ಬೆಳಗಾವಿ : ವೀಕೆಂಡ್ ಕರ್ಫ್ಯೂ ಕರ್ತವ್ಯ ಮಧ್ಯೆ ಬೆಳಗಾವಿಯ ಮಾರ್ಕೆಟ್ ಠಾಣೆಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಕರ್ಫ್ಯೂ ಕಾರಣದಿಂದ ತರಕಾರಿ ಮಾರುಕಟ್ಟೆ ಬಂದ್ ಆಗಿದೆ. ಪ್ರತಿದಿನ ತರಕಾರಿ ಮಾರುಕಟ್ಟೆಯಲ್ಲಿ ವೇಸ್ಟ್ ಆದ ತರಕಾರಿಯನ್ನು ಬಿಡಾಡಿ ದನಗಳು ಸೇವಿಸುತ್ತಿದ್ದವು. ಅನೇಕ ಹೋಟೆಲ್ ಮಾಲೀಕರು ದನಗಳಿಗೆ ಆಹಾರ ನೀಡುತ್ತಿದ್ದರು.
ಆದರಿಂದು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಆಹಾರ ಸಿಗದೇ ರಸ್ತೆಬದಿಯಲ್ಲೇ ಹಸುಗಳು ಮೂಕವೇದನೆ ಅನುಭವಿಸುತ್ತಿದ್ದವು.
ಹಸುಗಳ ಹಸಿವಿನ ವೇದನೆ ಕಣ್ಣಾರೆ ಕಂಡ ಮಾರ್ಕೆಟ್ ಠಾಣೆ ಸಿಪಿಐ ಸಂಗಮೇಶ ಶಿವಯೋಗಿ, ಬಿಡಾಡಿ ದನಗಳಿಗೆ ಬಾಳೆ ಹಣ್ಣು ತರಿಸಿ ತಿನ್ನಿಸಿದರು.
ಮಾರ್ಕೆಟ್ ಠಾಣೆ ಸಿಬ್ಬಂದಿ ರಸ್ತೆ ಬದಿ ಇದ್ದ ಬಿಡಾಡಿ ಆಕಳು, ಕರುಗಳಿಗೆ ಬಾಳೆಹಣ್ಣು ತಿನ್ನಿಸಿ ಮಾನವೀಯತೆ ಮೆರೆದರು.