ETV Bharat / state

ಬಿಜಿಪಿಯರು ನನ್ನ ಸುತ್ತಲೂ ಚಕ್ರವ್ಯೂಹ ಹೆಣೆದಿದ್ದಾರೆ: ಲಕ್ಷ್ಮಣ ಸವದಿ - ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿ

ಬಿಜೆಪಿಯವರು ನನ್ನನ್ನು ಸೋಲಿಸಲು ಚಕ್ರವ್ಯೂಹ ಹೆಣೆದಿದ್ದಾರೆ. ಆದ್ರೆ ನನಗೆ ಮತದಾರರೇ‌ ನನ್ನ ನ್ಯಾಯಾಧೀಶರು ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ತಿಳಿಸಿದರು.

Lakshmana Savadi
ಲಕ್ಷ್ಮಣ ಸವದಿ
author img

By

Published : Apr 28, 2023, 6:43 AM IST

ಚಿಕ್ಕೋಡಿ: ನಾನು ಯಡಿಯೂರಪ್ಪನವರ ಹಳೆ ಶಿಷ್ಯನಾಗಿರುವುದರಿಂದ ನನ್ನ ಮೇಲೆ ಬಿಎಸ್​ವೈ ಅವರು ಮೃದು ಸ್ವಭಾವ ಹೊಂದಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು. ಅವರು ಅಥಣಿ ಪಟ್ಟಣದಲ್ಲಿ ಜೈನ ಸಮುದಾಯದಿಂದ ಸವದಿ ಅವರಿಗೆ ಬೆಂಬಲ ಸೂಚಿಸಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: ಮೀನುಗಾರರಿಗೆ ದೊರೆಯಲಿದೆ 10 ಲಕ್ಷ ರೂ. ವಿಮೆ, ಲೀಟರ್ ಡೀಸೆಲ್‌ಗೆ 25 ರೂ. ಸಬ್ಸಿಡಿ: ರಾಹುಲ್ ಗಾಂಧಿ ಭರವಸೆ

''ಅಥಣಿಯಲ್ಲಿ ಲಕ್ಷ್ಮಣ ಸವದಿ ಹಾಗೂ ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ಅವರನ್ನು ಸೋಲಿಸ್ತೀನಿ ಎಂದು ಬೆಂಗಳೂರಿನಲ್ಲಿ ಯಡಿಯೂರಪ್ಪನವರು ಹೇಳಿದ್ದರು. ಅಂದು ಅಥಣಿಗೆ ಬಂದಾಗ ಶಿಷ್ಯನಾದ ನನ್ನ ಮೇಲೆ ಮರಳಿ ಮನಸಾಗಿ ಶೆಟ್ಟರ್​ನನ್ನು ನಾನು ಸೋಲಿಸ್ತೀನಿ, ಸವದಿಯನ್ನು ನೀವು ಸೋಲಿಸಿ ಎಂದು ಮೃದು ಸ್ವಭಾವದಿಂದ ಹೇಳಿದ್ದಾರೆ. ಶಿವಯೋಗಿ ಅವರಿಗೆ ಒಳ್ಳೆಯ ಬುದ್ಧಿ ಕೊಟ್ಟಿರಬೇಕು'' ಎಂದು ತಿಳಿಸಿದರು.

ಇದನ್ನೂ ಓದಿ: "ಹೀಗೆ ಮಾತಾಡಿಯೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ": ಖರ್ಗೆ ಹೇಳಿಕೆಗೆ ಬೊಮ್ಮಾಯಿ ತಿರುಗೇಟು

ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ತಿರುಗೇಟು: ''ಮುದ್ದಾಂ ನಾನು ಕೆರಳಬೇಕು ಎಂಬ ದುರುದ್ದೇಶದಿಂದ ಕೆಲವರು ಏನೋನೋ ಮಾತನಾಡುತ್ತಿದ್ದಾರೆ. ರಮೇಶ ಅಣ್ಣನವರೇ ನಾನು ಚುನಾವಣೆ ಮುಗಿಯುವವರೆಗೂ ಬಾಯಿ ಪಿಟಕ್ ಅನ್ನಂಗಿಲ್ಲ. ಅದಕ್ಕೆ ಬರುವ ಮೇ 13ರಂದು ನನ್ನ ಮತಕ್ಷೇತ್ರದ ಜನ ನಿಮಗೆ ಉತ್ತರ ಕೊಡ್ತಾರೆ'' ಎಂದರು.

ಇದನ್ನೂ ಓದಿ: ಕಾಂಗ್ರೆಸ್​ನಿಂದ 5ನೇ ಗ್ಯಾರಂಟಿ ಘೋಷಣೆ : ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ

''ಇದೀಗ ನನಗೆ ಕಷ್ಟದ ಕಾಲಬಂದಿದೆ, ಈ ಅಗ್ನಿ‌ಪರೀಕ್ಷೆಯಲ್ಲಿ ನನ್ನನ್ನು ಎತ್ತಿ ಹಿಡಿಯುವವರು ಕ್ಷೇತ್ರದ ಮತದಾರ ಬಾಂಧವರು. ಹಸ್ತದ ಗುರುತಿಗೆ ತಮ್ಮ ಮತ ಹಾಕಿ, ನಮ್ಮ ವಿರೋಧಿಗಳಿಗೆ ಅವರ ಡಿಕ್ಷನರಿಯಲ್ಲಿ ಸಿಗಬಾರದ ರೀತಿ ಉತ್ತರ ಕೊಡಿ'' ಎಂದು ಮನವಿ ಮಾಡಿದರು.

ಇದನ್ನೂ ಓದಿ: ಡಬಲ್​ ಇಂಜಿನ್​ ಸರ್ಕಾರದ ಕಾರ್ಯಸಾಧನೆ ಪ್ರತಿ ಮನೆಗೂ ತಲುಪಿಸಿ: ಕಾರ್ಯಕರ್ತರಿಗೆ ಮೋದಿ ಕಿವಿಮಾತು

''ಬಿಜೆಪಿಯವರು ಸವದಿ ಅವರನ್ನು ಸೋಲಿಸಲೇಬೇಕು ಎಂದು ಎಲ್ಲ ತಂತ್ರಗಳನ್ನು ಪ್ರಯೋಗ ಮಾಡ್ತಿದ್ದಾರೆ. ನನ್ನ ಸುತ್ತಲೂ ಚಕ್ರವ್ಯೂಹ ಹೆಣೆದಿದ್ದಾರೆ. ನನಗೆ ಅದರ ಅರಿವಿದೆ. ಅದು ಎಂತಹದ್ದಾದರೂ ಅದನ್ನು ತೆಗೆಯುವ ಶಕ್ತಿ ಮತದಾರ ಬಾಂಧವರಿಗೆ ಇದೆ. ಮತದಾರರೇ‌ ನನ್ನ ನ್ಯಾಯಾಧೀಶರು'' ಎಂದು ಅವರು ಹೇಳಿದರು.

ಇದನ್ನೂ ಓದಿ: ಜೆಡಿಎಸ್​ ಪ್ರಣಾಳಿಕೆ ಬಿಡುಗಡೆ : ರೈತ ಚೈತನ್ಯ, ಸಾಲ ಮನ್ನಾ ಸೇರಿದಂತೆ ಏನೆಲ್ಲ ಯೋಜನೆ ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.