ಚಿಕ್ಕೋಡಿ : ಚಿಕ್ಕೋಡಿ-ಸದಲಗಾ ಕ್ಷೇತ್ರದ 25 ಗ್ರಾಪಂಗಳ ಪೈಕಿ 13 ಬಿಜೆಪಿ ಪರವಾಗಿವೆ ಎಂದು ವಿಧಾನಪರಿಷತ್ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಜಯಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಗೆಲುವನ್ನು ಸಾಧಿಸಿದ್ದಾರೆ" ಎಂದು ಹೇಳಿದರು.
ಇದನ್ನು ಓದಿ: ಮೂಡದ ಒಮ್ಮತ: ಯಾವುದೇ ನಿರ್ಧಾರವಿಲ್ಲದೆ ರೈತರು-ಕೇಂದ್ರದ ನಡುವಿನ ಸಭೆ ಮುಕ್ತಾಯ
25 ಗ್ರಾಮ ಪಂಚಾಯತ್ ಪೈಕಿ 13 ಗ್ರಾಪಂ ಬಿಜೆಪಿ ಪರವಾಗಿವೆ. 10ರಲ್ಲಿ ಕಾಂಗ್ರೆಸ್ ಬಹುಮತವನ್ನು ಸಾಧಿಸಿದೆ. ಇನ್ನುಳಿದಂತೆ ಎರಡು ಗ್ರಾಪಂಗಳಲ್ಲಿ ಸಮಬಲದ ಹೊಂದಿದೆ ಎಂದು ಹೇಳುವ ಮೂಲಕ, 18 ಗ್ರಾಪಂಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಎಂದು ಹೇಳುತ್ತಿದ್ದ ಶಾಸಕ ಗಣೇಶ ಹುಕ್ಕೇರಿ ಅವರಿಗೆ ತಿರುಗೇಟು ನೀಡಿದ್ದಾರೆ.