ETV Bharat / state

ನೀತಿ ಸಂಹಿತೆ ಉಲ್ಲಂಘನೆ ಆರೋಪ: ಸಿಎಂ ಬಿಎಸ್​ವೈಗೆ ಸಮನ್ಸ್ ಜಾರಿ - ಗೋಕಾಕ ಜೆಎಂಎಫ್​ಸಿ ನ್ಯಾಯಾಲಯ ಸಮನ್ಸ್ ಜಾರಿ

ಗೋಕಾಕ್​​ ಉಪಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಆಗಿದ್ದ ರಮೇಶ್ ಜಾರಕಿಹೊಳಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ವೀರಶೈವ ಮತಗಳು ಬೇರೆಡೆ ಚದುರಬಾರದು ಎಂದು ಬಹಿರಂಗ ‌ಸಮಾವೇಶದಲ್ಲಿ ಮತಯಾಚಿಸಿದ್ದರು.

CM BSY
ಸಿಎಂ ಬಿಎಸ್​ವೈ
author img

By

Published : Jul 25, 2020, 11:09 AM IST

ಬೆಳಗಾವಿ: ವೀರಶೈವರ ಹೆಸರಲ್ಲಿ ಮತಯಾಚನೆ ಮಾಡುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೋಕಾಕ್​ ಜೆಎಂಎಫ್​ಸಿ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

Belgaum JMFC court summons
ಸಿಎಂಗೆ ಸಮನ್ಸ್ ನೀಡಿದ ಕೋರ್ಟ್​

ಸೆಪ್ಟೆಂಬರ್ 1 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿಎಂಗೆ ಸಮನ್ಸ್ ನೀಡಲಾಗಿದೆ‌. ಗೋಕಾಕ್​​ ಕ್ಷೇತ್ರಕ್ಕೆ ಉಪಚುನಾವಣೆ ವೇಳೆ, ಬಿಜೆಪಿ ಅಭ್ಯರ್ಥಿ ಆಗಿದ್ದ ರಮೇಶ್ ಜಾರಕಿಹೊಳಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ವೀರಶೈವ ಮತಗಳು ಆ ಕಡೆ, ಈ ಕಡೆ ಆಗಬಾರದು ಎಂದು ಬಹಿರಂಗ ‌ಸಮಾವೇಶದಲ್ಲಿ ಮತಯಾಚಿಸಿದ್ದರು.

ಜಾತಿ ಹೆಸರಲ್ಲಿ ಮತಯಾಚನೆ ಮಾಡಿದ ಆರೋಪದಡಿ ಸಿಎಂ ವಿರುದ್ಧ ಚುನಾವಣೆ ಅಧಿಕಾರಿಗಳು ಗೋಕಾಕ್​​ ನಗರ ಠಾಣೆಯಲ್ಲಿ ನವೆಂಬರ್ 26 ರಂದು ದೂರು ದಾಖಲಿಸಿದ್ದರು. ಪ್ರಕರಣದ ಕುರಿತು ಗೋಕಾಕ್​​ ‌ನಗರ ಪೊಲೀಸರು ‌ನ್ಯಾಯಾಲಯಕ್ಕೆ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೇ ಸೆಪ್ಟೆಂಬರ್ 1 ರಂದು ಕೋರ್ಟ್​ಗೆ ಹಾಜರಾಗುವಂತೆ ನ್ಯಾಯಾಲಯ ಸಿಎಂ ಬಿಎಸ್​ವೈಗೆ ಸಮನ್ಸ್ ಜಾರಿಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.