ETV Bharat / state

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ಕನ್ನಡಿಗರಿಗೆ ಶೇ.65ರಷ್ಟು ಸೀಟು ಮೀಸಲು:ಸಿಎಂ ಸಿದ್ದರಾಮಯ್ಯ - CM Siddaramaiah

ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಕ್ರಾಂತಿವೀರ ರಾಯಣ್ಣ ಸೈನಿಕ ಶಾಲೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

CM Siddaramaiah spoke to the media.
ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Jan 17, 2024, 4:58 PM IST

Updated : Jan 17, 2024, 5:52 PM IST

ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಳಗಾವಿ: ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಕ್ರಾಂತಿವೀರ ರಾಯಣ್ಣ ಸೈನಿಕ ಶಾಲೆಯಲ್ಲಿ ಶೇ 65ರಷ್ಟು ಸೀಟು ಕನ್ನಡಿಗರಿಗೆ ಮೀಸಲು ಇಡಲು ಚಿಂತನೆ ನಡೆಸಿದ್ದೇವೆ. ಇನ್ನುಳಿದ 35ರಷ್ಟು ಸೀಟು ಬೇರೆ ಭಾಷೆ ಮಕ್ಕಳಿಗೆ ಮೀಸಲು ಮಾಡುವ ಚಿಂತನೆ ಇದೆ. ವಿಜಯಪುರದ ಸೈನಿಕ ಶಾಲೆಯ ಮಾದರಿ ಇಲ್ಲಿಯೂ ವ್ಯವಸ್ಥೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ಉದ್ಘಾಟನೆ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಗೊಳಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸೈನಿಕ ಶಾಲೆಗೆ ಅನುದಾನ ಕೊಟ್ಟಿದ್ದು ನಾನೇ. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ 110 ಎಕರೆ ಭೂಮಿಯನ್ನು ಮಂಜೂರು ಮಾಡಿಸಿದ್ದೇನು. ಈಗ ನಾನೇ ಈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಉದ್ಘಾಟಿಸುತ್ತಿರುವುದು ಖುಷಿಯ ಸಂಗತಿ. ಗುಣಮಟ್ಟದ ಶಿಕ್ಷಣದೊಂದಿಗೆ ದೇಶಪ್ರೇಮವನ್ನು ಸೈನಿಕ ಶಾಲೆಯ ಮಕ್ಕಳಿಗೆ ಬೆಳೆಸಲಾಗುವುದು. ಇಲ್ಲಿ ಕಲಿತವರು ಸೇನೆಗೆ ಸೇರುವ ಅವಕಾಶವಿದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಎಂಬ ಡಾ. ಯತೀಂದ್ರ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮುಖ್ಯಮಂತ್ರಿಯಾಗಿ ಮುಂದುವರೆಯುವ ಬಗ್ಗೆ ತೀರ್ಮಾನವನ್ನು ನಾನು ಮಾಡಲ್ಲ. ಅವರು (ಯತೀಂದ್ರ) ಮಾಡಲ್ಲ. ಸಿಎಂ ಸ್ಥಾನದಲ್ಲಿ ಮುಂದುವರಿಕೆ ಕುರಿತ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಆರೋಗ್ಯ ವಿಮೆ ಕರ್ನಾಟಕದ 865 ಗ್ರಾಮಗಳಲ್ಲಿ ಜಾರಿಗೊಳಿಸಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈಗಾಗಲೇ ಮಹಾರಾಷ್ಟ್ರದ ಆರೋಗ್ಯ ವಿಮೆ ಯೋಜನೆ ಜಾರಿ ತಡೆಗೆ ಕ್ರಮ ವಹಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಜೊತೆಗೆ ಚರ್ಚಿಸಿರುವೆ ಎಂದು ಸ್ಪಷ್ಟಪಡಿಸಿದರು.

  • ಮುಖ್ಯಮಂತ್ರಿ @siddaramaiah ಅವರು ಇಂದು ಬೈಲಹೊಂಗಲ ತಾಲ್ಲೂಕಿನಲ್ಲಿ ಸೈನಿಕ ಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

    ಕರ್ನಾಟಕದ ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿ ಮಾಡಲು ಮುಂದಾಗಿರುವ ಬಗ್ಗೆ ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದೆ. ಮಹಾರಾಷ್ಟ್ರ… pic.twitter.com/K9zKMcIAYY

    — CM of Karnataka (@CMofKarnataka) January 17, 2024 " class="align-text-top noRightClick twitterSection" data=" ">

ಸಂಗೊಳ್ಳಿ ರಾಯಣ್ಣ ಉತ್ಸವ : ಕಣ್ಮನ ಸೆಳೆದ ಜಾನಪದ ಕಲಾತಂಡಗಳು- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2024, ಜಾನಪದ ಕಲಾಮೇಳ ಎಲ್ಲರ ಗಮನ ಸೆಳೆಯಿತು.

ಶಾಸಕ ಮಹಾಂತೇಶ ಕೌಜಲಗಿ ಜಾನಪದ ಕಲಾ‌ಮೇಳದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಬ್ರಿಟಿಷರಿಗೆ ಸೆಡ್ಡು ಹೊಡೆದ ಶೂರ ರಾಯಣ್ಣನ ತ್ಯಾಗ ಬಲಿದಾನಗಳನ್ನು ಕಲಾಮೇಳ ನೆನಪಿಸಿತು. ಉತ್ಸವದ ಢಮರುಗಗಳು ಕಿತ್ತೂರು ಇತಿಹಾಸದ ರಣಕಹಳೆ ಮೊಳಗಿಸಿದವು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಡಿಜೆ ಸೌಂಡ್​ಗೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಸುರೇಬಾನ ಕವಿರತ್ನ ಕಾಳಿದಾಸ ಜಗ್ಗಲಗಿ ಮೇಳ, ರಾಮದುರ್ಗ ಶಾಖಾಬರಿ ಮಹಿಳಾ ಗೊಂಬೆ ಕುಣಿತ, ಕೊಣ್ಣೂರ ಬರಮಲಿಂಗೇಶ್ವರ ಮಹಿಳಾ ಡೊಳ್ಳು ಕುಣಿತ, ಗುಂಡೆನಟ್ಟಿ ಬಸವೇಶ್ವರ ಜಗ್ಗಲಗಿ ಮೇಳ, ಕಲ್ಲೋಳಿ ಗೂಳಪ್ಪ ವಿಜಯ ನಗರ ತಂಡದ ವೀರಗಾಸೆ, ಕಲ್ಲೋಳಿ ಮಹಾಂತೇಶ ಹೂಗಾರ ತಂಡದ ಸನಾದಿ ಮೇಳ, ಹಲ್ಯಾಳ ಶಶಿಧರ ಭಜಂತ್ರಿ ತಂಡದ ತಾಸೆ ವಾದನ ಮತ್ತು ಸನಾದಿ ಮೇಳ, ತುಮಕೂರು ಬಾನುಪ್ರಕಾಶ ತಂಡದ ನೀಲು ಕುದುರೆ ಗೊಂಬೆ ಕುಣಿತ, ನಿಟ್ಟೂರ ಸಂಗಮೇಶ ತಂಡದ ನಂದಿಧ್ವಜ, ಕೊಣ್ಣೂರ ಬೀರಲಿಂಗೇಶ್ವರ ತಂಡದ ಡೊಳ್ಳು ಕುಣಿತ, ಹಾಸನ ಸಣ್ಣ ಸ್ವಾಮಿ ಡೊಳ್ಳು ಕುಣಿತ, ದೇವಿರಮ್ಮ ತಂಡದ ಕಂಸಾಳೆ ನೃತ್ಯ, ಸಂಕನಕಟ್ಟಿ ಪರಮಾನಂದ ಕರಡಿಮಜಲು, ಅರಸೀಕೆರೆ ಜಯರಾಮ ತಂಡದ ನಂದಿಧ್ವಜ ಎಲ್ಲರನ್ನು ಆಕರ್ಷಿಸಿದವು.

ಇದನ್ನೂಓದಿ:ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನ ವಿಘ್ಞಗಳು ಆಗದಂತೆ ಬೆಣ್ಣೆನಗರಿಯಲ್ಲಿ ಹೋಮ: ರಾಮತಾರಕ ಮಂತ್ರ ಜಪ

Last Updated : Jan 17, 2024, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.