿ ಆಗಲು ಯೋಗ್ಯ ಎಂದು ಅನಿಸಿರಬಹುದು. ರಾಜಕಾರಣದಲ್ಲಿ ಯಾವಾಗಲೂ ಆಸೆ ಇಟ್ಟುಕೊಂಡಿರಬೇಕು. ನಾನು ಸತತವಾಗಿ ಎರಡು ಸಲ ಸೋತಾಗ ಯತ್ನಾಳ ಯುಗಾಂತ್ಯ ಎಂದು ಕೆಲ ಪತ್ರಿಕೆಗಳಲ್ಲಿ ಬಂತು. ಫಿನಿಕ್ಸ್ ಪಕ್ಷಿಯಂತೆ ಮತ್ತೆ ರಾಜಕಾರಣದಲ್ಲಿ ಎದ್ದು ಬರ್ತೇನೆ ಎಂದಿದ್ದೆ. ರಾಜಕಾರಣದಲ್ಲಿ ಸೋಲು-ಗೆಲುವು ಇದ್ದಿದ್ದೇ, ಮುಗೀತು ಅಂತೇನೂ ಇರಲ್ಲ ಎಂದರು.

ಸಾಮೂಹಿಕ ‌ನಾಯಕತ್ವ:

ಬೊಮ್ಮಾಯಿ ನೇತೃತ್ವದ ಸರ್ಕಾರ ಇರುವುದರಿಂದ ಬೊಮ್ಮಾಯಿ ಜೊತೆ ಸಾಮೂಹಿಕ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಸುತ್ತೇವೆ. ಯಾವಾಗಲೂ ಶಾಸಕಾಂಗ ಪಕ್ಷದ ನಾಯಕನ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಅಮಿತ್ ಶಾ ಹೇಳಿಕೆಗೆ ನಾವೆಲ್ಲರೂ ಬದ್ಧ. ನಳಿನ್ ಕುಮಾರ್ ಕಟೀಲ್, ಈಶ್ವರಪ್ಪ, ಯಡಿಯೂರಪ್ಪ ನೇತೃತ್ವ ಎಂದು ಕೆಲವರು ಹೇಳಿಕೆ ನೀಡುತ್ತಿದ್ದಾರೆ, ನೀಡಲಿ ಎಂದರು.

ಇದನ್ನೂ ಓದಿ: ಅ.1 ರಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ: Conditions Apply!

Last Updated : Sep 24, 2021, 10:21 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.