ಬೆಳಗಾವಿ: ನಿಯಮ ಪಾಲಿಸದೆ ಆತುರಕ್ಕೆ ಬಿದ್ದು ಕಟಿಂಗ್ ಶಾಪ್ ಸಿಬ್ಬಂದಿ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುತ್ತಿರುವಂತೆ ಕಾಣುತ್ತಿದೆ.
ದೇಶದಲ್ಲಿ ಕೊರೊನಾ ತಡೆಗೆ 4ನೇ ಹಂತದ ಲಾಕ್ಡೌನ್ ಘೋಷಿಸಲಾಗಿದೆಯಾದರೂ ಅದರಲ್ಲಿ ಬಹುತೇಕ ಎಲ್ಲಾ ವಲಯಗಳಿಗೂ ಸಡಿಲಿಕೆ ಮಾಡಿದ್ದರಿಂದ ಜಿಲ್ಲೆಯ ಬಹುತೇಕ ಕಟಿಂಗ್ ಶಾಪ್, ಸಲೂನ್, ಪಾರ್ಲರ್ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಸಿಬ್ಬಂದಿ ಕೆಲಸದ ವೇಳೆ ಹ್ಯಾಂಡ್ ಗ್ಲೌಸ್ ಅಥವಾ ಕನಿಷ್ಠ ಸುರಕ್ಷಾ ಕವಚಗಳನ್ನು ಹಾಕಿಕೊಳ್ಳದೆ ಕಟಿಂಗ್ ಮಾಡುತ್ತಿದ್ದು, ಅನಾಹುತಕ್ಕೆ ಆಸ್ಪದ ನೀಡುವಂತಿದೆ.
ಕೊರೊನಾ ಭಯದಿಂದ ಬೆರಳೆಣಿಕೆಯಷ್ಟು ಜನರು ಮಾತ್ರ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಆಗಮಿಸುತ್ತಿದ್ದು, ಕ್ಷೌರಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸದೆ ಹೋದರೆ ಸೋಂಕು ಒಬ್ಬರಿಂದ ಮತೊಬ್ಬರಿಗೆ ವೇಗವಾಗಿ ಹರಡುವ ಸಾಧ್ಯತೆ ಇರುತ್ತದೆ.