ETV Bharat / state

ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಕಾಗವಾಡ ಪೊಲೀಸರು - ಚಿಕ್ಕೋಡಿಯಲ್ಲಿ ಬೈಕ್ ಕಳ್ಳತನ

ಕಳೆದ ಕೆಲ ದಿನಗಳಿಂದ ಉಗಾರ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಬೈಕ್ ಕಳ್ಳತನದ ಹಾವಳಿ ಹೆಚ್ಚಾಗಿತ್ತು. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಸದ್ಯ ಕಾಗವಾಡ ಪಿಎಸ್‍ಐ ಹನುಮಂತ ಧರ್ಮಟ್ಟಿ ಮತ್ತು ಸಿಬ್ಬಂದಿ ಬೈಕ್ ಕಳ್ಳರನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Bike theft
Bike theft
author img

By

Published : Jun 27, 2020, 10:12 PM IST

ಚಿಕ್ಕೋಡಿ : ಸಂಶಯಾಸ್ಪದವಾಗಿ ಬೈಕ್ ಮೇಲೆ ಸಂಚರಿಸುವಾಗ ತಡೆದು ವಿಚಾರಿಸಿದಾಗ ಕಳ್ಳತನದ ಜಾಲವೊಂದು ಪತ್ತೆಯಾಗಿದೆ. ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದ ನಾಲ್ವರು ಯುವಕರು ಬೇರೆಡೆಯಿಂದ ಬೈಕ್‍ಗಳನ್ನು ಕಳ್ಳತನ ಮಾಡಿ ಬಂದು, ಉಗಾರ ಪಟ್ಟಣದಲ್ಲಿ ಸಂಚರಿಸುತ್ತಿದ್ದಾಗ ಸಂಶಯಗೊಂಡು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಜಾಲವು ಪತ್ತೆಯಾಗಿದೆ. ವಾಹನದ ದಾಖಲಾತಿಗಳನ್ನು ಒದಗಿಸಲು ಅಸಮರ್ಥರಾದ ಯುವಕರನ್ನು ವಿಚಾರಣೆಗೊಳಪಡಿಸಿದಾಗ ಇವರು ವಾಹನ ಕಳ್ಳತನದಲ್ಲಿ ಪಾಲ್ಗೊಂಡವರು ಎಂದು ಬಹಿರಂಗವಾಯಿತು.

ಕಳೆದ ಕೆಲ ದಿನಗಳಿಂದ ಉಗಾರ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಬೈಕ್ ಕಳ್ಳತನದ ಹಾವಳಿ ಹೆಚ್ಚಾಗಿತ್ತು. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಸದ್ಯ ಕಾಗವಾಡ ಪಿಎಸ್‍ಐ ಹನುಮಂತ ಧರ್ಮಟ್ಟಿ ಮತ್ತು ಸಿಬ್ಬಂದಿ ಬೈಕ್ ಕಳ್ಳರನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಎಸ್‍ಐ ಹನುಮಂತ ಧರ್ಮಟ್ಟಿ ಮತ್ತು ಅವರ ಸಿಬ್ಬಂದಿ ಉಗಾರ ಖುರ್ದ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ವಾಹನಗಳ ತಪಾಸಣೆ ಪ್ರಾರಂಭಿಸಿದಾಗ ಉಗಾರ ಪಟ್ಟಣದ ಆರೋಪಿಗಳಾದ ವಿನಾಯಕ ಅಶೋಕ ಪಾಚಕಟ್ಟೆ (25), ವಿನೋದ ರಮೇಶ ರಜಪೂತ(29), ಸಾಗರ ದಶರಥ ಕಾಂಬಳೆ(28), ರೋಹಿತ ಮನು ಚೌಹಾಣ್(22) ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಬಂಧಿತರಿಂದ 1 ಲಕ್ಷ 75 ಸಾವಿರ ಮೌಲ್ಯದ ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳ್ಳತನ ಮಾಡಿದ ರಾಯಲ್ ಎನ್‍ಫೀಲ್ಡ್, ಹೋಂಡಾ ಆ್ಯಕ್ಟೀವಾ, ಹೀರೊ ಹೋಂಡಾ ಸ್ಪ್ಲೆಂಡರ್, ಹೀರೊ ಹೋಂಡಾ ಸ್ಪ್ಲೆಂಡರ್ ಪ್ಲಸ್, ಪ್ಯಾಷನ್ ಪ್ರೊ ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಗವಾಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.