ಬೆಳಗಾವಿ: ಸಿಕ್ಕಿಬಿದ್ದ ನಕಲಿ ವೈದ್ಯ, ಇವನ ಹತ್ರ ಬರ್ತಿದ್ರಂತೆ ದಿನಕ್ಕೆ 50 ರೋಗಿಗಳು - Belgaum
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಕಲಿ ವೈದ್ಯನೊಬ್ಬ ಕ್ಲಿನಿಕ್ ನಡೆಸುತ್ತಿದ್ದ. ದಿನಕ್ಕೆ ಸುಮಾರು 50 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎನ್ನಲಾಗುತ್ತಿದೆ. ದೂರಿನ ಅನ್ವಯ ತಾಲೂಕು ವೈದ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ.

ಕೆಪಿಎಂಇ ನಿಯಮಾನುಸಾರ ಸಿಟಿ ಹೆಲ್ತ್ ಕ್ಲಿನಿಕ್ ಸೀಜ್
ಬೆಳಗಾವಿ: ಜಿಲ್ಲೆಯ ಗೋಕಾಕ್ ನಗರದಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ, ನಕಲಿ ವೈದ್ಯ ಅಬ್ದುಲ್ ರಶೀದ್ ಮಕಾಂದಾರ್ ಎಂಬುವರ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.
ನಕಲಿ ವೈದ್ಯ ನಡೆಸುತ್ತಿದ್ದ ಕ್ಲಿನಿಕ್ ಮೇಲೆ ದಾಳಿ
ಸೂಕ್ತ ದಾಖಲೆಗಳು ಇಲ್ಲದಿರುವ ಹಿನ್ನೆಲೆ ಕ್ಲಿನಿಕ್ ಸೀಜ್ ಮಾಡಿದ್ದಾರೆ. ನಕಲಿ ವೈದ್ಯ ಹಲವು ವರ್ಷಗಳಿಂದ ಯಾವುದೇ ಪದವಿ ಇಲ್ಲದೆ ಕ್ಲಿನಿಕ್ ಇಟ್ಟುಕೊಂಡು, ಸಾರ್ವಜನಿಕರನ್ನು ಯಾಮಾರಿಸುತ್ತಿದ್ದ. ಈತ ದಿನಕ್ಕೆ ಸುಮಾರು 50 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎನ್ನಲಾಗುತ್ತಿದೆ.
ದೂರಿನ ಅನ್ವಯ ಸಿಟಿ ಹೆಲ್ತ್ ಕ್ಲಿನಿಕ್ ಸೆಂಟರ್ ಮೇಲೆ ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ್ ಕೆ. ಜಿಂಗಿ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಸೂಕ್ತ ದಾಖಲೆಗಳು ಇರದ ಹಿನ್ನೆಲೆ ಕೆಪಿಎಂಇ ನಿಯಮಾನುಸಾರ ಸಿಟಿ ಹೆಲ್ತ್ ಕ್ಲಿನಿಕ್ ಸೀಜ್ ಮಾಡಲಾಗಿದೆ.