ETV Bharat / state

ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ: ರೈತರ ಮೊಗದಲ್ಲಿ ಮಂದಹಾಸ

ನೀರಿಲ್ಲದೇ ಒಣ ಹೋಗಿದ್ದ ಬೆಳಗಾವಿ ಸುತ್ತ ಮುತ್ತಲಿನ ರೈತರ ಗದ್ದೆಗಳಲ್ಲಿ ಈಗ ಹಾಯಿಸಿದಲ್ಲೆಲ್ಲ ನೀರು ಕಾಣಿಸುತ್ತಿದೆ. ರೈತರ ಪ್ರಾರ್ಥನೆಗೆ ಕೊನೆಗೂ ವರುಣದೇವ ಕೃಪೆ ತೋರಿದ್ದಾನೆ. ಜಿಲ್ಲೆಯಾದ್ಯಂತ ವಾರದಿಂದ‌ ಉತ್ತಮ ಮಳೆಯಾಗುತ್ತಿದೆ.

heavy Rain
ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ: ರೈತರ ಮೊಗದಲ್ಲಿ ಮಂದಹಾಸ
author img

By

Published : Jul 20, 2023, 6:30 PM IST

Updated : Jul 20, 2023, 7:54 PM IST

ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ: ರೈತರ ಮೊಗದಲ್ಲಿ ಮಂದಹಾಸ

ಬೆಳಗಾವಿ: ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಬೆಳಗಾವಿ ರೈತರು ಕಂಗಾಲಾಗಿದ್ದರು. ಕಳೆದೊಂದು ವಾರದಿಂದ ಸುರಿಯಿತ್ತಿರುವ ಮಳೆಯಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಬಿಟ್ಟು ಬಿಡದೇ ಮಳೆಯಾಗುತ್ತಿರುವುದರಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ನೀರಿಲ್ಲದೇ ಕಮರುತ್ತಿದ್ದ ಭತ್ತದ ಸಸಿಗಳಿಗೆ ಸದ್ಯ ಜೀವ ಕಳೆ ಬಂದಂತಾಗಿದೆ.

ನೀರಿಲ್ಲದೇ ಖಾಲಿ ಖಾಲಿಯಾಗಿದ್ದ ಬೆಳಗಾವಿ ಸುತ್ತಮುತ್ತಲಿನ ರೈತರ ಗದ್ದೆಗಳಲ್ಲಿ ಈಗ ಕಣ್ಣು ಹಾಯಿಸಿದಲ್ಲೆಲ್ಲ ನೀರು ಕಾಣಿಸುತ್ತಿದೆ. ರೈತರ ಪ್ರಾರ್ಥನೆಗೆ ವರುಣ ದೇವ ಕೃಪೆ ತೋರಿದ್ದಾನೆ. ಜಿಲ್ಲೆಯಾದ್ಯಂತ ವಾರದಿಂದ‌ ಬಿಟ್ಟು ಬಿಡದೇ ಮಳೆಯಾಗುತ್ತಿದೆ. ಇದರಿಂದ ಬೆಳಗಾವಿಯ ಜಿಲ್ಲೆಯ ವಡಗಾವಿ, ಶಾಹಪುರ, ಯಳ್ಳೂರ, ಖಾಸಬಾಗ, ಬಸವನಕುಡಚಿ, ನಿಲಜಿ, ಮುತಗಾ, ಉಚಗಾಂವ, ಕಡೋಲಿ, ಜಾಫರವಾಡಿ ಸೇರಿ ಬಹುತೇಕ ಗ್ರಾಮಗಳ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಚುರುಕು ಪಡೆದಿವೆ. ರೈತರು ಮಳೆಯಲ್ಲೇ ಉತ್ಸಾಹದಿಂದ ಕೃಷಿ ಕಾಯಕದಲ್ಲಿ ತೊಡಗಿರುವುದು ಕಂಡುಬರುತ್ತದೆ.

ಮಳೆಯಾದರೆ ಮಾತ್ರ ರೈತರಿಗೆ ಲಾಭ: ಭತ್ತದ ನಾಟಿ ಮಾಡಲು ಶಹಾಪುರದಲ್ಲಿ ಗದ್ದೆ ಹದಗೊಳಿಸುತ್ತಿದ್ದ ರೈತ‌ ರಾಜು ಮರ್ವೆ 'ಈಟಿವಿ ಭಾರತ' ಮಾತನಾಡಿ, ''ಒಳ್ಳೆಯ ಮಳೆ ಆಗುತ್ತಿರುವುದು ಎಲ್ಲ ರೈತರಿಗೆ ಸಮಾಧಾನ ತಂದಿದೆ. ಹೋದ ವರ್ಷ ಈ ದಿನಕ್ಕೆ ಒಂದೂವರೆ ಅಡಿಯಷ್ಟು ಭತ್ತದ ಬೆಳೆದಿತ್ತು. ಆದರೆ, ಈ ಬಾರಿ‌‌ ಮಳೆ‌ ಕೊರತೆಯಿಂದ ಒಂದು ಅಡಿಯಷ್ಟು ಬೆಳೆ ಬಂದಿಲ್ಲ. ಮಳೆ ಬಂದರೆ ಮಾತ್ರ ರೈತರಿಗೆ ಲಾಭ ಆಗುತ್ತದೆ'' ಎನ್ನುತ್ತಾರೆ ಅವರು.

ಬಳ್ಳಾರಿ ನಾಲಾ ಅಭಿವೃದ್ಧಿಗೆ ಕ್ರಮವಹಿಸಿ: ''ಇಲ್ಲಿಯೇ ಪಕ್ಕದಲ್ಲಿರುವ ಬಳ್ಳಾರಿ‌ ನಾಲಾ ಸ್ವಚ್ಛಗೊಳಿಸುವಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದು, ಹೋರಾಟ ಕೂಡ ಮಾಡಿದ್ದೇವೆ. ಹಿಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಬಳ್ಳಾರಿ ನಾಲಾ ಅಭಿವೃದ್ಧಿಗೆ 800 ಕೋಟಿ ರೂ. ಕೊಡುತ್ತೇವೆಂದು ಭರವಸೆ ಕೊಟ್ಟಿದ್ದರು. ಆದರೆ, ವಾಸ್ತವದಲ್ಲಿ 8 ರೂ. ಕೂಡ ನೀಡಲಿಲ್ಲ‌. ಒಂದೇ ವಾರದ ಮಳೆಗೆ ಇಷ್ಟೊಂದು ಪ್ರಮಾಣದಲ್ಲಿ ನೀರು ನಿಂತಿದೆ. ಇದೇ ರೀತಿ ಕೆಲವು ದಿನಗಳವರೆಗೆ ಮಳೆ ಮುಂದುವರಿದರೆ ನೀರು ನಿಂತು ಬೆಳೆ ಹಾನಿ ಆಗುವ ಭೀತಿಯಿದೆ. ಹಾಗಾಗಿ ಈ‌ ನಾಲಾ ಸ್ವಚ್ಛಗೊಳಿಸುವ ಕೆಲಸ ಮಾಡಬೇಕು'' ಎಂದು ರೈತ ರಾಜು ಮರ್ವೆ ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಖಾಸಬಾಗದ ರೈತ ನಾರಾಯಣ ಲಾಡ, ''ಉತ್ತಮ ಮಳೆ ಏನೋ ಆಗುತ್ತಿದೆ. ಆದರೆ, ನೀರು ಹೋಗಲು ದಾರಿ ಇಲ್ಲದೇ ಅಪಾರ ಪ್ರಮಾಣದ ನೀರು ಗದ್ದೆಯಲ್ಲಿ ನಿಂತಿದೆ. ಬಹಳ‌ ಮಳೆಯಾದರೆ ಸುಮಾರು ಐದು ಅಡಿಯಷ್ಟು ನೀರು ಗದ್ದೆಯಲ್ಲಿ ನಿಂತಿರುವ ಉದಾಹರಣೆಯಿದೆ. ಪ್ರತಿವರ್ಷ ಬಳ್ಳಾರಿ ನಾಲಾದಿಂದ ನಮಗೆ ಸಮಸ್ಯೆ ತಪ್ಪುತ್ತಿಲ್ಲ'' ಎಂದರು.

ಯಳ್ಳೂರ ರೈತ ರಮೇಶ ಮಾತನಾಡಿ, ''ಮುಂಗಾರು ಮಳೆ ಆರಂಭವಾಗದೇ ಇರುವುದು ನಮ್ಮನ್ನು ಬಹಳ ಚಿಂತೆಗೀಡಾಗಿತ್ತು. ಈಗ ಮಳೆ ಶುರುವಾಗಿದೆ. ಜಮೀನಿನಲ್ಲಿ ಭತ್ತ ನಾಟಿ ಮಾಡಬೇಕಾದರೆ, ಮತ್ತಷ್ಟು ಮಳೆಯಾಗಬೇಕಾಗುತ್ತದೆ'' ಎಂದು ತಿಳಿಸಿದರು.

''ಮಳೆ ಆಗುತ್ತಿರುವುದು ಅನುಕೂಲವಾಗಿದೆ. ಆದರೆ, ಇದೇ ರೀತಿ ಮಳೆ ಮುಂದುವರಿದರೆ ಒಣ ಭೂಮಿಯಲ್ಲಿ ಬಿತ್ತಿರುವ ಭತ್ತ ಬೀಜ ನೀರಿನಲ್ಲಿ ಕೊಳೆತು ಹಾನಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಬಳ್ಳಾರಿ ನಾಲಾದಿಂದ ಆಗುವ ಅವಾಂತರದಿಂದ ಸರ್ಕಾರ ನಮ್ಮನ್ನು ಪಾರು ಮಾಡಬೇಕು'' ಎಂದು ವಡಗಾವಿ ರೈತ ಜಯವಂತ ಮೋರೆ ಕೇಳಿಕೊಂಡರು. ಒಂದೆಡೆ ಮಳೆಯಿಂದ ರೈತರು ಖುಷಿಯಾಗಿದ್ದರೆ, ಮತ್ತೊಂದೆಡೆ ಇದೇ ರೀತಿ ವರುಣನ ಆರ್ಭಟ ಮುಂದುವರಿದರೆ ಬೆಳೆ ಹಾನಿ ಭೀತಿಯೂ ಇಲ್ಲಿನ ರೈತರನ್ನು ಕಾಡುತ್ತಿದೆ.

ಇದನ್ನೂ ಓದಿ: Heavy rain: ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ.. ಚಿಕ್ಕೋಡಿಯ ಹಲವು ಸೇತುವೆಗಳು ಜಲಾವೃತ

Last Updated : Jul 20, 2023, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.