ಚಿಕ್ಕೋಡಿ (ಬೆಳಗಾವಿ) : ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸವಾರರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ರಾಯಭಾಗ ಹಾಗೂ ಹಾರುಗೇರಿ ಕಡೆಯಿಂದ ಬೈಕ್‌ಗಳು ಸಂಚರಿಸುವಾಗ ಅಪಘಾತ ಸಂಭವಿಸಿತು. ಬಾಗಲಕೋಟೆ ಜಿಲ್ಲೆಯ ಲೋಕಾಪುರ ಗ್ರಾಮದ ಮಾರುತಿ ಮೂಕಪ್ಪ ವಿಭೂತಿ (34), ಮುಧೋಳ ಪಟ್ಟಣದ ಶ್ಯಾಮಣ್ಣ ಜಂಬಯ್ಯ ವಿಭೂತಿ (22) ಮತ್ತು ರಾಯಬಾಗ ಪಟ್ಟಣದ ಸಿದ್ದಾರ್ಥ್ ಮಲ್ಲಪ್ಪ ಜಗದಾಳೆ (27) ಮೃತರೆಂದು ತಿಳಿದುಬಂದಿದೆ.
ರಾಯಭಾಗ ನಿವಾಸಿ ಅಂಕುಶ ನಾರಾಯಣ ಜಗದಾಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಹಾರಾಷ್ಟ್ರದ ಮೀರಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿಯಾದ ವೇಗ ಹಾಗೂ ಸವಾರರ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣವೆಂದು ಸಾರ್ವಜನಿಕರು ತಿಳಿಸಿದ್ದಾರೆ. ರಾಯಭಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: 3 ವರ್ಷದ ಮಗಳು, 1 ವರ್ಷದ ಮಗನ ಅಗಲಿದ 'ಸಾರಥಿ': ಹುತಾತ್ಮ ಹನುಮಂತರಾವ್ ತಂದೆ, ಅಣ್ಣನಿಗೂ ಸೇನೆಯ ನಂಟು