ಬೆಳಗಾವಿ: ಎದುರಾಳಿ ಯಾರೇ ನಿಂತರೂ ಅದನ್ನು ನಿಭಾಯಿಸಲು ತಯಾರಿದ್ದೇವೆ ಎಂದು ದಿ.ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಹೇಳಿದರು.
ಬೆಳಗಾವಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ದಿ. ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್, ತಾಯಿಗೆ ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಖುಷಿಯಾಗಿದೆ ಎಂದರು. ನಾವು ಮೊದಲಿನಿಂದಲೂ ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡಬೇಕು ಎಂದು ಹೇಳಿದ್ವಿ. ನಮಗೇ ಕೊಡಬೇಕು, ಅವರಿಗೇ ಕೊಡಬೇಕು ಅಂತಾ ಏನಿರಲಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತಾ ಹೇಳಿದ್ದೆವು. ನಮ್ಮ ತಾಯಿಗೆ ಅವಕಾಶ ನೀಡಿದ್ದಕ್ಕೆ ಕೇಂದ್ರ, ರಾಜ್ಯದ ನಾಯಕರಿಗೆ ವಂದನೆ ಸಲ್ಲಿಸುತ್ತೇನೆ ಎಂದರು. ನಮ್ಮ ತಂದೆಯವರು ಮಾಡಿರುವ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಮ್ಮ ಕಣ್ಣ ಎದುರಲ್ಲೇ ಇವೆ. ಎದುರಾಳಿ ಯಾರೇ ನಿಂತರೂ ಅದನ್ನು ನಿಭಾಯಿಸಲು ತಯಾರಿದ್ದೇವೆ. ಸ್ಥಳೀಯ ನಾಯಕರೆಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ ಎಂದರು.
ಇದನ್ನೂ ಓದಿ: ಉಪಚುನಾವಣೆ: ಸುರೇಶ್ ಅಂಗಡಿ ಪತ್ನಿಗೆ ಬೆಳಗಾವಿ ಟಿಕೆಟ್ ನೀಡಿದ ಬಿಜೆಪಿ
ಮತದಾರರು ನಮ್ಮ ತಂದೆ, ಕುಟುಂಬದ ಮೇಲೆ ವಿಶ್ವಾಸವಿಟ್ಟಿದ್ರು. ತಂದೆಯವರು ಹೋದ್ಮೆಲೂ ಕುಟುಂಬದವರು ನಿಲ್ಲಬೇಕು ಅಂತಿದ್ರು. ಮತದಾರರ ಜತೆ ನಾವು ಮುಂದೆಯೂ ಇರ್ತೇವೆ. ಅವರ ಸಣ್ಣ ಆಪೇಕ್ಷೆಯೂ ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ. ತಂದೆಯವರು ಯಾವ ರೀತಿ ಜನರ ಜತೆ ಸಂಬಂಧ ಇಟ್ಟುಕೊಂಡಿದ್ರೋ ಅದಕ್ಕಿಂತಲೂ ಜಾಸ್ತಿ ಒಡನಾಟ ಇಟ್ಟುಕೊಳ್ಳುವ ಶಕ್ತಿ ನಮಗೆ ದೇವರು ಕೊಡಲಿ ಎಂದು ಶ್ರದ್ಧಾ ಶೆಟ್ಟರ್ ಹೇಳಿದರು.
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿಯುತ್ತಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಮಂಗಳಾ ಅವರಿಗೆ ಮಣೆ ಹಾಕಿದೆ.