ETV Bharat / state

ಜನಧನ್​ ಖಾತೆಗೆ ಬಿದ್ದ 500 ರೂ. ಪಡೆಯಲು ಜೀವವನ್ನೇ ಪಣಕ್ಕಿಟ್ಟು ಕ್ಯೂನಲ್ಲಿ ನಿಂತ ಜನ - lockdown news

ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಜನಧನ್​ ಅಕೌಂಟ್‍ಗೆ ಹಣ ಹಾಕಿದ್ದಾರೆ. ಇದನ್ನು ಪಡೆದುಕೊಳ್ಳಲು ಈ ರೀತಿಯಾಗಿ ಮುಗಿಬೀಳುತ್ತಿದ್ದಾರೆ.

Bellary people violation of lockdown order
ಜೀವಕ್ಕಿಂತ ಹಣ ಮುಖ್ಯ ಎಂಬಂತೆ ಬ್ಯಾಂಕ್ ​ಮುಂದೆ ನಿಂತ ಜನ...
author img

By

Published : Apr 24, 2020, 3:05 PM IST

Updated : Apr 24, 2020, 3:40 PM IST

ಬೆಳಗಾವಿ: ಜನರಿಗೆ ಎಷ್ಟೇ ಬುದ್ಧಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಹಣಕ್ಕಾಗಿ ಮಾರಣಾಂತಿಕ ಕೊರೊನಾವನ್ನೂ ಲೆಕ್ಕಿಸದೆ ಗುಂಪುಗುಂಪಲ್ಲಿ ಜನರು ಸೇರಿದ ಘಟನೆ ಬೈಲಹೊಂಗಲ ಪಟ್ಟಣದ ಸಿಂಡಿಕೇಟ್​ ಬ್ಯಾಂಕ್​ನಲ್ಲಿ ನಡೆದಿದೆ.

ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೇವಲ ಐದು ನೂರು ರೂ. ಹಣ ಪಡೆಯಲು ಮುಗಿಬೀಳುತ್ತಿರುವುದು ದುರ್ದೈವ. ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಜನಧನ್​ ಅಕೌಂಟ್‍ಗೆ ಹಣ ಹಾಕಿದ್ದಾರೆ. ಇದನ್ನು ಪಡೆದುಕೊಳ್ಳಲು ಈ ರೀತಿಯಾಗಿ ಮುಗಿಬೀಳುತ್ತಿದ್ದಾರೆ.

ಇತರೆ ಜನರು ಕೂಡ ಬ್ಯಾಂಕ್​ನಲ್ಲಿ ಇಟ್ಟಿದ್ದ ಹಣವನ್ನು ಪಡೆದುಕೊಳ್ಳಲು ಬಂದಿದ್ದರು. ಯಾರೂ ಕೂಡ ಸಾಮಾಜಿಕ ಅಂತರವನ್ನಾಗಲಿ, ಮಾಸ್ಕ್​ ಧರಿಸುವುದಾಗಲಿ ಮಾಡಲಿಲ್ಲ. ಕೊರೊನಾ ಬಂದಿದೆ ಎಂದು ಸರ್ಕಾರ ಜೀವನೋಪಾಯಕ್ಕೆ ಹಣ ಹಾಕಿದರೆ, ಜನರು ಮಾತ್ರ ಪ್ರಾಣ ತೆಗೆಯುವ ಕೊರೊನಾವನ್ನು ಲೆಕ್ಕಿಸದೆ ಹಣಕ್ಕಾಗಿ ಮುಗಿಬಿದ್ದಿದ್ದು ಕೆಲ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

Last Updated : Apr 24, 2020, 3:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.