ETV Bharat / state

ವಿಧಾನಸಭೆಯಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಹಲ್ಲೆ ಪ್ರಕರಣದ ಗದ್ದಲ: ಗೃಹ ಸಚಿವರ ಉತ್ತರಕ್ಕೆ ಬಿಜೆಪಿ ಆಕ್ಷೇಪ, ಸಭಾತ್ಯಾಗ

author img

By ETV Bharat Karnataka Team

Published : Dec 7, 2023, 6:51 PM IST

Updated : Dec 8, 2023, 4:23 PM IST

Belagavi winter session: ಬೆಳಗಾವಿಯಲ್ಲಿ‌ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರತಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ಗದ್ದಲಕ್ಕೆ ಕಾರಣವಾಯಿತು.

Assembly
ವಿಧಾನಸಭೆ
ವಿಧಾನಸಭೆಯಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಚೂರಿ ಇರಿತ ಪ್ರಕರಣದ ಗದ್ದಲ

ಬೆಳಗಾವಿ: ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ನಡೆದ ಹಲ್ಲೆ ಪ್ರಕರಣ ಇಂದು ಮತ್ತೆ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು.‌ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರಕ್ಕೆ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಶೂನ್ಯವೇಳೆಯಲ್ಲಿ ನಿನ್ನೆ ಬಿಜೆಪಿ ಸದಸ್ಯರು ಪ್ರಸ್ತಾಪಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಇಂದು ಉತ್ತರ ನೀಡುತ್ತಾ, ನಾವು ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಿ ಯಾವ ಸೆಕ್ಷನ್ ಹಾಕಬೇಕು, ಯಾರನ್ನು ‌ಬಂಧನ ಮಾಡಬೇಕು ‌ಎಂಬುದನ್ನು ಸರ್ಕಾರ ಗಂಭೀರವಾಗಿ ‌ತೆಗೆದುಕೊಳ್ಳುತ್ತದೆ. ತನಿಖೆಯ ಸಂದರ್ಭದಲ್ಲಿ ಸೆಕ್ಷನ್ ಹಾಕುತ್ತೇವೆ. ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸುತ್ತೇವೆ. ಸದ್ಯ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಎಂಎಲ್‌ಸಿ ಹೆಸರು ಸೇರಿಸಿದ್ದೇವೆ. ನಾನು ಹಾಗೂ ಬಿಜೆಪಿಯವರು ಹೇಳಿದ ಹಾಗೆ ಸೆಕ್ಷನ್ ಹಾಕಲು ಆಗಲ್ಲ. ತನಿಖಾಧಿಕಾರಿಯೇ ಹಾಕುತ್ತಾರೆ ಎಂದು ತಿಳಿಸಿದರು.

ಗೃಹ ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿ.ವೈ.ವಿಜಯೇಂದ್ರ,‌ ಈ ಪ್ರಕರಣದಲ್ಲಿ ಆರೋಪಿಗಳ ಮೇಲೆ ಸೆಕ್ಷನ್ 307 ಏಕೆ ಹಾಕಿಲ್ಲ?. ಇಲ್ಲಿಯತನಕ ಒಬ್ಬರ ಬಂಧನವೂ ಆಗಿಲ್ಲ. ಪೃಥ್ವಿ ಸಿಂಗ್ ದೂರಿನಲ್ಲಿ ಚೆನ್ನರಾಜ್ ಹಟ್ಟಿಹೊಳಿ ಫೋನ್ ಕಸಿದುಕೊಂಡಿದ್ದಾರೆ. ಹುಡುಗರಿಗೆ ಹೊಡೆಯಲು ‌ಹೇಳಿದ್ದಾರೆ.‌ ಪೊಲೀಸ್ ಎಫ್‌ಐಆರ್​​ನಲ್ಲಿ ಕಳ್ಳತನ ಪ್ರಕರಣ ಬುಕ್ ಮಾಡಿದ್ದಾರೆ.‌ ಮಾರಕಾಸ್ತ್ರಗಳಿಂದ ಹಲ್ಲೆ ಎಂದು ಉಲ್ಲೇಖಿಸಿಲ್ಲ.‌ ಸೆಕ್ಷನ್ 397 ಹಾಗೂ ಸೆಕ್ಷನ್ 398 ಇಲ್ಲ. ಕೊಲೆ ಯತ್ನ ಪ್ರಕರಣ ದಾಖಲಾಗಿಲ್ಲ ಎಂದು ಆರೋಪಿಸಿದರು.

ಅಧಿವೇಶನ ನಡೆಯುವ ಸಂದರ್ಭದಲ್ಲಿ ಆಡಳಿತ ಪಕ್ಷದ ಎಂಎಲ್‌ಸಿ ಈ ರೀತಿ ನಡೆದುಕೊಂಡಿದ್ದಾರೆ.‌ ಎಫ್‌ಐಆರ್ ನೋಡಿದರೆ ರಾಜ್ಯ ಸರ್ಕಾರ ಹಾಗೂ ಪೊಲೀಸರು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಈ ಪ್ರಕರಣವನ್ನು ಇಲ್ಲಿಗೆ ಬಿಡಲು ಸಾಧ್ಯವಿಲ್ಲ. ತಪ್ಪಿತಸ್ಥರರನ್ನು ಕೂಡಲೇ ಬಂಧಿಸಬೇಕು. ಪೊಲೀಸರ ತನಿಖೆ ಬಗ್ಗೆ ನಾವು ಅನುಮಾನ ವ್ಯಕ್ತಪಡಿಸಿದ ಹಾಗೆ ಎಫ್‌ಐಆರ್ ಇದೆ. ಎಫ್‌ಐಆರ್‌ನಲ್ಲಿ ಕಠಿಣ ಸೆಕ್ಷನ್ ಹಾಕಿ ಎಂದು ವಿಜಯೇಂದ್ರ ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಪ್ರಕರಣ ಮುಚ್ಚಿಹಾಕುವ ಪ್ರಯತ್ನ ‌ನಡೆಯತ್ತಿದೆ. ಎಂಎಲ್‌ಸಿ ಹಾಗೂ ಎರಡು ಗನ್​ಮ್ಯಾನ್‌ ಭಾಗಿಯಾಗಿದ್ದಾರೆ. ಇದು ಸರ್ಕಾರಿ ಪ್ರಾಯೋಜಿತ ಕೊಲೆ ಯತ್ನ ಎಂದು ಗಂಭೀರ ಆರೋಪ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರೆಲ್ಲರೂ ದನಿಗೂಡಿಸಿದರು.

ಇದೇ ವೇಳೆ ಎದ್ದು ನಿಂತ ಸಚಿವ ಪ್ರಿಯಾಂಕ್ ಖರ್ಗೆ, ಮಣಿಕಂಠ ರಾಠೋಡ್ ಪ್ರಕರಣ ಉಲ್ಲೇಖಿಸುತ್ತಾ, ಅಪಘಾತ ಪ್ರಕರಣವನ್ನು ಹಲ್ಲೆ ಪ್ರಕರಣ ಎಂದು ಬಿಂಬಿಸಿದ್ದಾರೆ. ಇದು ಪ್ರಾಮಾಣಿಕತೆನಾ? ಅಂತವರಿಗೆ ಟಿಕೆಟ್ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಹಾಗೂ ವಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಮಾತು ಮುಂದುವರಿಸಿದ ಗೃಹ ಸಚಿವ ಪರಮೇಶ್ವರ್, ಪೃಥ್ವಿ ಸಿಂಗ್ ನೀಡಿದ ದೂರಿನಲ್ಲಿ ಏನಿದೆಯೋ ಅದನ್ನು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಪ್ರಕರಣದ ಸ್ವರೂಪ ನೋಡಿ ಸೆಕ್ಷನ್ ಹಾಕಲಾಗುತ್ತದೆ. ನಮ್ಮನ್ನು ನಿಮ್ಮನ್ನು ಕೇಳಿ ಸೆಕ್ಷನ್ ಹಾಕಲಾಗುವುದಿಲ್ಲ. ನಾವು ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ನಿಮಗೆ ಬೇಕಾದ ಉತ್ತರವನ್ನು ಕೊಡಲು ಆಗಲ್ಲ ಎಂದು ಅಸಮಾಧಾನ ಹೊರಹಾಕಿದರು.

ರಿಪಬ್ಲಿಕ್ ಬೆಳಗಾವಿ ಮಾಡಲು ಹೊರಟಿದ್ದಾರೆ: ಈ ಸಂದರ್ಭದಲ್ಲಿ ಮಧ್ಯಪ್ರವೇಶಿದ ಬಸನಗೌಡ ಯತ್ನಾಳ್, ಬೆಳಗಾವಿಯಲ್ಲಿ ಗೂಂಡಾಗಿರಿ ಪ್ರಾರಂಭವಾಗಿದೆ. ಅಧಿವೇಶನದ ಸಂದರ್ಭದಲ್ಲಿ ಎರಡು ಘಟನೆ ಆಗಿದೆ. ಇದು ಬಿಹಾರವೋ? ಇಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ. ಗೃಹ ಸಚಿವರು ಯಾವ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ?. ಬೆಳಗಾವಿಯನ್ನು ಇಬ್ಬರಿಗೆ ಬಿಟ್ಟಿದ್ದೇವೆ. ಅವರು ಏನು ಬೇಕಾದರೂ ಮಾಡಲಿ ಎಂದೇನಾದರೂ ಇದ್ಯಾ?. ಬಳಿಕ ಪೃಥ್ವಿ ಸಿಂಗ್ ಪ್ರಕರಣದಲ್ಲಿನ ಸರ್ಕಾರದ ಉತ್ತರದಿಂದ ಸಮಾಧಾನಗೊಳ್ಳದೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಸಭಾತ್ಯಾಗವೋ, ಧರಣಿಯೋ-ಬಿಜೆಪಿ ಶಾಸಕರಲ್ಲಿ ಗೊಂದಲ: ಸಭಾತ್ಯಾಗದ ವೇಳೆ ಸದನದಲ್ಲಿ ವಿರೋಧ ಪಕ್ಷದ ನಾಯಕ, ಬಿಜೆಪಿ ಶಾಸಕರ ನಡುವೆ ಗೊಂದಲ ಬಹಿರಂಗಗೊಂಡಿತು. ಪೃಥ್ವಿ ಸಿಂಗ್ ಪ್ರಕರಣ ಮತ್ತು ಅಭಿಜಿತ್ ಜವಳಕರ್ ಪ್ರಕರಣ ಮೇಲೆ ಚೆರ್ಚೆ ನಡೆಸಿ ಧರಣಿ ನಡೆಸಲು ವಿಜಯೇಂದ್ರ ಮತ್ತು ಇತರ ಶಾಸಕರು ತೀರ್ಮಾನಿಸಿದ್ದರು.

ಅಷ್ಟರಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಏಕಾಏಕಿ ಸಭಾತ್ಯಾಗ ಎಂದು ಪ್ರಕಟಿಸಿ ಸಭೆಯಿಂದ ಹೊರ ನಡೆದು ಗೊಂದಲ ಉಂಟಾಯಿತು. ಈ ವೇಳೆ ಸಭೆಯಿಂದ‌ ಹೊರಬಾರದ ಅಭಯ ಪಾಟೀಲ್ ಧರಣಿಗೆ ಮುಂದಾದರು. ಸಭಾತ್ಯಾಗವೋ ಅಥವಾ ಧರಣಿಯೋ ಎಂಬ ಗೊಂದಲ‌ ಉಂಟಾಗಿ ಒಂದಿಷ್ಟು ಬಿಜೆಪಿ ಶಾಸಕರು ಸದನದಲ್ಲೇ ನಿಂತು ಮಾತುಕತೆ ನಡೆಸಿದರು. ಇತ್ತ ಆರ್.ಅಶೋಕ್ ನಿರ್ಧಾರದಿಂದ ಗಲಿಬಿಲಿಗೊಂಡು ಕೆಲವೊಂದಷ್ಟು ಶಾಸಕರು ಸಭೆಯಿಂದ ಹೊರನಡೆದರು.

ವಿಜಯೇಂದ್ರ, ಎಸ್.ಆರ್.ವಿಶ್ವನಾಥ್, ಸತೀಶ್‌ ರೆಡ್ಡಿ, ಮಂಗಳೂರಿನ ಶಾಸಕರು ಧರಣಿಗೆ ಮುಂದಾದರು. ಸ್ವಲ್ಪ ಕಾಲ ಸದನದಲ್ಲೇ ಗಲಿಬಿಲಿಗೊಂಡು ಪರಸ್ಪರ ಮಾತುಕತೆ ನಡೆಸಿ ಬಳಿಕ ಕಲಾಪದಿಂದ ಹೊರನಡೆದರು. ಬಾವಿಗಿಳಿದು ಧರಣಿಗೆ ಮುಂದಾಗಿದ್ದ ಅಭಯ್ ಪಾಟೀಲರನ್ನು ಇತರೆ ಶಾಸಕರು ಕರೆತಂದರು.

ಬಳಿಕ ಸಭಾತ್ಯಾಗ-ಧರಣಿ ಗೊಂದಲದಿಂದ ಸಿಟ್ಟಾದ ಎಸ್.ಆರ್.ವಿಶ್ವನಾಥ್, ಅಭಯ ಪಾಟೀಲ್ ಪ್ರತಿಪಕ್ಷ ನಾಯಕನ ಕೊಠಡಿಗೆ ತೆರಳಿದರು. ಆರ್.ಅಶೋಕ್, ವಿಜಯೇಂದ್ರ ಮತ್ತು ಯತ್ನಾಳ್ ಅಸಮಾಧಾನಿತರನ್ನು ಸಮಾಧಾನಪಡಿಸಿದರು.

ಇದನ್ನೂಓದಿ: ಸರ್ಕಾರ ರಾಜ್ಯದ ರೈತರ ನೆರವಿಗೆ ಬರೋದು ಬಿಟ್ಟು ರಾಜಕಾರಣ ಮಾಡುತ್ತಿದೆ: ವಿಜಯೇಂದ್ರ ವಾಗ್ದಾಳಿ

Last Updated : Dec 8, 2023, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.