ಬೆಳಗಾವಿ: ಪಂಚಮಸಾಲಿ ಸಮುದಾಯದವರು ಮೀಸಲಾತಿಗೆ ಹೋರಾಟ ಮಾಡ್ತಿದ್ದಾರೆ. ಈ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ತಾರೆ. ಹಿಂದುಳಿದ ಆಯೋಗದ ವರದಿಯನ್ನೂ ಕೇಳಿದ್ದಾರೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.
ಬೆಳಗಾವಿ ನಗರದ ಖಾಸಗಿ ಹೊಟೇಲ್ನ ಆವರಣದಲ್ಲಿ ಮಾಧ್ಯಮದ ಜತೆಗೆ ಮಾತನಾಡಿದರು. ಕೆ ಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಪ್ರಮಾಣ ವಚನ ಈ ಬೆಳಗಾವಿಯಲ್ಲಿ ನೀಡಿದರೆ ಒಳ್ಳೆಯದು ಎಂದು ಅಭಿಪ್ರಾಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಮಾತನಾಡಿ, ಪಂಚಮಸಾಲಿ ಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಾಲ್ಕು ಗಂಟೆ ಕಾಲ ಚರ್ಚೆ ಮಾಡಿದ್ದಾರೆ. ನಮ್ಮ ಸಿಎಂ ತುಂಬಾ ಜಾಣರು.ಯಾವ ಸಮಯದಲ್ಲಿ ಯಾರಿಗೆ ಮೀಸಲಾತಿ ಕೋಡಬೇಕು ಅನ್ನುವುದು ಅವರಿಗೆ ಗೊತ್ತಿದೆ. ಸಿಹಿ ಸುದ್ದಿ ಬೇಗ ಕೊಡ್ತಾರೆ ಅನ್ನೋದಿದೆ. ಹಾಗೆ ಸಿ ಎಂ ಯಾವಾಗಲೂ ಸಕಾರಾತ್ಮಕ ಯೋಚನೆ ಮಾಡ್ತಿದ್ದಾರೆ. ಎಲ್ಲ ಸಮುದಾಯದ ಕುರಿತು ಕಾನೂನಾತ್ಮಕ ಪರಿಗಣನೆಗೆ ತೆಗೆದುಕೊಂಡು ನಿರ್ಧಾರ ಮಾಡ್ತಾರೆ.ಸಮುದಾಯಗಳ ಜನಸಂಖ್ಯೆ ಹಾಗೂ ಮಾನದಂಡಗಳನ್ನು ನೋಡಿಕೊಂಡು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ :ನಾನು ಸಹ ಸಿಎಂಗೆ ಎಲ್ಲವನ್ನೂ ಹೇಳಿರುವೆ. ಒಕ್ಕಲಿಗ ಸಮುದಾಯದ ಕುರಿತು ಆದೇಶ ಇಂದು ಹೊರಬರಲಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ 19ರ ಸಭೆ: ಶನಿವಾರ್ ಕೋವಿಡ್ ಮೀಟಿಂಗ್ ಕರೆಯುತ್ತೇವೆ. ಕಂದಾಯ ಇಲಾಖೆ, ಆರೋಗ್ಯಇಲಾಖೆ, ಪೊಲೀಸ್ ಇಲಾಖೆ ನೇತೃತ್ವದಲ್ಲಿ ಸಭೆ ಮಾಡಲಾಗುವುದು. ಕೋವಿಡ್ ನಿಯಂತ್ರಣಕ್ಕೆ ಏನೇನು ಕ್ರಮ ಕೈಗೊಳ್ಳಬೇಕೊ ಆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ: ಪಂಚಮಸಾಲಿ ಸಮಾಜದ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಆಗಿದೆ. ನಮ್ಮ ಮುಖ್ಯಮಂತ್ರಿಗಳು ಬಹಳ ಚಾಣಾಕ್ಷ ಇದ್ದಾರೆ. ಪರಿಶಿಷ್ಟ ಜಾತಿ ಪಂಗಡದವರಿಗೆ ಮೀಸಲಾತಿ ನೀಡಿದ್ರೂ, ಸಿಎಂ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ವೀರಶೈವ ಲಿಂಗಾಯತ ಸಮುದಾಯಗಳಲ್ಲಿ ಅನೇಕ ಉಪ ಪಂಗಡಗಳಿವೆ.ಆರ್ಥಿಕವಾಗಿ ಹಿಂದುಳಿದವರಿಗೆ ಕೊಡಲಿ. ಯಾವ ಯಾವ ಸಮುದಾಯವರು ಮೀಸಲಾತಿಗೆ ಹೋರಾಟ ಮಾಡ್ತಿದಾರೋ ಅವರೆಲ್ಲರಿಗೂ ಮೀಸಲಾತಿ ಕೊಡಲಿ ಎಂದು ಹೇಳಿದರು.
ಈಶ್ವರಪ್ಪ, ಜಾರಕಿಹೊಳಿಗೆ ಸಚಿವ ಸ್ಥಾನ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆರು ಸಚಿವ ಸ್ಥಾನಗಳೂ ಖಾಲಿ ಇವೆ. ನಾನು ಸಹ ಡಿಮ್ಯಾಂಡ್ ಮಾಡಿದ್ದೇನು. ಕೆಲವರು ಎರೆಡೆರಡು ಖಾತೆ ನಿಭಾಯಿಸ್ತಾರೆ. ಅವರಿಗೆ ಸಚಿವ ಸ್ಥಾನ ಕೊಡ್ಬೇಡಿ ಅಂತೇನೂ ಹೇಳ್ತಿಲ್ಲ.
ನನ್ನನು ಮಂತ್ರಿ ಮಾಡಿ ಎಂದು ಕೇಳ್ತಿಲ್ಲ. ಒಂದು ವರ್ಷದ ಹಿಂದೆಯೇ ಕೊಡಬೇಕಾಗಿತ್ತು. ಇಷ್ಟು ವಿಳಂಬ ಯಾಕೆ ಮಾಡ್ಬೇಕಿತ್ತು. ಹೊಸ ಮುಖಗಳಿಗೆ ಸಚಿವ ಸ್ಥಾನ ಸಿಗಬೇಕು. ಕೊಟ್ಟವರಿಗೆ ಮತ್ತೆ ಕೊಟ್ರೆ ಹೇಗೆ ?. ನಾನು ಸಹ ದೆಹಲಿ ವರಿಷ್ಟರಿಗೆ ಬೇಟಿ ಮಾಡಿ ಡಿಮ್ಯಾಂಡ್ ಮಾಡಿದ್ದೇನು. ನಾನು ಎಲ್ಲ ರೀತಿಯಿಂದಲೂ ಸಮರ್ಥನಿದ್ದೇನೆ. ಕೋವಿಡ್ ಸಮಯದಲ್ಲಿ ತುಂಬಾ ಕೆಲಸ ಮಾಡಿದ್ದೇನೆ.
ನನಗೆ ಅರ್ಹತೆ ಇದ್ದರೂ ನನಗೆ ಸಚಿವ ಸ್ಥಾನ ಯಾಕೆ ಕೊಡಲಿಲ್ಲ. ಬಹಳ ಶಾಸಕರಿಗೆ ಅನ್ಯಾಯವಾಗಿದೆ. ಇನ್ನುಳಿದ ಶಾಸಕರು ಎಲ್ಲಿಗೆ ಹೋಗಬೇಕು. ರೇಣುಕಾಚಾರ್ಯ .. ಬಾಯಿ ಮುಚ್ಕೊಂಡು ಇದ್ದಾನೆ ಅಂದ್ರೆ ಅದು ನನ್ನ ದೌರ್ಬಲ್ಯ ಅಲ್ಲ. ನಾನೂ ಸಹ ಸಚಿವ ಸ್ಥಾನಕ್ಕೆ ಅರ್ಹನಾಗಿದ್ದೇನೆ ಎಂದರ್ಥ ಎಂದರು.
ಇದನ್ನೂಓದಿ:ಮೀಸಲಾತಿ ಮೇಲಿನ ಪೂರ್ಣ ವರದಿ ಸಿದ್ಧವಾಗಿಲ್ಲ, ಮಧ್ಯಂತರ ವರದಿ ಶೀಘ್ರ ಸಲ್ಲಿಕೆ: ಜಯಪ್ರಕಾಶ್ ಹೆಗ್ಡೆ