ಬೆಳಗಾವಿ: ಮಹಾಮಾರಿ ಕೊರೊನಾ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಕುಂದಾನಗರಿ ಇಂದು ಸಂಪೂರ್ಣ ಸ್ತಬ್ಧವಾಗಲಿದೆ.
ಜನತಾ ಕರ್ಫ್ಯೂಗೆ ಜಿಲ್ಲಾ ಹೋಟೆಲ್ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಮ್ಯಾಕ್ಸಿಕ್ಯಾಬ್, ಮಧ್ಯ ಮಾರಾಟಗಾರರ ಸಂಘ, ಪೆಟ್ರೊಲ್ ಬಂಕ್ ಮಾಲೀಕರ ಸಂಘ, ಚಿನ್ನಾಭರಣ ವ್ಯಾಪಾರಿಗಳ ಸಂಘ, ಎಪಿಎಂಸಿ ವರ್ತಕರ ಸಂಘ, ಬೆಳಗಾವಿ ಜಿಲ್ಲಾ ತರಕಾರಿ ಮಾರಾಟಗಾರರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ, ಹೂವು ಪೂರೈಕೆ ಹಾಗೂ ಮಾರಾಟಗಾರರ ಸಂಘ ಸೇರಿದಂತೆ ನಗರದ ಎಲ್ಲ ಮಾಲ್ ಗಳು, ಕಿರಾಣಿ ಅಂಗಡಿ, ಹೋಲ್ಸೇಲ್ ಮಳಿಗೆ, ಚಿತ್ರಮಂದಿರಗಳು ಬೆಂಬಲಿಸಿವೆ.
ಪರಿಸ್ಥಿತಿ ನೋಡಿಕೊಂಡು ಬಸ್ ಸೇವೆ ಒದಗಿಸಬೇಕೊ? ಬೇಡವೋ ಎಂಬುದನ್ನು ನಾಳೆಯೇ ಡಿಸೈಡ್ ಮಾಡಲಾಗುವುದು ಎಂದು ಸಾರಿಗೆ ಇಲಾಖೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಪ್ರತಿಕ್ರಿಯೆ ನೀಡಿದ್ದಾರೆ.
ಕೊರೊನಾ ನಿಯಂತ್ರಿಸಲು ಜನತಾ ಕರ್ಪ್ಯೂ ಬೆಂಬಲಿಸುವಂತೆ ವಿವಿಧ ಸಂಘಟನೆಗಳು ಸೋಶಿಯಲ್ ಮಿಡಿಯಾದಲ್ಲಿ ಕ್ಯಾಂಪೇನ್ ಮಾಡುತ್ತಿದ್ದಾರೆ. ರಾಜಕೀಯ ಮುಖಂಡರು ಕೂಡ ಕರ್ಪ್ಯೂ ಬೆಂಬಲಿಸುವಂತೆ ಜಿಲ್ಲೆಯ ಜನರಲ್ಲಿ ಮನವಿ ಮಾಡುತ್ತಿದ್ದಾರೆ.