ಬೆಳಗಾವಿ: ಜಿಲ್ಲೆಯ ಓವರ್ ಬ್ರಿಡ್ಜ್ ಬಳಿ ಹಾಯ್ದು ಹೋಗಿರುವ ರೈಲ್ವೆ ಹಳಿಯ ಮೇಲೆ ಸುಮಾರು 45 ವರ್ಷದ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.
ನಗರದ ಭರತೇಶ ಶಾಲೆಯ ಸಮೀಪದ ರೈಲ್ವೇ ಓವರ್ ಬ್ರಿಡ್ಜ್ ಬಳಿ ಗಾಯಗೊಂಡ ರೀತಿಯಲ್ಲಿ ಬಿದ್ದಿರುವ ಅಪರಿಚಿತ ಶವ ಪತ್ತೆಯಾಗಿದ್ದು, ಅಂದಾಜು 45 ವರ್ಷವಿರಬಹುದು ಎಂದು ಅಂದಾಜಿಸಲಾಗಿದೆ. ಮೃತ ವ್ಯಕ್ತಿಯ ಕುರಿತು ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮೃತ ದೇಹದ ಪಕ್ಕದಲ್ಲಿಯೇ ಆತನ ಮೊಬೈಲ್ ಫೋನ್ ಬಿದ್ದಿರುವುದು ಪತ್ತೆಯಾಗಿವೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯದ್ದು ಸಹಜ ಸಾವೋ..? ಅಥವಾ ಕೊಲೆಯೋ..? ಎಂಬುದು ತನಿಖೆಯಿಂದ ಗೊತ್ತಾಗಲಿದೆ.