ETV Bharat / state

ಕೋವಿಡ್​ ಆತಂಕದ ನಡುವೆ ಬೆಳಗಾವಿ ಜಿಲ್ಲಾಸ್ಪತ್ರೆಯಿಂದ ಮಾನವೀಯ ಕಾರ್ಯ! - belgavi bims news

ಬಿಮ್ಸ್​​​ ಆಸ್ಪತ್ರೆಯ ಅನೇಕ ಸಿಬ್ಬಂದಿ ಸೋಂಕಿಗೆ ತುತ್ತಾದರೂ ಕೂಡ ಚೇತರಿಸಿಕೊಂಡು ಮತ್ತೆ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಹಲವು ಒತ್ತಡಗಳ ನಡುವೆ ಕೊರೊನಾ ವಾರಿಯರ್​​ಗಳ ಬಿಡುವಿಲ್ಲದ ಈ ಕಾರ್ಯ ಸಾರ್ವಜನಿಕರ ಹಾಗೂ ರೋಗಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

bims giving good service in corona condition
ಖಾಸಗಿ ಆಸ್ಪತ್ರೆಗಳ ಅಮಾನವೀಯ ವರ್ತನೆ ನಡುವೆ ಬಿಮ್ಸ್​​​ನಿಂದ ಮಾನವೀಯ ಕಾರ್ಯ!
author img

By

Published : Oct 2, 2020, 11:02 AM IST

ಬೆಳಗಾವಿ: ಮಹಾಮಾರಿ ಕೊರೊನಾ ಹಾವಳಿಯಲ್ಲಿ ಸರ್ಕಾರಕ್ಕೆ ಕೈಜೋಡಿಸದೆ ಅದೆಷ್ಟೋ ಖಾಸಗಿ ಆಸ್ಪತ್ರೆಗಳು ಅಮಾನವೀಯ ವರ್ತನೆ ತೋರಿಸುತ್ತಿರುವುದರ ನಡುವೆಯೂ ಬೆಳಗಾವಿಯ ಬಿಮ್ಸ್​​​ ಆಸ್ಪತ್ರೆ ಕೋವಿಡ್ ಹಾಗೂ ಬೇರೆ ರೋಗಿಗಳ ಪಾಲಿಗೆ ವರವಾಗಿದೆ.

ಹೌದು, ಇಲ್ಲಿನ ಅನೇಕ ಸಿಬ್ಬಂದಿ ಸೋಂಕಿಗೆ ತುತ್ತಾದರೂ ಕೂಡ ಚೇತರಿಸಿಕೊಂಡು ಮತ್ತೆ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಕೊರೊನಾ ವಾರಿಯರ್​​ಗಳ ಬಿಡುವಿಲ್ಲದ ಈ ಕಾರ್ಯ ಸಾರ್ವಜನಿಕರ ಹಾಗೂ ರೋಗಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಜಿಲ್ಲೆಯಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳಿದ್ದರೂ ಸಹ ಕೋವಿಡ್ ವಾರ್ಡ್ ಮಾಡಿರಲಿಲ್ಲ. ಜಿಲ್ಲಾಡಳಿತದ ಖಡಕ್ ಎಚ್ಚರಿಕೆಗೆ ಬೆಳಗಾವಿಯ ಕೆಎಲ್‍ಇ ಹಾಗೂ ಲೇಕ್‍ವ್ಯೂ ಆಸ್ಪತ್ರೆಗಳು 30 ಬೆಡ್‍ಗಳ ಕೋವಿಡ್ ವಾರ್ಡ್ ಮಾಡಿವೆ. ಆದ್ರೆ ಹಣವಿದ್ದವರು ಮಾತ್ರ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಮಧ್ಯಮ ವರ್ಗ ಹಾಗೂ ಬಡ ರೋಗಿಗಳು ಬಿಮ್ಸ್​​ಅನ್ನೇ ಅವಲಂಬಿಸಿದ್ದಾರೆ.

ಬಿಮ್ಸ್​​​ ಆಸ್ಪತ್ರೆಯ ಸೇವೆ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ-ದಿನೆ ಹೆಚ್ಚುತ್ತಿದೆ. ಖಾಸಗಿ ಆಸ್ಪತ್ರೆಗಳು ಸ್ಪಂದಿಸದ ಕಾರಣ 740 ಹಾಸಿಗೆಯ ಬಿಮ್ಸ್​​ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಸರ್ಕಾರದ ಎಲ್ಲಾ ಸೌಲಭ್ಯ ಪಡೆದು ರೋಗಿಗಳಿಗೆ ಆರೈಕೆ ಮಾಡಲಾಗುತ್ತಿದೆ. ಈವರೆಗೆ ಬಿಮ್ಸ್​​ನಲ್ಲಿ ಚಿಕಿತ್ಸೆ ಪಡೆದ 8,916ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 100ಕ್ಕೂ ಅಧಿಕ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತೆಯರಿಗೆ ಹೆರಿಗೆ ಮಾಡಿಸಿಲ್ಲ. ಜಿಲ್ಲಾಸ್ಪತ್ರೆ ಕೋವಿಡ್ ವಾರ್ಡ್ ಆಗಿದ್ದು, ನಿತ್ಯ 300ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗುತ್ತಿವೆ. ಕೋವಿಡ್​​ ರೋಗಿಗಳಿಗೆ ಚಿಕಿತ್ಸೆ ಕೊಡುವ ಜೊತೆಗೆ ಗರ್ಭಿಣಿಯರನ್ನೂ ಸಹ ಆರೈಕೆ ಮಾಡಲಾಗುತ್ತಿದೆ. ಅಲ್ಲದೇ ಖಾನಾಪುರ ತಾಲೂಕಿನ ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೈಲಹೊಂಗಲ ತಾಲೂಕಿನ ದೇಶನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೂಡ ಸೋಂಕಿತ ಗರ್ಭಿಣಿಯರ ಹೆರಿಗೆ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿ ಕಾರ್ಯಕ್ಕೆ ಟ್ವೀಟ್ ಮೂಲಕ ವೈದ್ಯಕೀಯ ಸಚಿವ ಸುಧಾಕರ್​ ಅವರು ಅಭಿನಂದಿಸಿದ್ದರು.

ಕೋವಿಡ್ ಪ್ರಕರಣಗಳು ಆರಂಭದಲ್ಲಿ ಕಡಿಮೆ ಇದ್ದ ಕಾರಣಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಬೇರೆ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೋವಿಡ್ ಕೇಸ್‍ಗಳು ಹೆಚ್ಚಾಗುತ್ತಿದ್ದಂತೆ ಇಡೀ ಆಸ್ಪತ್ರೆಯನ್ನು ಕೋವಿಡ್ ವಾರ್ಡ್ ಆಗಿ ಪರಿವರ್ತನೆ ಮಾಡಲಾಗಿದೆ. 100 ಬೆಡ್‍ಗಳನ್ನು ವಿಸ್ತರಣೆ ಮಾಡಲಾಗುತ್ತಿದ್ದು, ಅಗತ್ಯ ಆಕ್ಸಿಜನ್ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.

ನಮ್ಮ ಸಿಬ್ಬಂದಿಗೆ ಒತ್ತಡ ಹೆಚ್ಚಿದ್ದರೂ, ಹಲವರು ಸೋಂಕಿಗೆ ತುತ್ತಾದರೂ ನಾವೇ ಅವರಿಗೆ ಧೈರ್ಯ ತುಂಬುತ್ತಿದ್ದೇವೆ. ಸರ್ಕಾರ ಕೂಡ ಕೊರೊನಾ ವಾರಿಯರ್ಸ್‍ಗೆ ಗೌರವ ಧನ ನೀಡುತ್ತಿದೆ. ನಾವೂ ನಿತ್ಯ ನಮ್ಮ ಸಿಬ್ಬಂದಿ ಜೊತೆಗೆ ಸಭೆ ನಡೆಸಿ ಆತ್ಮಸ್ಥೈರ್ಯ ತುಂಬುತ್ತಿದ್ದೇವೆ ಎಂದು ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.