ETV Bharat / state

ಉ.ಕ. ಭಾಗಕ್ಕೆ ಅಭಿವೃದ್ಧಿಯಲ್ಲೂ ತಾರತಮ್ಯ, ಸಚಿವ ಸ್ಥಾನಕ್ಕೂ ತಾರತಮ್ಯನಾ?: ಬಿಜೆಪಿ ಶಾಸಕ ನಡಹಳ್ಳಿ ಅಸಮಾಧಾನ!

author img

By

Published : Dec 24, 2021, 3:45 PM IST

ಏಕೀಕರಣವಾಗಿ 65 ವರ್ಷವಾದರೂ ತಾರತಮ್ಯ ಸರಿಪಡಿಸಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಮಂಡಳಿ ರಚನೆಯಾಗಬೇಕು ಎಂದು ಒತ್ತಾಯಿಸಿದ ಶಾಸಕ ನಡಹಳ್ಳಿ, ನಂಜುಂಡಪ್ಪ ವರದಿ ಪ್ರಕಾರ ಸಚಿವ ಸಂಪುಟದಲ್ಲಿ ಶೇ.50ರಷ್ಟು ಮೀಸಲಿರಬೇಕು ಎಂದಿದೆ. ಆದರೆ, ಸಂಪುಟದಲ್ಲಿ ಬೆಳಗಾವಿ, ಬೆಂಗಳೂರಿಗೆ ಆದ್ಯತೆ ದೊರೆತಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಬಿಜೆಪಿ ಶಾಸಕ ನಡಹಳ್ಳಿ ಅಸಮಾಧಾನ
ಬಿಜೆಪಿ ಶಾಸಕ ನಡಹಳ್ಳಿ ಅಸಮಾಧಾನ

ಬೆಂಗಳೂರು/ ಬೆಳಗಾವಿ : ಅಭಿವೃದ್ಧಿಯಲ್ಲಿ ತಾರತಮ್ಯವಾಗಿರುವ ರೀತಿಯಲ್ಲೇ ಉತ್ತರ ಕರ್ನಾಟಕದವರು ಎಂಬ ಕಾರಣಕ್ಕಾಗಿ ನಾವು ಸಚಿವರಾಗಿಲ್ಲ ಎಂದು ಬಿಜೆಪಿ‌ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.

ವಿಧಾನಸಭೆಯಲ್ಲಿ ಇಂದು ನಿಯಮ 69 ಅಡಿಯಲ್ಲಿ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಮೊದಲಿನಿಂದಲೂ ತಾರತಮ್ಯ ಇದೆ. ಅದೇ ರೀತಿ ಉತ್ತರ ಕರ್ನಾಟಕದವರು ಎಂಬ ಕಾರಣಕ್ಕಾಗಿ ನಾವು ಸಚಿವರಾಗಿಲ್ಲ ಎನ್ನುವ ಮೂಲಕ ತಾವು ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಮಂಡಳಿ ರಚನೆಗೆ ಒತ್ತಾಯ

ಏಕೀಕರಣವಾಗಿ 65 ವರ್ಷವಾದರೂ ತಾರತಮ್ಯ ಸರಿಪಡಿಸಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಮಂಡಳಿ ರಚನೆಯಾಗಬೇಕು ಎಂದು ಒತ್ತಾಯಿಸಿದ ಅವರು, ನಂಜುಂಡಪ್ಪ ವರದಿ ಪ್ರಕಾರ ಸಚಿವ ಸಂಪುಟದಲ್ಲಿ ಶೇ.50ರಷ್ಟು ಮೀಸಲಿರಬೇಕು ಎಂದಿದೆ. ಆದರೆ ಸಂಪುಟದಲ್ಲಿ ಬೆಳಗಾವಿ, ಬೆಂಗಳೂರಿಗೆ ಆದ್ಯತೆ ದೊರೆತಿದೆ. ಉಪಸಭಾಧ್ಯಕ್ಷರು, ಸಭಾಧ್ಯಕ್ಷರು, ನಾನು, ಬಸನಗೌಡ ಪಾಟೀಲ ಯತ್ನಾಳ್ ಮಂತ್ರಿಯಾಗಬಹುದಿತ್ತು. ನಾವು ಉತ್ತರ ಕರ್ನಾಟಕದವರು ಅದಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಭಿವೃದ್ಧಿ ವಿಚಾರವಾಗಿ ತಾರತಮ್ಯ ಆಗಿದೆ. ಈ ಬಗ್ಗೆ ಒಮ್ಮತದದಿಂದ ಸದನದಲ್ಲಿ ನಿರ್ಣಯ ಪಾಸ್ ಮಾಡಲಿ ಎಂದು ಒತ್ತಾಯಿಸಿದರು. ತಾರತಮ್ಯದ ಬಗ್ಗೆ ಸರ್ಕಾರದಿಂದ ಉತ್ತರ ಬೇಕಿದೆ. ಐಎಎಸ್ ಅಧಿಕಾರಿಗಳು ಸ್ಮಾರ್ಟ್ ಆಗಿ ಉತ್ತರ ಕೊಡುತ್ತಾರೆ. ಆದರೆ ನಮಗೆ ಉತ್ತರ ಬೇಡ ಪರಿಹಾರ ಬೇಕು. ಕೂಡಲೇ ಒಂದು ತಜ್ಞರ ಸಮಿತಿ ರಚನೆ ಮಾಡಿ. ತಾರತಮ್ಯದ ಬಗ್ಗೆ ಬಜೆಟ್ ಮೊದಲು ಪರಿಹಾರದ ಕುರಿತು ನಿರ್ಧಾರ ಮಾಡಬೇಕು ಎಂದು ಆಗ್ರಹಿಸಿದರು.

ಧ್ವನಿ ಎತ್ತಿದರೆ ಟಿಕೆಟ್​ ಸಿಗದಿರುವ ಭಯ

ನಾವು ಧ್ವನಿ ಎತ್ತದೇ ಇರುವುದಕ್ಕೆ ಈ ಪರಿಸ್ಥಿತಿ ಬಂದಿದೆ. ಧ್ವನಿ ಎತ್ತಿದರೆ ಮುಂದಿನ‌ ಚುನಾವಣೆಯಲ್ಲಿ ಟಿಕೆಟ್ ಸಿಗಲ್ಲ, ಅಧಿಕಾರ ಸಿಗಲ್ಲ ಎಂಬ ಆತಂಕ ಎಂದರು. ಉತ್ತರ ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ವಿದರ್ಭ ಮಾದರಿಯನ್ನು ಅಳವಡಿಸಿ ಎಂದು ಮನವಿ‌ ಮಾಡಿದರು.

ಡ್ರಾಮ ಮಾಡುವುದರಲ್ಲಿ ರಾಜಕಾರಣಿಗಳು ಎತ್ತಿದ ಕೈ. ಅದಕ್ಕೆ ನೋಬೆಲ್ ಪ್ರಶಸ್ತಿ ಕೂಡ ಲಭಿಸುತ್ತದೆ ಎಂದು ವ್ಯಾಖ್ಯಾನಿಸಿದ ನಡಹಳ್ಳಿ, ಮಯೂರ ವರ್ಮ, ಇಮ್ಮಡಿ ಪುಲಿಕೇಶಿ, ನೃಪತುಂಗ, ಕೃಷ್ಣದೇವಾಯ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರಂತಹ ಅಗತ್ಯವಿದೆ. ಕನಿಷ್ಠ 10 ದಿನ ಚರ್ಚೆ ಮಾಡಲು ಅವಕಾಶ ನೀಡಬೇಕು ಎಂದರು.

ಸರ್ವರಿಗೂ ಸಮಪಾಲು, ಸಮಬಾಳು ದೊರೆತಿಲ್ಲ. ನಾವು ಅಂತಾರಾಷ್ಟ್ರೀಯ ವಿಮಾನ, ರಾಷ್ಟ್ರೀಯ ಹೆದ್ದಾರಿ ಕೇಳುತ್ತಿಲ್ಲ. ಹಸಿವು, ಬಡತನ, ಆರೋಗ್ಯ, ಶಿಕ್ಷಣ ವಸತಿ ಕೇಳುತ್ತಿದ್ದೇವೆ. ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಬೇಕಿದೆ. ತುತ್ತು ಅನ್ನಕ್ಕಾಗಿ 8 ತಿಂಗಳು ವಸಲೆ ಹೋದರೆ 4 ತಿಂಗಳು ಮನೆಯಲ್ಲಿರುತ್ತಾರೆ, ಕೊರೊನಾದಿಂದ ಸತ್ತ ಗಂಡನ ಶವ ತರಲು ತಾಳಿ ಮಾರಿದರೂ ಸಾಧ್ಯವಾಗಲಿಲ್ಲ ಎಂದು ಹೇಳಿದರು.

ನಂಜುಂಡಪ್ಪ ವರದಿ ಭೂತಗನ್ನಡಿ

ಮುಖ್ಯಮಂತ್ರಿ, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಉಪಸಭಾಧ್ಯಕ್ಷರು ಉತ್ತರ ಕರ್ನಾಟಕದವರೇ ಆದರೂ ಹೆಚ್ಚಿನ ಚರ್ಚೆಗೆ ಅವಕಾಶ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂಜುಂಡಪ್ಪ ವರದಿ ಭೂತಗನ್ನಡಿಯಾಗಿದೆ. ಹಿಂದುಳಿದ ತಾಲ್ಲೂಕುಗಳಿಗೆ ಹೆಚ್ಚು ಅನುದಾನ ದೊರೆತಿದ್ದು, ಅತಿ ಹಿಂದುಳಿದ ತಾಲ್ಲೂಕುಗಳಿಗೆ ಕಡಿಮೆ ಅನುದಾನ ದೊರೆತಿದೆ. ವಿದರ್ಭ ಮಾದರಿಯಲ್ಲಿ ಕೇಂದ್ರ ಸರ್ಕಾರ ಅನುದಾನ ಕೊಡಬೇಕು ಎಂದರು. ಉತ್ತರ ಕರ್ನಾಟಕದ ಚರ್ಚೆಗೆ ಮೊದಲ ಮೂರು ದಿನ ಅವಕಾಶ ಕೊಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಮಾತಿನ ಚಕಮಕಿ : ಬಿಜೆಪಿ ಶಾಸಕ ವೀರಣ್ಣ ಚರಂತಿಮಠ್ ಅವರು, ಉತ್ತರ ಕರ್ನಾಟಕ ಸಮಸ್ಯೆ ಬದಲು, ನೀರಾವರಿ ಅನುದಾನದ ಬಗ್ಗೆ ಮಾತನಾಡಿದರು. ಇದಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಪಾದಯಾತ್ರೆ ಭರವಸೆ ಇದ್ದಾಗ ನೀವು ಅಸೆಂಬ್ಲಿ ಸದಸ್ಯರು ಆಗಿದ್ರೇನ್ರೀ..? ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಈ ವೇಳೆ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಮಾತಾಡೋದು ಬಿಟ್ಟು, ಯಾಕ್ರೀ ವಿಜಯಪುರ, ಬಾಗಲಕೋಟೆ ವಿಷಯಕ್ಕೆ ತಗಲಾಕೋತ್ತೀರಿ ಎಂದು ಸ್ಪೀಕರ್ ಕಾಗೇರಿ ಎಚ್ಚರಿಸಿದರು. ಈ ವೇಳೆ ನೀರಾವರಿ ಅನುದಾನ ಕುರಿತು ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ ಉಂಟಾಯಿತು. ನಂತರ ಚರಂತಿಮಠ್ ಅವರು ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಮಾತನಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.